Advertisement

ದುಲೀಪ್‌ ಟ್ರೋಫಿ: ಇಂಡಿಯಾ ಬ್ಲೂ ಚಾಂಪಿಯನ್‌

09:59 AM Sep 08, 2018 | |

ದಿಂಡಿಗಲ್‌: ನಿರೀಕ್ಷೆಯಂತೆ ಫ‌ಯಾಜ್‌ ಫ‌ಜಲ್‌ ನೇತೃತ್ವದ ಇಂಡಿಯಾ ಬ್ಲೂ ತಂಡ “ದುಲೀಪ್‌ ಟ್ರೋಫಿ’ ಕ್ರಿಕೆಟ್‌ ಚಾಂಪಿಯನ್‌ ಆಗಿ ಮೂಡಿಬಂದಿದೆ. ಪಂದ್ಯದ ಅಂತಿಮ ದಿನವಾದ ಶುಕ್ರವಾರ ಅದು ಅಭಿನವ್‌ ಮುಕುಂದ್‌ ನಾಯಕತ್ವದ ಇಂಡಿಯಾ ರೆಡ್‌ ತಂಡವನ್ನು ಇನ್ನಿಂಗ್ಸ್‌ ಹಾಗೂ 187 ರನ್ನುಗಳ ಭಾರೀ ಅಂತರದಿಂದ ಮಣಿಸಿತು.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಇಂಡಿಯಾ ಬ್ಲೂ ತಂಡ 541 ರನ್‌ ಪೇರಿಸಿತ್ತು. ಜವಾಬು ನೀಡತೊಡಗಿದ ಇಂಡಿಯಾ ರೆಡ್‌ 182 ರನ್ನಿಗೆ ಆಲೌಟ್‌ ಆಗಿ ಫಾಲೋಆನ್‌ಗೆ ತುತ್ತಾಯಿತು. ದ್ವಿತೀಯ ಇನ್ನಿಂಗ್ಸ್‌ನಲ್ಲೂ ರೆಡ್‌ ತಂಡದ ಬ್ಯಾಟಿಂಗ್‌ ಚೇತರಿಸಿಕೊಳ್ಳಲಿಲ್ಲ. 3ನೇ ದಿನವಾದ ಗುರುವಾರ 5 ವಿಕೆಟಿಗೆ 128 ರನ್‌ ಗಳಿಸಿ ಭಾರೀ ಸೋಲಿನ ಸೂಚನೆ ನೀಡಿದ್ದ ಮುಕುಂದ್‌ ಪಡೆ, ಶುಕ್ರವಾರ ಬ್ಯಾಟಿಂಗ್‌ ಮುಂದುವರಿಸಿ 172ಕ್ಕೆ ಆಲೌಟ್‌ ಆಯಿತು. 

Advertisement

Udayavani is now on Telegram. Click here to join our channel and stay updated with the latest news.

Next