Advertisement
ಫ್ಲೋರಿಡಾದ ಕೇಪ್ ಕೆನಾವೆರಾಲ್ ಉಡಾವಣ ಕೇಂದ್ರದಿಂದ ಸುನೀತಾ, ಬುಚ್ ವಿಲ್‌ಮೋರ್ ಎಂಬ ಗಗನಯಾನಿಗಳನ್ನು ಹೊತ್ತು ಸ್ಟಾರ್‌ಲೈನರ್ ಸ್ಪೇಸ್‌ಕ್ರಾಫ್ಟ್ ನಭಕ್ಕೆ ಚಿಮ್ಮಲಿದ್ದು, ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರತಲುಪಲಿದೆ. ಇದು ಮಾನವ ಸಹಿತ ಗಗನಯಾನ ಕೈಗೊಳ್ಳಬಲ್ಲ ಬೋಯಿಂಗ್‌ನ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿ ಸಲಿದೆ ಎಂದು ಸಂಸ್ಥೆ ಹೇಳಿದೆ.
ಸುನೀತಾ ತಮ್ಮ ಜತೆಗೆ ಗಣೇಶನ ಮೂರ್ತಿಯನ್ನು ಕೊಂಡೊ ಯ್ಯಲಿದ್ದಾರೆ. ಸುದ್ದಿ ವಾಹಿನಿ ಯೊಂದಿಗಿನ ಸಂದರ್ಶನ ದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ. ಧಾರ್ಮಿಕತೆ ಗಿಂತ ಹೆಚ್ಚು ಆಧ್ಯಾತ್ಮಿಕೆ ಯನ್ನು ನಂಬುತ್ತೇನೆ. ಗಣಪತಿ ವಿಗ್ರಹ ನನಗೆ ಅದೃಷ್ಟದ ಸಂಕೇತ. ಇದನ್ನು ಈ ಬಾರಿ ನನ್ನೊಂದಿಗೆ ಕೊಂಡೊಯ್ಯುತ್ತಿದ್ದೇನೆ. ಹಿಂದಿನ ಬಾರಿ ಭಗವದ್ಗೀತೆ ಕೊಂಡೊಯ್ದಿದ್ದೆ ಎಂದು ಹೇಳಿದ್ದಾರೆ.