Advertisement

ಧವನ್ – ರೋಹಿತ್ ಶತಕದಾಟಕ್ಕೆ ಪಾಕ್ ಕಂಗಾಲು

11:56 PM Sep 23, 2018 | Team Udayavani |

ದುಬೈ: ಏಷಿಯಾ ಕಪ್ ಕ್ರೀಡಾಕೂಟದ ‘ಸೂಪರ್ ಫೋರ್’ ಹಣಾಹಣಿಯ ಭಾರತ-ಪಾಕಿಸ್ಥಾನ ನಡುವಿನ ಹೈವೋಲ್ಟೇಜ್ ಹಣಾಹಣಿಯಲ್ಲಿ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನವನ್ನು 9 ವಿಕೆಟ್ ಗಳಿಂದ ಭರ್ಜರಿಯಾಗಿ ಮಣಿಸಿದ ಟೀಂ ಇಂಡಿಯಾ ಈ ಕೂಟದ ಫೈನಲ್ ಗೆ ಲಗ್ಗೆಯಿಟ್ಟಿದೆ. ಈ ಟೂರ್ನಿಯಲ್ಲಿ ಪಾಕಿಸ್ಥಾನಕ್ಕೆ ಭಾರತ ಎದುರು ಇದು ಎರಡನೇ ಸೋಲಾಗಿದೆ. ​​​​​​ ಇದು ವಿಕೆಟುಗಳ ಅಂತರದಲ್ಲಿ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ದಾಖಲಿಸಿದ ಅತಿ ದೊಡ್ಡ ಗೆಲುವಾಗಿದೆ.

Advertisement

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ಥಾನವು ನಿಗದಿತ 50 ಓವರುಗಳಲ್ಲಿ 7 ವಿಕೆಟುಗಳನ್ನು ಕಳೆದುಕೊಂಡು 237 ರನ್ನುಗಳ ಸಾಧಾರಣ ಮೊತ್ತವನ್ನು ಪೇರಿಸಿತು. ಈ ಮೊತ್ತವನ್ನು ಬೆನ್ನಟ್ಟಲಾರಂಭಿಸಿದ ಭಾರತ ತಂಡವು ಆರಂಭಿಕ ಆಟಗಾರರ ಭರ್ಜರಿ ಶತಕದಾಟದ ನೆರವಿನಿಂದ ಅಂತಿಮವಾಗಿ ಇನ್ನು 63 ಎಸೆತಗಳು ಬಾಕಿ ಉಳಿದಿರುವಂತೆಯೇ​​​​​​​ 39.3 ಓವರುಗಳಲ್ಲಿ ಗುರಿ ತಲುಪುವ ಮೂಲಕ ಅಧಿಕಾರಯುತ ಜಯವನ್ನು ತನ್ನದಾಗಿಸಿಕೊಂಡಿತು. ಕೊನೆಯ ವರೆಗೂ ಅಜೇಯರಾಗುಳಿದ ರೋಹಿತ್ 119 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳ ನೆರವಿನಿಂದ 111 ರನ್ ಗಳಿಸಿದರು. ಹಾಗೆಯೇ ಅಂಬಟಿ ರಾಯುಡು 12 ರನ್ ಗಳಿಸಿ ಔಟಾಗದೆ ಉಳಿದರು.​​​​​​​​ ಈ ಜಯದೊಂದಿಗೆ ‘ಸೂಪರ್ ಫೋರ್’ ಮುಖಾಮುಖಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇರುತ್ತಲೇ ಭಾರತವು ಏಷ್ಯಾ ಕಪ್ ಫೈನಲ್ ಗೆ ಲಗ್ಗೆಯಿಟ್ಟಿದೆ. ಭಾರತ ಈ ಕೂಟದಲ್ಲಿ ತನ್ನ ಅಂತಿಮ ಪಂದ್ಯವನ್ನು ಅಫ್ಘಾನಿಸ್ಥಾನ ವಿರುದ್ಧ ಆಡಲಿದೆ.​​​​​​​ ಸೆಪ್ಟಂಬರ್ 28ರ ಶುಕ್ರವಾರ ನಡೆಯುವ ಫೈನಲ್ ನಲ್ಲಿ ಮತ್ತೆ ಪಾಕಿಸ್ಥಾನವೇ ಭಾರತದ ಎದುರಾಳಿಯಾಗಬಹುದೇ ಎಂಬ ಕುತೂಹಲ ಕ್ರಿಕೆಟ್ ಪ್ರೇಮಿಗಳದ್ದಾಗಿದೆ. 

ಆರಂಭಿಕರ ಅಬ್ಬರಕ್ಕೆ ಪಾಕ್ ಕಂಗಾಲು


ಆರಂಭಿಕ ಆಟಗಾರರಾದ ಶಿಖರ್ ಧವನ್ (114) ಮತ್ತು ಕಪ್ತಾನ ರೋಹಿತ್ ಶರ್ಮಾ (111 Not Out) ಅವರ ಸೊಗಸಾದ ಶತಕದಾಟವು ಭಾರತದ ಗೆಲುವನ್ನು ಸುಲಭಗೊಳಿಸಿತು. ಭಾರತಕ್ಕೆ ಗೆಲ್ಲಲು 28 ರನ್ನುಗಳ ಅಗತ್ಯವಿದ್ದಾಗ ಶತಕವೀರ ಶಿಖರ್ ಧವನ್ ಅವರು ನಾನ್ ಸ್ಟ್ರೈಕರ್ ಕಡೆಯಿಂದ ಇಲ್ಲದ ರನ್ನೊಂದನ್ನು ತೆಗೆಯಲು ಓಡಿ ರನೌಟ್ ಆಗಿ ನಿರ್ಗಮಿಸಬೇಕಾಯಿತು. ಇದರಿಂದಾಗಿ ತನ್ನ ಸಾಂಪ್ರದಾಯಿಕ ಎದುರಾಳಿಯ ವಿರುದ್ಧ 10 ವಿಕೆಟ್ ಗಳ ಭರ್ಜರಿ ಜಯ ದಾಖಲಿಸುವ ಅಪೂರ್ವ ಅವಕಾಶದಿಂದ ಭಾರತ ವಂಚಿತವಾದಂತಾಯಿತು. ಧವನ್ ಮತ್ತು ರೋಹಿತ್ ಜೋಡಿ ಬರೋಬ್ಬರಿ 210 ರನ್ನುಗಳ ಅಪೂರ್ವ ಜೊತೆಯಾಟವನ್ನು ದಾಖಲಿಸಿತು. ಈ ಭರ್ಜರಿ ಜೊತೆಯಾಟದಲ್ಲಿ ಒಟ್ಟು 5 ಸಿಕ್ಸರ್ ಮತ್ತು 23 ಬೌಂಡರಿಗಳು ದಾಖಲಾಗಿದ್ದವು.

ಕಪ್ತಾನನ ಆಟವಾಡಿದ ರೋಹಿತ್ ಶರ್ಮಾ ಅವರು 111 ರನ್ನುಗಳನ್ನು ಗಳಿಸಿ ಅಜೇಯರಾಗಿ ಉಳಿದರು. ಇವರ ಈ ಮ್ಯಾರಥಾನ್ ಇನ್ನಿಂಗ್ಸ್ ನಲ್ಲಿ 7 ಬೌಂಡರಿ ಮತ್ತು 4 ಸಿಕ್ಸರ್ ಗಳು ಒಳಗೊಂಡಿದ್ದವು. ಇದೇ ಸಂದರ್ಭದಲ್ಲಿ ರೋಹಿತ್ ಶರ್ಮಾ ಅವರು ಏಕದಿನ ಕ್ರಿಕೆಟ್ ನಲ್ಲಿ 7000 ರನ್ನುಗಳನ್ನು ದಾಖಲಿಸಿದ ಸಾಧಕನಾಗಿ ಮೂಡಿಬಂದರು. ಇದು ಏಕದಿನದಲ್ಲಿ ರೋಹಿತ್ ಬ್ಯಾಟ್‌ನಿಂದ ಸಿಡಿದ 19ನೇ ಶತಕವಾಗಿದೆ. ​​​​​​​

ಪಾಕ್ ವಿರುದ್ಧ ಟೀಂ ಇಂಡಿಯಾ ಗೆಲುವಿಗೆ 238 ರನ್ನುಗಳ ಗುರಿ
ದುಬೈ:
ಏಷಿಯಾ ಕಪ್ ಕ್ರೀಡಾಕೂಟದ ‘ಸೂಪರ್ ಫೋರ್’ ಹಣಾಹಣಿಯ ಭಾರತ-ಪಾಕಿಸ್ಥಾನ ನಡುವಿನ ಹೈವೋಲ್ಟೇಜ್ ಹಣಾಹಣಿಯಲ್ಲಿ ಭಾರತ ತಂಡದ ಗೆಲುವಿಗೆ 238 ರನ್ನುಗಳ ಗುರಿ ನಿಗದಿಯಾಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ಥಾನ ನಿಗದಿತ 50 ಓವರುಗಳಲ್ಲಿ 7 ವಿಕೆಟ್ ಗಳ ನಷ್ಟಕ್ಕೆ 237 ರನ್ನುಗಳನ್ನು ಕಲೆಹಾಕಿತು.

Advertisement


ಭಾರತ್ ಬಿಗು ಬೌಲಿಂಗ್ ಮತ್ತು ಶಿಸ್ತಿನ ಫೀಲ್ಡಿಂಗ್ ಎದುರು ರನ್ ಗಳಿಸಲು ಪಾಕಿಸ್ಥಾನ ಬ್ಯಾಟ್ಸ್ ಮನ್ ಗಳು ಪರದಾಡಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಪಾಕ್ ಕಪ್ತಾನ ಸರ್ಫರಾಜ್ ಅಹಮ್ಮದ್ (44) ಮತ್ತು ಅನುಭವಿ ಆಟಗಾರ ಶೋಯಬ್ ಮಲಿಕ್ (78) ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಪಾಕಿಸ್ಥಾನ ಗೌರವಯುತ ಮೊತ್ತವನ್ನು ಪೇರಿಸುವಂತಾಯಿತು. ಉಳಿದಂತೆ ಪಾಕಿಸ್ಥಾನ ಪರ ಫಖಾರ್ ಝಮಾನ್ (31), ಆಸಿಫ್ ಅಲಿ (30) ಮಾತ್ರವೇ ಉತ್ತಮ ಆಟವಾಡಿದರು.

ಭಾರತದ ಪರ ಸ್ಪಿನ್ನರ್ ಗಳಾದ ಚಾಹಾಲ್ ಮತ್ತು ಕುಲದೀಪ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ತಲಾ 2 ವಿಕೆಟ್ ಗಳನ್ನು ಪಡೆದರು. ಇನ್ನೊಂದು ವಿಕೆಟ್ ರನೌಟ್ ರೂಪದಲ್ಲಿ ಬಂತು.



​​​​​​​

Advertisement

Udayavani is now on Telegram. Click here to join our channel and stay updated with the latest news.

Next