Advertisement

“ಪೂರ್ವಜರ ತ್ಯಾಗ-ಬಲಿದಾನ ತಿಳಿದು ಬಾಳುವ ಅಗತ್ಯವಿದೆ’

01:18 PM Aug 19, 2021 | Team Udayavani |

ನವಿಮುಂಬಯಿ: ಪೂರ್ವ ಜರ ದೂರದೃಷ್ಟಿಯ ಮನೋಭಾವ, ಚಳವಳಿಗಳು ಈ ರಾಷ್ಟ್ರಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಪ್ರಮುಖ ಪಾತ್ರವಹಿಸಿವೆ. ನಾವು ಇಂದು ಸ್ವತಂತ್ರ ರಾಗಿ ಜೀವನ ನಡೆಸಲು ಅವರ ತ್ಯಾಗ, ಬಲಿದಾನ ಮಹತ್ತರವಾಗಿದ್ದು, ಇದನ್ನೆಲ್ಲ ತಿಳಿದು ಬಾಳುವ ಅಗತ್ಯವಿದೆ ಎಂದು ಬಿಎಸ್‌ಕೆಬಿ ಅಸೋಸಿಯೇಶನ್‌ ಗೋಕುಲ ಸಂಸ್ಥೆಯ ಅಧ್ಯಕ್ಷ ಡಾ| ಸುರೇಶ್‌ ಎಸ್‌. ರಾವ್‌ ಕಟೀಲು ತಿಳಿಸಿದರು.

Advertisement

ಆ. 15ರಂದು ಬಿಎಸ್‌ಕೆಬಿ ಅಸೋಸಿಯೇಶನ್‌ ಮುಂಬಯಿ ವತಿಯಿಂದ ನೆರೂಲ್‌ನ ಗೋಕುಲದ ಹಿರಿಯ ನಾಗರಿಕರ ಆಶ್ರಯಧಾಮ “ಆಶ್ರಯ’
ದಲ್ಲಿ ಸಂಸ್ಥೆಯ ಆವರಣದಲ್ಲಿ ನಡೆದ 75ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಅವರು ಧ್ವಜಾರೋಹಣ ಗೈದು ಮಾತನಾಡಿದರು.

ಗೋಕುಲ ಕಟ್ಟಡ ಪುನರ್‌ ನಿರ್ಮಾ ಣದ ಸದ್ಯದ ಪ್ರಗತಿ ಬಗ್ಗೆ ತಿಳಿಸಿದ ಅವರು, ಗೋಕುಲದ ಆರಾಧ್ಯಮೂರ್ತಿ ಶ್ರೀ ಗೋಪಾಲಕೃಷ್ಣ ದೇವರ ಪುನರ್‌ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಮುಂಬರುವ ಜನವರಿಯಲ್ಲಿ ನೆರವೇರಿಸಲು ಸಿದ್ಧತೆ ನಡೆಸಲಾಗಿದೆ. ಈ ಪುಣ್ಯ ಧಾರ್ಮಿಕ ಕಾರ್ಯಕ್ರಮದ ಯಶಸ್ಸಿಗೆ ಸದಸ್ಯರೆಲ್ಲರ ಪೂರ್ಣ ಸಹಕಾರದ ಅಗತ್ಯವಿದೆ ಎಂದು ಸ್ವಾತಂತ್ರ್ಯದಿನದ ಶುಭಾಶಯ ಕೋರಿದರು.

ಇದನ್ನೂ ಓದಿ:ಬಾಡಿಲೈನ್ ಬೌಲಿಂಗ್ ಎಂಬ ಕ್ರಿಕೆಟ್ ನ ಅಪಾಯಕಾರಿ ರಣತಂತ್ರ

ಬಿಎಸ್‌ಕೆಬಿಎ ಗೌರವ ಕಾರ್ಯದರ್ಶಿ ಎ.ಪಿ.ಕೆ. ಪೋತಿ ಸ್ವಾಗತಿಸಿದರು. ಉಪಾಧ್ಯಕ್ಷ ವಾಮನ್‌ ಹೊಳ್ಳ, ಉಪಾಧ್ಯಕ್ಷೆ ಶೈಲಿನಿ ರಾವ್‌, ಜತೆ ಕಾರ್ಯದರ್ಶಿ ಚಿತ್ರಾ ಮೇಲ್ಮನೆ, ಕೋಶಾಧಿಕಾರಿ ಹರಿದಾಸ್‌ ಭಟ್‌, ಜತೆ ಕೋಶಾಧಿಕಾರಿ ಕುಸುಮ್‌ ಶ್ರೀನಿವಾಸ್‌, ಆಶ್ರಯ ಸಂಚಾಲಕಿ ಚಂದ್ರಾವತಿ ರಾವ್‌ ಮತ್ತಿತರರು ಧ್ವಜವಂದನೆಗೈದರು.

Advertisement

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಆಶ್ರಯ ಸಭಾಗೃಹದಲ್ಲಿ ಹಂಸಾ ಭಾರದ್ವಾಜ್‌ ಮತ್ತು ಕಾರ್ತಿಕ್‌ ರಾವ್‌ ನಿರೂಪಣೆಯಲ್ಲಿ, ಆಶ್ರಯದ ಹಿರಿಯ ನಾಗರಿಕರು ಹಾಗೂ ಸಂಘದ ಸದಸ್ಯರು ದೇಶಭಕ್ತಿ ಗೀತೆಗಳನ್ನು ಹಾಡಿದರು. ಶೈಲಿನಿ ರಾವ್‌ ನಿರೂಪಣೆಯಲ್ಲಿ ಮಹಿಳೆಯರಿಂದ ಫ್ಯಾಷನ್‌ ಶೋ, ನೃತ್ಯ ವೈವಿಧ್ಯ ಇನ್ನಿತರ ವೈವಿಧ್ಯಮಯ ಕಾರ್ಯಕ್ರಮಗಳು ಪ್ರದರ್ಶನಗೊಂಡವು. ಆನ್‌ಲೈನ್‌ ಮುಖಾಂತರ ಕಾರ್ಯಕ್ರಮವು ನೇರ ಪ್ರಸಾರಗೊಂಡಿದ್ದು, ಸಮಾಜ ಬಾಂಧವರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ದೇಶ-ವಿದೇಶ ಗಳಲ್ಲಿ ನೆಲೆಸಿದ ಸಂಘದ ಸದಸ್ಯರು ಕೂಡಾ ಆನ್‌ಲೈನ್‌ ಮೂಲಕ ದೇಶಭಕ್ತಿ ಗೀತೆಗಳ ಗಾಯನ, ನೃತ್ಯ ಇತ್ಯಾದಿಗಳನ್ನು ಪ್ರಸ್ತುತಪಡಿಸಿದರು. ಗೋಕುಲ ಕಲಾವೃಂದ, ಮಹಿಳಾ ವಿಭಾಗ ಹಾಗೂ ಯುವ ವಿಭಾಗ ದವರ ಆಯೋಜನೆಯಲ್ಲಿ ಜರಗಿತು. ಪ್ರಶಾಂತ್‌ ಹೆರ್ಲೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next