Advertisement

ಮಹಿಳಾ ಏಕದಿನ: ಇಂದು ಭಾರತ-ಆಸ್ಟ್ರೇಲಿಯ ಪಂದ್ಯ

09:05 PM Sep 20, 2021 | Team Udayavani |

ಮಕಾಯ್‌: ಪ್ರಬಲ ಆಸ್ಟ್ರೇಲಿಯವನ್ನು ಅವರದೇ ನೆಲದಲ್ಲಿ ಏಕದಿನ ಸರಣಿಯಲ್ಲಿ ಎದುರಿಸಲಿರುವ ಭಾರತ ಮಹಿಳಾ ಕ್ರಿಕೆಟ್‌ ತಂಡ, ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಚಿಂತೆಯಲ್ಲಿದೆ.

Advertisement

ಸರಣಿಯ ಮೊದಲ ಪಂದ್ಯ ಮಂಗಳವಾರ ನಡೆಯಲಿದ್ದು, ಅನುಭವಿ ಆಟಗಾರ್ತಿ ಹರ್ಮನ್‌ಪ್ರೀತ್‌ ಕೌರ್‌ ಅಭ್ಯಾಸ ಪಂದ್ಯದ ವೇಳೆ ಹೆಬ್ಬೆಟ್ಟಿಗೆ ಗಾಯ ಮಾಡಿಕೊಂಡು ಹೊರಬಿದ್ದಿರುವುದರಿಂದ ಸಮಸ್ಯೆ ಬಿಗಡಾಯಿಸಿದೆ. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್‌ ವಿರುದ್ಧ ಬೆನ್ನು ಬೆನ್ನಿಗೆ ಸರಣಿ ಸೋತಿರುವ ಆಘಾತ ಕೂಡ ಭಾರತಕ್ಕೆ ಸಮಸ್ಯೆಯಾಗಿ ಕಾಡಲಿದೆ.

ಮುಂದಿನ ವರ್ಷದ ವಿಶ್ವಕಪ್‌ ಪಂದ್ಯಾವಳಿಗೆ ಸಶಕ್ತ ಬ್ಯಾಟಿಂಗ್‌ ಸಂಯೋಜನೆಯೊಂದನ್ನು ಅಂತಿಮಗೊಳಿಸಲು ಮಿಥಾಲಿ ಪಡೆಯ ಪಾಲಿಗೆ ಈ ಸರಣಿ ಅತ್ಯಂತ ಮಹತ್ವದ್ದಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next