Advertisement

ಟೋಕಿಯೊ ಒಲಿಂಪಿಕ್ಸ್: ಸ್ಪೇನ್ ವಿರುದ್ಧ 3-0 ಅಂತರದಿಂದ ಗೆದ್ದ ಭಾರತ ತಂಡ

09:04 AM Jul 27, 2021 | Team Udayavani |

ಟೋಕಿಯೊ: ಒಲಿಂಪಿಕ್ಸ್ ನ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರೀ ಅಂತರದಿಂದ ಸೋಲನುಭವಿಸಿದ್ದ ಭಾರತೀಯ ಹಾಕಿ ತಂಡ ಮೂರನೇ ಪಂದ್ಯದಲ್ಲಿ ಕಮ್ ಬ್ಯಾಕ್ ಮಾಡಿದೆ. ಸ್ಪೇನ್ ವಿರುದ್ಧ ನಡೆದ ಪಂದ್ಯದಲ್ಲಿ 3-0 ಅಂತರದಿಂದ ಭಾರತೀಯ ಹುಡುಗರು ಜಯ ಸಾಧಿಸಿದ್ದಾರೆ.

Advertisement

ಸ್ಪೇನ್ ತಂಡ ಆರಂಭದಿಂದಲೇ ಆಕ್ರಮಣಕಾರಿಯಾಗಿ ಆಡಿತು. ಆದರೆ ಪ್ರತಿ ಆಕ್ರಮಣ ತಂತ್ರಕ್ಕೆ ಮೊರೆ ಹೋದ ಭಾರತ ಯಶಸ್ಸು ಪಡೆಯಿತು. ಸಿಮ್ರನ್ ಜೀತ್ ಸಿಂಗ್ 14ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿದರು. ಪೆನಾಲ್ಟಿ ಅವಕಾಶವನ್ನು ಉಪಯೋಗಿಸಿಕೊಂಡ ರೂಪಿಂದರ್ ಪಾಲ್ ಸಿಂಗ್ ಎರಡನೇ ಗೋಲು ಬಾರಿಸಿದರು.

ಇದನ್ನೂ ಓದಿ:ಹಾಕಿ: ವನಿತೆಯರಿಗೆ ಮತ್ತೂಂದು ಆಘಾತ

ಎರಡನೇ ಅವಧಿಯಲ್ಲಿ ಸ್ಪೇನ್ ಮತ್ತಷ್ಟು ಆಕ್ರಮಣಕಾರಿ ಆಡಿತು. ಆದರೆ ಭಾರತೀಯರು ಅವರಿಗೆ ಒಂದೇ ಒಂದು ಗೋಲು ಬಾರಿಸಲು ಅವಕಾಶ ನೀಡಲಿಲ್ಲ. ಕೊನೆಯ ಘಳಿಗೆಯಲ್ಲಿ ರೂಪಿಂದರ್ ಪಾಲ್ ಮತ್ತೊಂದು ಗೋಲು ಬಾರಿಸಿ ಭಾರತಕ್ಕೆ ಮುನ್ನಡೆ ಹೆಚ್ಚಿಸಿದರು. ಇದರಿಂದ ಭಾರತ ಗೆಲುವು ಸಾಧಿಸಿತು.

Advertisement

Udayavani is now on Telegram. Click here to join our channel and stay updated with the latest news.

Next