Advertisement

World Test Championship final ಪಂದ್ಯಕ್ಕೆ ಅಂತಿಮ ತಂಡ ಪ್ರಕಟಿಸಿದ ಭಾರತ- ಆಸ್ಟ್ರೇಲಿಯಾ

06:17 PM May 29, 2023 | Team Udayavani |

ಲಂಡನ್: ಐಪಿಎಲ್ ಹವಾ ಮುಗಿಯುತ್ತಿದ್ದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಗರಿಗೆದರುತ್ತಿದೆ. ಮುಂದಿನ ತಿಂಗಳಿನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯವನ್ನು ಆಡಲು ಸಜ್ಜಾಗುತ್ತಿದ್ದು, ಇದೀಗ ಉಭಯ ತಂಡಗಳು ತಮ್ಮ ಸ್ಕ್ವ್ಯಾಡ್ ಅಂತಿಮಗೊಳಿಸಿದೆ.

Advertisement

ಭಾರತ ಮತ್ತು ಆಸ್ಟ್ರೇಲಿಯಾ ಮಂಡಳಿಗಳು ತಮ್ಮ 15 ಜನರ ತಂಡವನ್ನು ರವಿವಾರ ಅಂತಿಮಗೊಳಿಸಿವೆ.

ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಆದರೆ ಮೀಸಲು ಆಟಗಾರರಲ್ಲಿ ಋತುರಾಜ್ ಗಾಯಕ್ವಾಡ್ ಬದಲು ಯಶಸ್ವಿ ಜೈಸ್ವಾಲ್ ಸೇರಿಕೊಂಡಿದ್ದಾರೆ. ಮದುವೆ ಕಾರಣದಿಂದ ಗಾಯಕ್ವಾಡ್ ತಪ್ಪಿಸಿಕೊಂಡಿದ್ದಾರೆ. ಉಳಿದಿಬ್ಬರು ಮೀಸಲು ಆಟಗಾರರೆಂದರೆ ಸೂರ್ಯಕುಮಾರ್ ಯಾದವ್ ಮತ್ತು ಮುಕೇಶ್ ಕುಮಾರ್.

ಐಪಿಎಲ್ ನಲ್ಲಿ ಗಾಯಗೊಂಡಿದ್ದ ಎಡಗೈ ವೇಗಿ ಜಯದೇವ್ ಉನಾದ್ಕತ್ ಅವರು ಬಹುತೇಕ ಹೊರಬೀಳುತ್ತಾರೆ ಎನ್ನಲಾಗಿತ್ತು. ಆದರೆ ಅವರು ಸದ್ಯ ಗುಣಮುಖರಾಗಿದ್ದು, ಇಂಗ್ಲೆಂಡ್ ಗೆ ತೆರಳಿದ್ದಾರೆ.

ಇತ್ತ ಆಸೀಸ್ ತಂಡದಲ್ಲಿ ವೇಗಿ ಜೋಶ್ ಹೇಜಲ್ ವುಡ್ ಸ್ಥಾನ ಉಳಿಸಿಕೊಂಡಿದ್ದಾರೆ. ಅವರು ಕೂಡಾ ಐಪಿಎಲ್ ನಲ್ಲಿ ಗಾಯದ ಕಾರಣದಿಂದ ಹೆಚ್ಚಿನ ಪಂದ್ಯಗಳನ್ನು ಆಡಿರಲಿಲ್ಲ. ಆಸೀಸ್ ತಂಡದಲ್ಲಿ ಮೀಸಲು ಆಟಗಾರರಾಗಿ ಮಿಚೆಲ್ ಮಾರ್ಶ್ ಮತ್ತು ಮ್ಯಾಟ್ ರೆನ್ಶಾ ಇದ್ದಾರೆ.

Advertisement

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯವು ಜೂನ್ 7ರಿಂದ ಆರಂಭವಾಗಲಿದೆ. ಇದು ಲಂಡನ್ ನ ಕೆನ್ನಿಂಗ್ಟನ್ ಓವಲ್ ನಲ್ಲಿ ನಡೆಯಲಿದೆ.

ತಂಡಗಳು

ಭಾರತ ತಂಡ: ರೋಹಿತ್ ಶರ್ಮಾ (ನಾ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಸ್ ಭರತ್ (ವಿ.ಕೀ), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕತ್, ಇಶಾನ್ ಕಿಶನ್ (ವಿ.ಕೀ)

ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮ್ಮಿನ್ಸ್ (ನಾ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ (ವಿ.ಕೀ), ಕ್ಯಾಮರೂನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಜೋಶ್ ಹೇಜಲ್ ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್ (ವಿ.ಕೀ), ಉಸ್ಮಾನ್ ಖವಾಜಾ, ಮಾರ್ನಸ್ ಲಬುಶೇನ್, ನಾಥನ್ ಲಿಯಾನ್, ಟಾಡ್ ಮರ್ಫಿ, ಸ್ಟೀವ್ ಸ್ಮಿತ್ (ಉ.ನಾ), ಮಿಚೆಲ್ ಸ್ಟಾರ್ಕ್, ಡೇವಿಡ್ ವಾರ್ನರ್.

Advertisement

Udayavani is now on Telegram. Click here to join our channel and stay updated with the latest news.

Next