Advertisement

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

11:30 AM Aug 13, 2022 | Team Udayavani |

ರಾಸ್‌ ಬೆಹಾರಿ ಬೋಸ್‌ (1886-1945)
1912ರಲ್ಲಿ ದಿಲ್ಲಿಯಲ್ಲಿ ವೈಸ್‌ರಾಯ್‌ ಲಾರ್ಡ್‌ ಹಾರ್ಡಿಂಗೆ ಅವರನ್ನು ಹತ್ಯೆ ಮಾಡಲು ಯತ್ನಿಸಲಾಯಿತು. ಈ ಪ್ರಯತ್ನದಲ್ಲಿ ಮುಖ್ಯ ಪಾತ್ರ ವಹಿಸಿದ್ದ ರಾಸ್‌ ಬೆಹಾರಿ ಬೋಸ್‌ ಅವರು ತಮ್ಮ ಸರಕಾರಿ ಹುದ್ದೆಯನ್ನು ಬಳಸಿಕೊಂಡು ಬಂಧನದಿಂದ ತಪ್ಪಿಸಿಕೊಂಡರು. ಅನಂತರ ಜಪಾನ್‌ಗೆ ಪರಾರಿಯಾದ ಅವರು ಅಲ್ಲೇ ನೆಲೆಸಿದರು. “ಇಂಡಿಯನ್‌ ನ್ಯಾಶನಲ್‌ ಆರ್ಮಿ’ ನಿರ್ಮಾಣವಾದಾಗ ಅವರು ಅನೇಕ ಸಂಪನ್ಮೂಲ ಗಳನ್ನು ನೀಡುವ ಮೂಲಕ ನೆರವಿಗೆ ಬಂದರು.

Advertisement

ಪುಲಿನ್‌ ಬೆಹಾರಿ ದಾಸ್‌(1877-1949)
ಪುಲಿನ್‌ ಅವರು ಅನುಶಿಲಾನ್‌ ಸಮಿತಿಯ ಧಾಕಾ ಬ್ರಾಂಚ್‌ನ ಸಂಸ್ಥಾಪಕರಾಗಿದ್ದವರು. 1905ರಲ್ಲಿ ಬಂಗಾಲ ವಿಭಜನೆ ಸಮಯದಲ್ಲಿ ಅವರು ರಾಜಕೀಯ ಸೇರಿಕೊಂಡರು. ಸತತ ಸೆರೆವಾಸಗಳನ್ನು ಕಂಡರೂ ಅವರು ಕ್ರಾಂತಿಕಾರಿ ಚಟುವಟಿಕೆಗಳನ್ನು ಕಡಿಮೆ ಮಾಡಲಿಲ್ಲ. ಆದರೆ 1919ರಲ್ಲಿ ರಾಜಕೀಯ ವಲಯದಲ್ಲಿ ಕ್ರಾಂತಿಕಾರಿ ಚಟುವಟಿಕಗಳಿಂದ ಅಹಿಂಸೆಯ ದಾರಿಗಳ ಪಾಲನೆ ಆರಂಭವಾಯಿತು

ಸುಬ್ರಮಣ್ಯ ಭಾರತಿ (1882-1921)
ಭಾರತಿ ಅವರನ್ನು ತಮಿಳು ಸಾಹಿತ್ಯಕ್ಕೆ ನೀಡಿದ ಕೊಡುಗೆಯಿಂದಾಗಿ ನೆನಪಿಸಿಕೊಳ್ಳಲಾಗುತ್ತದೆ. ಆದರೆ ಕಳೆದ ಶತಮಾನದ ಮೊದಲ ದಶಕದಲ್ಲಿ ಇವರು ರಾಷ್ಟ್ರೀಯವಾದಿ ಚಳವಳಿಗಳಲ್ಲಿ ತೊಡಗಿಸಿಕೊಂಡಿದ್ದರು ಮತ್ತು ಭಗತ್‌ ಸಿಂಗ್‌ ಅವರಿಗೆ ಆಪ್ತರಾಗಿದ್ದರು. ಇವರನ್ನು 1918ರಲ್ಲಿ ಬಂಧಿಸಲಾಯಿತು. ಇವರು ಸ್ವದೇಶಮಿತ್ರನ್‌ನ ಸಂಪಾದಕರಾಗಿದ್ದರು.

ಪಾಂಡುರಂಗ ಮಹದೇವ್‌ ಬಪತ್‌(1880-1967)
ಇವರನ್ನು ಸೇನಾಪತಿ ಬಪತ್‌ ಎಂದೂ ಕರೆಯಲಾಗುತ್ತಿತ್ತು. ಲಂಡನ್‌ನಲ್ಲಿ ಇಂಡಿಯನ್‌ ಹೌಸ್‌ ದಿನಗಳಲ್ಲಿ ಇವರು ಸಾವರ್ಕರ್‌ ಅವರಿಗೆ ಆಪ್ತ ಸಹಚರರಾದರು. ಗಾಂಧಿಯನ್‌ ಸತ್ಯಾಗ್ರಹಿ ಎನಿಸಿಕೊಂಡರು. ಅಲಿಪೋರ್‌ ಪಿತೂರಿಯ ಅನಂತರ ಇವರು ಅತ್ಯಂತ ಕಡಿಮೆ ಭಾರತೀಯರು ಕೊಲೊನಿಯಲ್‌ ನಿಯಮದ ತುಳಿತದಲ್ಲಿರುವುದು ಅರ್ಥ ಮಾಡಿಕೊಂಡಿದ್ದಾರೆಂದು ತಿಳಿದುಕೊಂಡರು. ಹಾಗಾಗಿ ಶಿಕ್ಷಣ ಕ್ಷೇತ್ರದತ್ತ ಗಮನ ಹರಿಸಿದರು.

ಎಂ.ಆರ್‌.ಜಯಕರ್‌(1873-1959)
ಜಯಕರ್‌ ಅವರು ಸಾಂವಿಧಾನಿಕ ವಿಧಾನ ಗಳಿಗೋಸ್ಕರ ಗುಂಪು ರಾಜ ಕಾರಣದಿಂದ ತಪ್ಪಿಸಿಕೊಂಡವರು. ರಾಷ್ಟ್ರೀಯ ನಾಯಕ ರೆಲ್ಲರೂ ಕಾನೂನು ಉಲ್ಲಂಘನೆ ಚಳವಳಿ ಮಾಡುತ್ತಿ ದ್ದಾಗ, ಜಯಕರ್‌ ಅವರು ಸರಕಾರದೊಂದಿಗೆ ಮಾತುಕತೆ ನಡೆಸಿ ಬಂಧಿತ ನಾಯಕರನ್ನು ಬಂಧನಮುಕ್ತ ನಡೆಸಲು ಯತ್ನಿಸುತ್ತಿದ್ದರು. ಸಂವಿ ಧಾನಿಕ ಅಸೆಂಬ್ಲಿಯಲ್ಲಿ ಸದಸ್ಯರಾಗಿ ಭಾಗವಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next