ಹೊಸದಿಲ್ಲಿ: ಆಲ್‌ರೌಂಡರ್ ರವೀಂದ್ರ ಜಡೇಜ ಅವರನ್ನು ಮುಂದಿನ ತಿಂಗಳು ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಕೈಬಿಡಲಾಗಿದೆ.
Advertisement
ಮೊಣಕಾಲಿನ ಗಾಯದಿಂದ ಜಡೇಜ ಇನ್ನೂ ಚೇತರಿಸಿಕೊಂಡಿಲ್ಲ. ಅವರೊಂದಿಗೆ ಎಡಗೈ ಮಧ್ಯಮ ವೇಗಿ ಯಶ್ ದಯಾಲ್ ಕೂಡ ತಂಡದಲ್ಲಿಲ್ಲ.
ಅವರಿಬ್ಬರ ಬದಲಿಗೆ ವೇಗಿ ಕುಲದೀಪ್ ಸೇನ್ ಮತ್ತು ಆಲ್‌ರೌಂಡರ್ ಶಾಬಾಜ್ ಅಹ್ಮದ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.