Advertisement

ಕಾಲೇಜಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಏರಿಕೆ

04:16 PM Nov 24, 2020 | Suhan S |

ಮಂಡ್ಯ: ನ.17 ರಿಂದ ಸ್ನಾತಕ ಹಾಗೂ ಸ್ನಾತಕೋತ್ತರ ಕಾಲೇಜುಗಳನ್ನುಆರಂಭಿಸಲಾಗಿತ್ತು.ಆದರೆ,ಮೊದಲ ದಿನ 705 ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದರು. ಇದೀಗ ಕಳೆದ ಒಂದು ವಾರದಿಂದ ದಿನದಿಂದ ದಿನಕ್ಕೆ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ.

Advertisement

ಸೋಮವಾರ 1830 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಜಿಲ್ಲೆಯಲ್ಲಿ 15 ಸರ್ಕಾರಿ ಹಾಗೂ 8ಖಾಸಗಿ ಪ್ರಥಮ ದರ್ಜೆ ಕಾಲೇಜುಗಳಿಂದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಆರಂಭಿಸಲಾಗಿದೆ. ಇದುವರೆಗೂ 5258 ವಿದ್ಯಾರ್ಥಿಗಳು ದಾಖಲಾತಿ ಪಡೆದುಕೊಂಡಿದ್ದಾರೆ. ಸರ್ಕಾರಿ ಕಾಲೇಜುಗಳಲ್ಲಿ3587 ಹಾಗೂ ಖಾಸಗಿ ಕಾಲೇಜುಗಳಲ್ಲಿ 1671 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.ಆದರೆ, ಕೋವಿಡ್  ಭೀತಿ ಆವರಿಸಿರುವುದರಿಂದ ವಿದ್ಯಾರ್ಥಿಗಳು ನಿಧಾನವಾಗಿ ಕಾಲೇಜಿನತ್ತ ಮುಖ ಮಾಡುತ್ತಿದ್ದಾರೆ.

29 ಮಂದಿಗೆ ಕೋವಿಡ್ ಸೋಂಕು: ಕಾಲೇಜು ಹಾಗೂ ವಿವಿಧ ಸರ್ಕಾರಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಕೋವಿಡ್ ಪರೀಕ್ಷೆ ಮಾಡಿಸಿದ್ದರು. ಇದರಲ್ಲಿ 29 ಮಂದಿ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಇನ್ನೂ ಆಯಾ ಕಾಲೇಜುಗಳಲ್ಲಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷೆಗೆ ವಿದ್ಯಾರ್ಥಿಗಳು ಒಳಗಾಗುತ್ತಿದ್ದಾರೆ. ಕೋವಿಡ್ ಪಾಸಿಟಿವ್‌ಬಂದವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.

ಪೋಷಕರ ಅನುಮತಿ ಪತ್ರ: ಕೋವಿಡ್ ನೆಗೆಟಿವ್‌ ವರದಿ ಜೊತೆಗೆ ಪೋಷಕರ ಅನುಮತಿ ಪತ್ರ ಪಡೆದುಕೊಂಡು ಬರುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಹೆಚ್ಚಾಗುತ್ತಿದೆ. ಇದಲ್ಲದೆ, ವಿದ್ಯಾರ್ಥಿ ನಿಲಯಗಳುಪ್ರಾರಂಭವಾಗಿರುವುದರಿಂದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಇನ್ನೂ ಹಲವು ವಿದ್ಯಾರ್ಥಿಗಳು ಕೊರೊನಾ ಪರೀಕ್ಷೆ ಮಾಡಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ.

ವಿದ್ಯಾರ್ಥಿನಿಯರೇ ಹೆಚ್ಚು ಹಾಜರು: ಪುರುಷ ವಿದ್ಯಾರ್ಥಿಗಳಿಂದ ಮಹಿಳಾ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿದ್ದಾರೆ.5258 ವಿದ್ಯಾರ್ಥಿಗಳ ಪೈಕಿ 3378 ಮಹಿಳಾ ವಿದ್ಯಾರ್ಥಿಗಳು ಹಾಗೂ 1880 ಪುರುಷ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಇದರಲ್ಲಿ 1396 ಮಹಿಳಾ ವಿದ್ಯಾರ್ಥಿಗಳು ಕಾಲೇಜಿಗೆಹಾಜರಾದರೆ, ಕೇವಲ 434 ಪುರುಷ ವಿದ್ಯಾರ್ಥಿಗಳುಹಾಜರಾಗಿದ್ದಾರೆ. ಸರ್ಕಾರಿ ಕಾಲೇಜಿಗೆ 1119 ವಿದ್ಯಾರ್ಥಿಗಳು ಹಾಗೂ ಖಾಸಗಿ ಕಾಲೇಜಿಗೆ 711 ವಿದ್ಯಾರ್ಥಿಗಳು ಹಾಜರಾಗಿದ್ದಾರೆ.

Advertisement

ಆನ್‌ಲೈನ್‌ನಲ್ಲಿ 1079 ಮಂದಿ ಹಾಜರು: ಆನ್‌ ಲೈನ್‌ನಲ್ಲಿ ಒಟ್ಟು 1079 ವಿದ್ಯಾರ್ಥಿಗಳುಹಾಜರಾಗುತ್ತಿದ್ದಾರೆ. ಇದರಲ್ಲಿ 409 ಪುರುಷ ವಿದ್ಯಾರ್ಥಿಗಳು ಹಾಗೂ 670 ಮಹಿಳಾವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ. ಇದರಲ್ಲಿ 666 ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದರೆ, 413 ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.

ಆನ್‌ಲೈನ್‌ಗೂ ಸ್ಪಂದನೆ :  ದಿನದಿಂದ ದಿನಕ್ಕೆಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗುತ್ತಿದೆ. ಪ್ರತಿಯೊಬ್ಬರಿಗೂ ಕೋವಿಡ್ ವರದಿ ಆಧಾರದ ಮೇಲೆಕಾಲೇಜಿಗೆ ಪ್ರವೇಶ ನೀಡಲಾಗುತ್ತಿದೆ. ಎಲ್ಲ ರೀತಿಯ ಮೂಲ ಭೂತ ಸೌಲಭ್ಯ ಕಲ್ಪಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಯಾಗದಂತೆ ಕೋವಿಡ್‌ ಮುಂಜಾಗ್ರತೆ ಕ್ರಮಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಆನ್‌ಲೈನ್‌ ಗೂ ವಿದ್ಯಾರ್ಥಿಗಳ ಸ್ಪಂದನೆ ಎಂದುಕಾಲೇಜು ಶಿಕ್ಷಣಇಲಾಖೆಯ ಜಂಟಿ ನಿರ್ದೇಶಕ ಆರ್‌.ಮೂಗೇಶಪ್ಪ ತಿಳಿಸಿದ್ದಾರೆ.

ನಮ್ಮಕಾಲೇಜಿಗೆ ಶೇ.50ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು. 214 ದಾಖಲಾತಿ ಇದ್ದು, 120 ಮಂದಿ ವಿದ್ಯಾರ್ಥಿಗಳು ಹಾಜರಾಗಿದ್ದರು. ಈಗಾಗಲೇ ವಿದ್ಯಾರ್ಥಿಗಳು ಅವರೇ ಸ್ವತಃಕೋವಿಡ್‌ ಪರೀಕ್ಷಿಸಿ, ನೆಗೆಟಿವ್‌ ವರದಿ ಬಂದವರಿಗೆ ಪ್ರವೇಶ ನೀಡಲಾಗುತ್ತಿದೆ. ಆನ್‌ಲೈನ್‌ಕ್ಲಾಸ್‌ಗೂ ಆದ್ಯತೆ ನೀಡಲಾಗಿದೆ. ಡಾ.ನಟರಾಜು, ಪ್ರಾಂಶುಪಾಲ, ಮದ್ದೂರು ಮಹಿಳಾ ಕಾಲೇಜು

 

-ಎಚ್‌.ಶಿವರಾಜ್‌

Advertisement

Udayavani is now on Telegram. Click here to join our channel and stay updated with the latest news.

Next