Advertisement

ಏಶ್ಯನ್‌ ಸ್ಕ್ವಾ ಷ್‌: ಪಾಕಿಸ್ಥಾನವನ್ನು 2-1ರಿಂದ ಮಣಿಸಿದ ಭಾರತ

11:03 PM Dec 01, 2021 | Team Udayavani |

ಕೌಲಾಲಂಪುರ: ಏಶ್ಯನ್‌ ಟೀಮ್‌ ಸ್ಕ್ವಾಷ್‌ ಚಾಂಪಿಯನ್‌ಶಿಪ್‌ನಲ್ಲಿ ಪಾಕಿಸ್ಥಾನವನ್ನು 2-1 ಅಂತರದಿಂದ ಮಣಿಸಿದ ಭಾರತ “ಎ’ ವಿಭಾಗದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

Advertisement

1-1 ಸಮಬಲದ ಬಳಿಕ ಸೌರವ್‌ ಘೋಷಾಲ್‌ 9-11, 7-11, 11-1, 11-7, 11-8ರಿಂದ ತಯ್ಯಬ್‌ ಅಸ್ಲಾಮ್‌ ಅವರನ್ನು ಮಣಿಸಿ ಭಾರತದ ಗೆಲುವು ಸಾರಿದರು.

ಮೊದಲೆರಡು ಗೇಮ್‌ ಸೋತ ಬಳಿಕವೂ ಸೌರವ್‌ ತಿರುಗಿ ಬಿದ್ದು ಗೆದ್ದ ರೀತಿ ಅಮೋಘವಾಗಿತ್ತು. ಇದಕ್ಕೂ ಮುನ್ನ ರಮಿತ್‌ ಟಂಡನ್‌ 11-5, 11-9, 14-12 ಅಂತರದಿಂದ ಮುಹಮ್ಮದ್‌ ಆಸಿಮ್‌ ಖಾನ್‌ ಅವರಿಗೆ ಸೋಲುಣಿಸಿ ಭಾರತಕ್ಕೆ ಮುನ್ನಡೆ ಒದಗಿಸಿದ್ದರು.

ಇದನ್ನೂ ಓದಿ:ವೃದ್ಧರೇ ಅಂತರಾಷ್ಟ್ರೀಯ ಪ್ರಯಾಣ ಮುಂದೂಡಿ : ವಿಶ್ವ ಆರೋಗ್ಯ ಸಂಸ್ಥೆಯಿಂದಲೇ ಎಚ್ಚರಿಕೆ

ಆದರೆ ದ್ವಿತೀಯ ಪಂದ್ಯದಲ್ಲಿ ಮಹೇಶ್‌ ಮಂಗಾಂವ್ಕರ್‌ 11-9, 11-13, 8-11, 7-11ರಿಂದ ನಾಸಿರ್‌ ಇಕ್ಬಾಲ್‌ಗೆ ಶರಣಾಗುವುದರೊಂದಿಗೆ ಹೋರಾಟ ಸಮಬಲಕ್ಕೆ ಬಂದಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next