Advertisement
ಮೆಲ್ಬರ್ನ್ನ “ಜಂಕ್ಷನ್ ಓವಲ್’ನಲ್ಲಿ ಮೊದಲು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ 6 ವಿಕೆಟಿಗೆ ಕೇವಲ 123 ರನ್ ಗಳಿಸಿದರೆ, ಇಂಗ್ಲೆಂಡ್ 19 ಓವರ್‌ಗಳಲ್ಲಿ 6 ವಿಕೆಟಿಗೆ 124 ರನ್ ಹೊಡೆದು ಗೆದ್ದು ಬಂದಿತು. ಶನಿವಾರ ಭಾರತ ಆತಿಥೇಯ ಆಸ್ಟ್ರೇಲಿಯವನ್ನು ಎದುರಿಸಲಿದೆ. ಫೈನಲ್ ಪ್ರವೇಶಿಸಲು ಹರ್ಮನ್‌ಪ್ರೀತ್ ಪಡೆಗೆ ಇಲ್ಲಿ ಗೆಲುವು ಅನಿವಾರ್ಯ.
ಭಾರತದ ಪರ ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ ಮತ್ತು ವನ್‌ಡೌನ್‌ನಲ್ಲಿ ಬಂದ ಜೆಮಿಮಾ ರೋಡ್ರಿಗಸ್ ಮಾತ್ರ ಇಂಗ್ಲೆಂಡ್ ದಾಳಿಯನ್ನು ತಡೆದು ನಿಂತರು. 10ನೇ ಓವರ್ ತನಕ ಕ್ರೀಸ್‌ನಲ್ಲಿ ಉಳಿದ ಮಂಧನಾ ಆಕ್ರಮಣಕಾರಿಯಾಗಿ ಆಡಿ 40 ಎಸೆತಗಳಿಂದ 45 ರನ್ ಬಾರಿಸಿದರು. ಇದರಲ್ಲಿ 7 ಬೌಂಡರಿ ಹಾಗೂ ಇನ್ನಿಂಗ್ಸಿನ ಏಕೈಕ ಸಿಕ್ಸರ್ ಸೇರಿತ್ತು. ಜೆಮಿಮಾ 20 ಎಸೆತಗಳಿಂದ 23 ರನ್ ಮಾಡಿದರು (3 ಬೌಂಡರಿ). ಎರಡಂಕೆಯ ಗಡಿ ದಾಟಿದ ಮತ್ತೋರ್ವ ಆಟಗಾರ್ತಿ ನಾಯಕಿ ಹರ್ಮನ್‌ಪ್ರೀತ್ ಕೌರ್ (14). ಶಫಾಲಿ ವರ್ಮ (8), ವೇದಾ ಕೃಷ್ಣಮೂರ್ತಿ (2), ತನಿಯಾ ಭಾಟಿಯ (8) ವೈಫಲ್ಯ ಅನುಭವಿಸಿದರು. ಅನ್ಯಾ ಶ್ರಬೊÕàಲ್ (31ಕ್ಕೆ 3), ಕ್ಯಾಥರಿನ್ ಬ್ರಂಟ್ (23ಕ್ಕೆ 2) ಭಾರತವನ್ನು ಕಾಡಿದರು.
Related Articles
ಚೇಸಿಂಗ್ ವೇಳೆ ಇಂಗ್ಲೆಂಡ್ 28ಕ್ಕೆ 3 ವಿಕೆಟ್ ಕಳೆದುಕೊಂಡಿತಾದರೂ ನಥಾಲಿ ಶೀವರ್ ಅರ್ಧ ಶತಕದ ಮೂಲಕ ತಂಡಕ್ಕೆ ಆಸರೆಯಾದರು (38 ಎಸೆತ, 50 ರನ್, 6 ಬೌಂಡರಿ, 1 ಸಿಕ್ಸರ್). ನಾಯಕಿ ಹೀತರ್ ನೈಟ್ 18, ಫ್ರಾನ್ ವಿಲ್ಸನ್ ಔಟಾಗದೆ 20 ರನ್ ಮಾಡಿದರು.
Advertisement
ಸಂಕ್ಷಿಪ್ತ ಸ್ಕೋರ್ಭಾರತ-6 ವಿಕೆಟಿಗೆ 123 (ಮಂಧನಾ 45, ಜೆಮಿಮಾ 23, ಶ್ರಬೊÕàಲ್ 31ಕ್ಕೆ 3, ಬ್ರಂಟ್ 23ಕ್ಕೆ 2). ಇಂಗ್ಲೆಂಡ್-19 ಓವರ್‌ಗಳಲ್ಲಿ 6 ವಿಕೆಟಿಗೆ 124 (ಶೀವರ್ 50, ಫ್ರಾನ್ ಔಟಾಗದೆ 20, ನೈಟ್ 18, ರಾಜೇಶ್ವರಿ 23ಕ್ಕೆ 3).