Advertisement

Women’s ‘ಎ’ ಟೆಸ್ಟ್‌ :192ಕ್ಕೆ ಏರಿದ ಆಸೀಸ್‌ ಲೀಡ್‌

12:20 AM Aug 24, 2024 | Team Udayavani |

ಗೋಲ್ಡ್‌ ಕೋಸ್ಟ್‌ (ಆಸ್ಟ್ರೇಲಿಯ): ವನಿತಾ “ಎ’ ತಂಡಗಳ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ಭಾರತದ ಬೌಲರ್ ಉತ್ತಮ ಪ್ರತಿಹೋರಾಟವನ್ನು ಜಾರಿಯಲ್ಲಿರಿಸಿದರೂ 2ನೇ ದಿನದ ಅಂತ್ಯಕ್ಕೆ ಆಸ್ಟ್ರೇಲಿಯದ ಮುನ್ನಡೆ 192ಕ್ಕೆ ಏರಿದೆ.

Advertisement

ಆಸ್ಟ್ರೇಲಿಯ “ಎ’ ತಂಡದ 212 ರನ್ನುಗಳ ಮೊದಲ ಇನ್ನಿಂಗ್ಸ್‌ಗೆ ಜವಾಬಾಗಿ ಭಾರತ “ಎ’ 184ಕ್ಕೆ ಆಲೌಟ್‌ ಆಯಿತು. ದ್ವಿತೀಯ ಸರದಿಯಲ್ಲಿ ಆಸೀಸ್‌ 7ಕ್ಕೆ 164 ರನ್‌ ಮಾಡಿದೆ. ಎಮ್ಮಾ ಬ್ರೌಗ್‌ 58 ರನ್‌ ಮಾಡಿದರೆ, ಮ್ಯಾಂಡಿ ಡೇರ್ಕ್‌ 54 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಭಾರತ “ಎ’ ತಂಡದ ನಾಯಕಿ ಮಿನ್ನು ಮಣಿ 47 ರನ್ನಿಗೆ 5 ವಿಕೆಟ್‌ ಉಡಾಯಿಸಿದರು. ಇದರೊಂದಿಗೆ ಅವರು ಈ ಪಂದ್ಯದಲ್ಲಿ 10 ವಿಕೆಟ್‌ ಕೆಡವಿದ ಸಾಧನೆಗೈದರು.

ಭಾರತ 2ಕ್ಕೆ 100 ರನ್‌ ಮಾಡಿದಲ್ಲಿಂದ ದ್ವಿತೀಯ ದಿನದ ಬ್ಯಾಟಿಂಗ್‌ ಮುಂದುವರಿಸಿತ್ತು. ಆದರೆ ಕೇಟ್‌ ಪೀಟರ್ಸನ್‌ ದಾಳಿಗೆ ಕುಸಿಯುತ್ತ ಹೋಯಿತು. ಕೇಟ್‌ ಸಾಧನೆ 16ಕ್ಕೆ 5 ವಿಕೆಟ್‌. ಶ್ವೇತಾ ಸೆಹ್ರಾವತ್‌ ಸರ್ವಾಧಿಕ 40, ತೇಜಲ್‌ ಹಸಬಿ°ಸ್‌ 32 ರನ್‌ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next