Advertisement

ಭಾರತ ಸರಣಿಗೆ ಐರ್ಲೆಂಡ್‌ ತಂಡ ಪ್ರಕಟ

10:08 PM Jun 16, 2022 | Team Udayavani |

ಡಬ್ಲಿನ್‌: ಪ್ರವಾಸಿ ಭಾರ ತದೆದುರಿನ 2 ಪಂದ್ಯಗಳ ಟಿ20 ಸರಣಿಗಾಗಿ ಐರ್ಲೆಂಡ್‌ 14 ಸದಸ್ಯರ ತಂಡವನ್ನು ಪ್ರಕಟಿಸಿದೆ.

Advertisement

ನಾರ್ತ್‌ ವೆಸ್ಟ್‌ ವಾರಿಯರ್ ತಂಡದ ಅಗ್ರ ಕ್ರಮಾಂಕದ ಬ್ಯಾಟರ್‌ ಸ್ಟೀಫ‌ನ್‌ ಡೋಹ್ನಿ ಮತ್ತು ಪೇಸ್‌ ಬೌಲರ್‌ ಕಾನರ್‌ ಓಲ್ಫರ್ಟ್‌ ಅವರನ್ನು ಸೇರಿಸಿಕೊಂಡಿದೆ.

ಬುಧವಾರವಷ್ಟೇ ಈ ಸರಣಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿತ್ತು. ರಿಷಭ್‌ ಪಂತ್‌ ಗೈರಲ್ಲಿ ಹಾರ್ದಿಕ್‌ ಪಾಂಡ್ಯ ಮೊದಲ ಸಲ ಟೀಮ್‌ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. 2 ಪಂದ್ಯಗಳು ಜೂ. 26 ಮತ್ತು 28ರಂದು ಮಲಹೈಡ್‌ನ‌ಲ್ಲಿ ನಡೆಯಲಿವೆ.

ಐರ್ಲೆಂಡ್‌ ತಂಡ: ಆ್ಯಂಡ್ರ್ಯೊ ಬಾಲ್‌ಬಿರ್ನಿ (ನಾಯಕ), ಮಾರ್ಕ್‌ ಅಡೈರ್‌, ಕರ್ಟಿಸ್‌ ಕ್ಯಾಂಫ‌ರ್‌, ಗ್ಯಾರೆತ್‌ ಡೆಲಾನಿ, ಜಾರ್ಜ್‌ ಡಾಕ್ರೆಲ್‌, ಸ್ಟೀಫ‌ನ್‌ ಡೋಹ್ನಿ, ಜೋಶ್‌ ಲಿಟ್ಲ, ಆ್ಯಂಡ್ರ್ಯೊ ಮೆಕ್‌ಬ್ರೈನ್‌, ಬ್ಯಾರ್ರಿ ಮೆಕಾರ್ಥಿ, ಕಾನರ್‌ ಓಲ್ಫರ್ಟ್‌, ಪಾಲ್‌ ಸ್ಟರ್ಲಿಂಗ್‌, ಹ್ಯಾರಿ ಟೆಕ್ಟರ್‌, ಲಾರ್ಕನ್‌ ಟ್ಯುಕರ್‌, ಕ್ರೆಗ್‌ ಯಂಗ್‌.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next