ನವದೆಹಲಿ: ಕಳೆದ ತಿಂಗಳು ಭಾರತದಿಂದ ಗೋಧಿಯನ್ನು ಹೊರದೇಶಗಳಿಗೆ ರಫ್ತು ಮಾಡದಂತೆ ಕೇಂದ್ರ ಸರ್ಕಾರ ಹೇರಿದ್ದ ನಿಷೇಧದಲ್ಲಿ ಕೊಂಚ ಸಡಿಲಗೊಳಿಸಲಾಗಿದೆ.
ಬಾಂಗ್ಲಾದೇಶ, ಫಿಲಿಪ್ಪೀನ್ಸ್, ತಾಂಜೇನಿಯಾ, ಮಲೇಷ್ಯಾಕ್ಕೆ ರಫ್ತು ಮಾಡಬೇಕಿರುವ ಗೋಧಿಯನ್ನು ರಫ್ತು ಮಾಡಲು ಅವಕಾಶ ಮಾಡಿಕೊಟ್ಟಿದೆ. ಗೋಧಿ ರಫ್ತು ಆದೇಶದಿಂದಾಗಿ ದೇಶದ ನಾನಾ ಬಂದರುಗಳಲ್ಲಿ ಒಟ್ಟು 1.7 ಮಿಲಿಯನ್ ಟನ್‌ನಷ್ಟು ಗೋಧಿ ದಾಸ್ತಾನು ಹಾಗೆಯೇ ಉಳಿದಿದೆ.
ಈಗ ಮಾನ್ಸೂನ್ ಶುರುವಾಗಿರುವುದರಿಂದ ಕಂಟೈನರ್‌ಗಳಲ್ಲಿರುವ ಗೋಧಿಯು ಮುಗ್ಗಾಗುವ ಸಾಧ್ಯತೆಯಿದೆ. ಹಾಗಾಗಿ, ತನ್ನ ನಿಯಮಗಳನ್ನು ಕೊಂಚ ಸಡಿಲ ಮಾಡಿಕೊಂಡಿರುವ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಕೊಂಚ ಸಡಿಲಿಸಿದೆ ಎಂದು ಮೂಲಗಳು ತಿಳಿಸಿವೆ.