Advertisement

ಉಳ್ಳಾಲದ ಹಲವೆಡೆ ಸಂಭ್ರಮದ ಸ್ವಾತಂತ್ರ್ಯ ದಿನ ಆಚರಣೆ

02:11 PM Aug 15, 2019 | keerthan |

ಉಳ್ಳಾಲ: ದೇಶದಾದ್ಯಂತ ಇಂದು 72ನೇ ಸ್ವಾತಂತ್ರ್ಯೋತ್ಸವ ಆಚರಣೆ ನಡೆಯುತ್ತಿದ್ದು, ಉಳ್ಳಾಲದ ಹಲವು ಕಡೆ ಸಂಭ್ರಮದಿಂದ ನಡೆಯಿತು.
ಅಲ್-ಅಮೀನ್ ಫ್ರೆಂಡ್ಸ್ ಕೈರಂಗಳ ವತಿಯಿಂದ 73 ನೇ ಸ್ವಾತಂತ್ರ್ಯ ದಿನಾಚರಣೆ ಯನ್ನು ಸಂಸ್ಥೆಯ ಕಛೇರಿ ಮುಂಬಾಗದಲ್ಲಿ ಆಚರಿಸಲಾಯಿತು.

Advertisement

ಸಾಂಬರತೊಟ ನೂರಾನಿಯ ಜುಮಾ ಮಸ್ಜಿದ್ ಹಾಗು ಸ್ವಲಾಹುದ್ದೀನ್ ಸೆಕೆಂಡರಿ ಮದರಸ ಟ್ರಸ್ಟ್ ಇದರ ವತಿಯಿಂದ 73 ನೇ ಸ್ವಾತಂತ್ರೊತ್ಸವದ ಪ್ರಯುಕ್ತ ಧ್ವಜೊಹರಣ ಕಾರ್ಯಕ್ರಮ ಬೆಳಿಗ್ಗೆ 7:30 ನೆರವೇರಿತು ಧ್ಚಜಾರೋಹಣವನ್ನು ನೂರಾನಿಯ ಜುಮಾ ಮಸ್ಜಿದ್ ನ ಅಧ್ಯಕ್ಷ ಇಬ್ರಾಹಿಂ ಹಾಜಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಎಸ್ಕೆ ಖಾದರ್ ಹಾಜಿ,ಎ ಎಸ್ ಅಬ್ದುಲ್ ರಹಿಮಾನ್ ಹಾಜಿ,ಹಸನ್ ಹಾಜಿ,ಎಸ್ ಎಸ್ ಮೂಸ ಹಾಜಿ,ಮುಹಮ್ಮದ್ ಮತ್ತು ಸ್ವಲಾಹುದೀನ್ ಮದರಸ ಗುರುಗಳು ಮುಖ್ಯ ಅಥಿತಿಗಳಾಗಿ ಭಾಗವಹಿಸಿದರು. ಕಾರ್ಯಕ್ರಮಕ್ಕೆ ಖಿದ್ಮತುಲ್ ಇಸ್ಲಾಂ ಅಸೊಶೇಷನ್ ಕಮಿಟಿ ಯ ನೇತಾರರು ಸಾಥ್ ನೀಡಿದರು

ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಉಳ್ಳಾಲದಲ್ಲಿ 73 ನೇ ಸ್ವಾಂತತ್ರೋತ್ಸವದ ಧ್ವಜಾರೋಹಣ ವನ್ನು ಕೇಂದ್ರದ ಮುಖ್ಯಸ್ಥರಾದ ಡಾ. ಲಕ್ಷ್ಮಣ್ ರವರು ನೆರವೇರಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಮಹೇಶ್ ಮಟ್ಟ್, ಅಧೀಕ್ಷಕ ರವಿಚಂದ್ರ, ಹಿರಿಯ ಸಹಾಯಕಿ ಜ್ಯೋತಿಲಕ್ಷ್ಮಿ, ಹಿರಿಯ ಪ್ರಯೋಗ ಶಾಲಾ ಸಹಾಯಕ ಸಂತೋಷ್.ಜೆ, ಹಿರಿಯ ಕ್ಷೇತ್ರ ಸಹಾಯಕ‌ ಪ್ರವೀಣ್.ಎಸ್.ಕುಂಪಲ ಹಾಗು ಸಂಶೋಧನಾ ಕೇಂದ್ರದ ನೌಕರರು, ಕಾರ್ಮಿಕರು ಉಪಸ್ತಿತರಿದ್ದರು.

Advertisement

ತೋಟಾಲ್ ಜುಮಾ ಮಸೀದಿ ಖತೀಬ್ ಮುಹಿಯ್ಯದ್ದೀನ್ ಸಹದಿ ತೋಟಾಲ್ ದುವಾ ನೆರವೇರಿಸಿದರು.ಬಂಟ್ವಾಳ ತಾ.ಪಂ ಸದಸ್ಯರು ಆದ ಹೈದರ್ ಕೈರಂಗಳ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಅಲ್-ಅಮೀನ್ ಸಂಸ್ಥೆ ಸಮಾಜದಲ್ಲಿ ಹತ್ತು ಹಲವು ಕಾರ್ಯಕ್ರಮ ಗಳನ್ನು ಹಮ್ಮಿಕೊಂಡು ಸಮಾಜದ ಋಣ ತೀರಿಸುವ ಕೆಲಸ ಮಾಡಿದೆ,ಪ್ರಚಾರದ ಸೋಗಿಲ್ಲದೆ ಸಂಸ್ಥೆ ನಡೆಸುವ ರಿಲೀಫ್ ಕಾರುಣ್ಯ ಸೇವೆಗಳು ಶ್ಲಾಘನೀಯ ಎಂದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಹಂಝ.ಬಿ ಅಧ್ಯಕ್ಷತೆ ವಹಿಸಿದ್ದರು.ಸಂಸ್ಥೆಯ ಗೌರವಾಧ್ಯಕ್ಷರಾದ ಅಹ್ಮದ್ ಕುಂಙಿ,ಪ್ರಮುಖರಾದ ಮೊಯಿದಿನ್ ಬಾನೋಟ್,ಮೊಯಿದಿನ್ ವಿದ್ಯಾನಗರ, ಅನ್ಸಾರುಲ್ ಹುದಾ ಅಧ್ಯಕ್ಷ ಹೈದರ್ ಮಲಿ,ಗೌಸಿಯಾ ಯಂಗ್ಮೆನ್ಸ್ ಅಸೋಸಿಯೇಶನ್ ಅದ್ಯಕ್ಷ ಇಬ್ರಾಹಿಂ ಪಾರೆ,ಉದ್ಯಮಿ ಹಕೀಮ್ ಡಿ.ಎಸ್,ಅಬ್ದುರ್ರಹ್ಮಾನ್ ಸುಟ್ಟ, ಸ್ಥಳೀಯರಾದ ಗಣೇಶ್,ರಾಮು,ಹೈದರ್ ಗೋಳಿಯಡಿ, ಮತ್ತಿತರರು ಉಪಸ್ಥಿತರಿದ್ದರು.

ಬಗಂಬಿಲ ಫ್ರೆಂಡ್ಸ್ ಸರ್ಕಲ್(ರಿ) ಇದರ ವತಿಯಿಂದ 73ನೇ ಸ್ವಾತಂತ್ರ್ಯ ದಿನಾಚರಣೆಯು ನಡೆಯಿತು. ಧ್ವಜರೋಹಣವನ್ನು ಸುನಂದ ರಾಮಚಂದ್ರ ಇವರು ನೆರವೇರಿಸಿದರು. ಈ ಸಂಧರ್ಭದಲ್ಲಿ ಸುನಂದ ರಾಮಚಂದ್ರ ಮತ್ತು ಪುರುಷೋತ್ತಮ ಪೂಜಾರಿ ಇವರನ್ನು ಕ್ಲಬ್ಬಿನ ವತಿಯಿಂದ ಸನ್ಮಾನಿಸಲಾಯಿತು. ಹಾಗೂ ಕ್ಲಬ್ಬಿನ ವತಿಯಿಂದ ನಡೆದ ಶಾಲಾ ಮಕ್ಕಳಿಗೆ ಆಟೋಟ ಸ್ಪರ್ಧೆಯ ಬಹುಮಾನ ವಿತರಿಸಲಾಯಿತು. ಈ ಸಂದರ್ಭ ಮುಖ್ಯ ಅತಿಥಿ ಪುರುಷೋತ್ತಮ ಪೂಜಾರಿ, ಕುಮಾರಿ ಪುಷ್ಪ ಟೀಚರ್ ಬಗಂಬಿಲ ಹಿರಿಯರಾದ ಪರಮೇಶ್ವರ್,ಜಲಜಾಕ್ಷಿ ಕೃಷ್ಣಪ್ಪ, ಬಗಂಬಿಲ ಫ್ರೆಂಡ್ಸ್ ಸರ್ಕಲ್ ನ ಗೌರವ ಅಧ್ಯಕ್ಷರು ಗಿಲ್ಬರ್ಟ್ ಅಪೋನ್ಸ್ ಮಹಾದೇವಿ ಮಂದಿರದ ಅರ್ಚಕ ಬಾಲಕೃಷ್ಣ ಪೂಜಾರಿ ಹಿಂದೂ ಯುವ ಸೇನೆಯ ಅಧ್ಯಕ್ಷರಾದ ಪ್ರವೀಣ್ ದಾಸ್ ಬಗಂಬಿಲ ಫ್ರೆಂಡ್ಸ್ ಸರ್ಕಲ್ನ ಅಧ್ಯಕ್ಷರಾದ ಮಿತ್ರೆಶ್ ಬಗಂಬಿಲ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next