Advertisement

ಜಗದಗಲ ಪಸರಿಸಿದ ಅಮೃತ ಸ್ವಾತಂತ್ರ್ಯೋತ್ಸವದ ಸುಗಂಧ

11:57 PM Aug 15, 2022 | Team Udayavani |

ಮಣಿಪಾಲ: ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಸಡಗರ, ಅಭಿಮಾನಗಳಿಂದ ಆಚರಿಸಿದೆ. ದೇಶದ ಹೊರಗೆ ಅಂದರೆ ವಿದೇಶಗಳಲ್ಲಿ ಹೇಗೆ ಆಚರಣೆ ನಡೆಯಿತು ಎಂಬುದು ಕುತೂಹಲ ಕೆರಳಿಸುವ ವಿಚಾರ.

Advertisement

ಭಾರತೀಯರು ಜಗದಗಲ ಹರಡಿದ್ದಾರೆ. ಎಲ್ಲ ದೇಶಗಳಲ್ಲಿಯೂ ಭಾರತೀಯ ರಾಯಭಾರ ಕಚೇರಿಗಳಿವೆ. ಅಲ್ಲೆಲ್ಲ ಅಮೃತ ಸ್ವಾತಂತ್ರ್ಯ ಮಹೋತ್ಸವವನ್ನು ಅಲ್ಲಿರುವ ಭಾರತೀಯರು, ರಾಜತಾಂತ್ರಿಕರು ಪ್ರೀತ್ಯಭಿಮಾನಗಳಿಂದ ಆಚರಿಸಿಕೊಂಡಿದ್ದಾರೆ.

ಕೆಲವು ದೇಶಗಳಲ್ಲಿ ಧ್ವಜಾರೋಹಣದ ಜತೆಗೆ ನೃತ್ಯದಂತಹ ಸಾಂಸ್ಕೃತಿಕ ಪ್ರದರ್ಶನಗಳನ್ನು ಕೂಡ ಏರ್ಪಡಿಸಲಾಗಿತ್ತು. ಆಯಾ ದೇಶಗಳಲ್ಲಿ ನೆಲೆಸಿರುವ ಭಾರತೀಯರ ಜತೆಗೆ ರಾಜತಾಂತ್ರಿಕರು, ಅಧಿಕಾರಿಗಳು ಸೇರಿಕೊಂಡಿದ್ದರೆ ಕೆಲವು ದೇಶಗಳಲ್ಲಿ ವಿದೇಶೀಯರು ಕೂಡ ಜತೆಯಾದರು. ಕೆಲವು ದೇಶಗಳಲ್ಲಿ ಅಲ್ಲಿನ ಪ್ರಧಾನ ಕುರುಹಾದ ಕಟ್ಟಡಗಳನ್ನು ತ್ರಿವರ್ಣ ಬೆಳಕಿನಿಂದ ಅಲಂಕರಿಸಲಾಗಿತ್ತು.

ವಿದೇಶಗಳಲ್ಲಿ ಅದರಲ್ಲೂ ಭಾರತೀಯ ರಾಯಭಾರ ಕಚೇರಿಗಳಲ್ಲಿ ನಡೆದ ಈ ಸ್ವಾತಂತ್ರ್ಯ ದಿನಾಚರಣೆ ಸೋಮವಾರ ಟ್ವಿಟರ್‌ನಲ್ಲಿ ಟ್ರೆಂಡಿಂಗ್‌ ಕೂಡ ಆಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next