ಸಿಡ್ನಿ: ಇಡೀ ಜಗತ್ತು ಕಾತರದಿಂದ ಕಾಯುಚ ಟೆಸ್ಟ್ ಸರಣಿಗಳಲ್ಲಿ ಇಂಡಿಯಾ- ಆಸೀಸ್ ಸರಣಿಯೂ ಒಂದು. ಅದರಲ್ಲೂ ಆಸೀಸ್ ನೆಲದಲ್ಲಿ ನಡೆಯುವ ಟೆಸ್ಟ್ ಸರಣಿ ಸದಾ ಹೈವೋಲ್ಟೆಜ್ ನಿಂದ ಕೂಡಿರುತ್ತದೆ. ಸದ್ಯ ಕೋವಿಡ್-19 ಪಿಡುಗಿನ ಆತಂಕದ ನಡುವೆಯೂ ಈ ವರ್ಷದ ಅಂತ್ಯಕ್ಕೆ ಇಂಡೋ ಆಸೀಸ್ ಸರಣಿ ನಡೆಯುವುದು ಬಹುತೇಕ ಖಚಿತವಾಗಿದೆ.
ಫಾಕ್ಸ್ ಕ್ರಿಕೆಟ್ ವರದಿಯ ಪ್ರಕಾರ ವರ್ಷಾಂತ್ಯದಲ್ಲಿ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿದೆ. ನಾಲ್ಕು ಪಂದ್ಯಗಳು ನಡೆಯುವ ತಾಣವೂ ಅಂತಿಮವಾಗಿದೆ.
ಆದರೆ ವಾಡಿಕೆಯಂತೆ ಮೆಲ್ಬೋರ್ನ್ ಅಥವಾ ಸಿಡ್ನಿಯಲ್ಲಿ ಆರಂಭಿಕ ಪಂದ್ಯ ನಡೆಯದೇ ಈ ಬಾರಿ ಮೊದಲ ಪಂದ್ಯ ನಡೆಯದೆ ಬ್ರಿಸ್ಬೇನ್ ನ ಗಾಬಾ ಅಂಗಳದಲ್ಲಿ ನಡೆಯಲಿದೆ.
ಎರಡನೇ ಪಂದ್ಯ ಅಡಿಲೇಡ್ ಅಂಗಳದಲ್ಲಿ ನಡೆಯಲಿದೆ. ವಿಶೇಷವೆನೆಂದರೆ ಈ ಪಂದ್ಯ ಡೇ ನೈಟ್ ಪಂದ್ಯವಾಗಿರಲಿದೆ. ಇದು ಭಾರತದ ಎರಡನೇ ಪಿಂಕ್ ಬಾಲ್ ಪಂದ್ಯವಾಗಿರಲಿದೆ.
ಮೂರು ಏಕದಿನ ಪಂದ್ಯಗಳನ್ನು ಆಡಲು ಬಿಸಿಸಿಐ ಒಪ್ಪಿಗೆ ನೀಡಿದೆ ಎನ್ನಲಾಗಿದೆ. ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ಇನ್ನೆರಡು ಪಂದ್ಯಗಳಿಗೆ ಅವಕಾಶ ಕೇಳಿದೆ ಎಂದು ವರದಿಯಾಗಿದೆ.
ಕಳೆದ ಆಸೀಸ್ ಸರಣಿ ವಿರಾಟ್ ಪಡೆಗೆ ಸ್ಮರಣೀಯವಾಗಿತ್ತು. ಇತಿಹಾಸದಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾ ಟೆಸ್ಟ್ ಸರಣಿ ಜಯಿಸಿತ್ತು.