Advertisement

ಮಾ.18ಕ್ಕೆ ಭಾರತ-ಬಾಂಗ್ಲಾ ತೈಲ ಪೈಪ್‌ಲೈನ್‌ ಉದ್ಘಾಟನೆ

09:32 PM Mar 10, 2023 | Team Udayavani |

ಢಾಕಾ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಗಡಿಯಾಚೆಗಿನ ಕಚ್ಚಾ ತೈಲ ಪೈಪ್‌ಲೈನ್‌ ಅನ್ನು ಮಾ.18ರಂದು ವರ್ಚುಯಲ್‌ ವ್ಯವಸ್ಥೆ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ಉದ್ಘಾಟಿಸಲಿದ್ದಾರೆ.

Advertisement

ಈ ಕುರಿತು ಮಾಹಿತಿ ನೀಡಿದ ಬಾಂಗ್ಲಾ ವಿದೇಶಾಂಗ ಸಚಿವ ಡಾ.ಎ.ಕೆ.ಅಬ್ದುಲ್‌ ಮೊಮೆನ್‌, “346 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ 130 ಕಿ.ಮೀ. ಉದ್ದದ ಭಾರತ-ಬಾಂಗ್ಲಾದೇಶ ಫ್ರೆಂಡ್‌ಶಿಪ್‌ ಪೈಪ್‌ಲೈನ್‌(ಐಬಿಎಫ್ಪಿ) ಅನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ಉಭಯ ದೇಶಗಳ ಪ್ರಧಾನಿಗಳು ಉದ್ಘಾಟಿಸಲಿದ್ದಾರೆ. ಭಾರತದಿಂದ ಪೈಪ್‌ಲೈನ್‌ ಮೂಲಕ ಬಾಂಗ್ಲಾಗೆ ಡೀಸೆಲ್‌ ರವಾನೆಯಾಗಲಿದೆ’ ಎಂದು ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next