Advertisement

Gulbarga University ಅತಿಥಿ ಉಪನ್ಯಾಸಕರ ಸಂಘದಿಂದ ಅನಿರ್ದಿಷ್ಠಾವಧಿ ಸತ್ಯಾಗ್ರಹ ಆರಂಭ

03:16 PM Aug 07, 2024 | Team Udayavani |

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಯುಜಿಸಿ ನಿಯಮಾವಳಿಯಂತೆ ತಿಂಗಳಿಗೆ ಕನಿಷ್ಠ 50 ಸಾವಿರ ರೂ. ವೇತನ ನೀಡಬೇಕು ಎಂದು ತರಗತಿಗಳನ್ನು ಬಹಿಷ್ಕರಿಸಿ ಅತಿಥಿ ಉಪನ್ಯಾಸಕರು ವಿಶ್ವವಿದ್ಯಾಲಯದ ಕಾರ್ಯಸೌಧದ ಎದುರು ಕುಲಪತಿಗಳ ಹಾಗೂ ಕುಲಸಚಿವರ ವಿರುದ್ಧ ಘೋಷಣೆ ಕೂಗಿ ಆ.7ರ ಬುಧವಾರದಿಂದ ಅನಿರ್ದಿಷ್ಟಾವಧಿ ಸತ್ಯಾಗ್ರಹ ಆರಂಭಿಸಿದರು.

Advertisement

ಪ್ರತಿ ವರ್ಷದಂತೆ ಈ ವರ್ಷವೂ ಯುಜಿಸಿ ನಿಯಮಾವಳಿ ಪ್ರಕಾರ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಯುಜಿಸಿ ನಿಯದಂತೆ ಗಂಟೆಗೆ  1500 ರಂತೆ ಗರಿಷ್ಠ ತಿಂಗಳಿಗೆ 50 ಸಾವಿರ ರೂ. ವೇತನ ನೀಡುತ್ತಿಲ್ಲ. ಪ್ರವೇಶ ಮತ್ತು ಪರೀಕ್ಷಾ ಪ್ರಕ್ರಿಯೆಯಲ್ಲಿಯೂ ದುಡಿಸಿಕೊಂಡು ವರ್ಷದ 12 ತಿಂಗಳು ವೇತನ ನೀಡದೆ ಕೇವಲ 6 ರಿಂದ 7 ತಿಂಗಳು ಮಾತ್ರವೇ ವೇತನ ನೀಡಲಾಗುತ್ತಿದೆ. ಉಳಿದ 5 ರಿಂದ 6 ತಿಂಗಳು ವೇತನವಿಲ್ಲದೆ ಅತಿಥಿ ಉಪನ್ಯಾಸಕರು ಬಾರಿ ಸಂಕಷ್ಠ ಎದುರಿಸುವ ಪರಿಸ್ಥಿತಿ ಎದುರಾಗಿದೆ ಎಂದು ಗೋಳು ತೋಡಿಕೊಂಡಿದ್ದಾರೆ.

ಅತಿಥಿ ಉಪನ್ಯಾಸಕರು ಪ್ರತಿ ವರ್ಷ ನ್ಯಾತಯುತ ಬೇಡಿಕೆಗಳನ್ನು ಕುಲಪತಿ, ಕುಲಸಚಿವರು ಹಾಗೂ ಅಧಿಕಾರಿಗಳ ಮುಂದೆ ಮನವಿ ಮಾಡಿದರೆ ನಯವಾಗಿ ಮಾತನಾಡಿ ವಿಳಂಬ ನೀತಿ ಅನುಸರಿಸಿ ಅತಿಥಿ ಉಪನ್ಯಾಸಕರಿಗೆ ನಿರಂತರವಾಗಿ ಅನ್ಯಾಯ ಮಾಡುತ್ತಾ ಬಂದಿದ್ದಾರೆ. ಶೈಕ್ಷಣಿಕ ವರ್ಷದ ವೇಳಾಪಟ್ಟಿ ನಿಯಮ ಹಾಗೂ ಪರೀಕ್ಷೆ ಮತ್ತು ಪ್ರವೇಶ ಅವಧಿಯಲ್ಲೂ ದುಡಿಸಿಕೊಂಡು ವೇತನ ನೀಡುತ್ತಿಲ್ಲ. ಅತಿಥಿ ಉಪನ್ಯಾಸಕರಿಗೆ ಆಗುತ್ತಿರುವ ಅನ್ಯಾಯ ಹಾಗೂ ವೇತನ ಬಿಡುಗಡೆಯ ವಿಳಂಬ ನೀತಿಯ ಬಗೆ ಕುಲಪತಿಗಳು ಸೂಕ್ತ ನಿರ್ಧಾರ ತೆಗೆದುಕೊಳ್ಳದಿದ್ದರೆ. ಘಟಿಕೋತ್ಸವದಂದು ಕಪ್ಪು ಬಟ್ಟೆ ಪ್ರದರ್ಶಿಸಿ ರಾಜ್ಯಪಾಲರ ಎದುರು ನ್ಯಾಯ ಒದಗಿಸುವಂತೆ ಪ್ರತಿಭಟಿಸುತ್ತೇವೆ ಎಂದು ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ. ಅರುಣಕುಮಾರ ಕುರ್ನೆ ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next