Advertisement
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಸದ್ಯದ ಮುನ್ಸೂಚನೆ ಪ್ರಕಾರ ಮೇ 15ರಂದು ಬಂಟ್ವಾಳದಲ್ಲಿ 33.9 ಡಿ.ಸೆ., ಪಾಣೆಮಂಗಳೂರು 33.1, ವಿಟ್ಲ 34.6, ಬೆಳ್ತಂಗಡಿ 34.5, ಕೊಕ್ಕಡ 35.4, ವೇಣೂರು 34, ಗುರುಪುರ 32.7, ಮಂಗಳೂರು 31.2, ಉಳ್ಳಾಲ 31.8, ಮೂಡುಬಿದಿರೆ 33.2, ಮೂಲ್ಕಿ 30.5, ಸುರತ್ಕಲ್ 30.5, ಕಡಬ 35.9, ಪುತ್ತೂರು 35.3, ಉಪ್ಪಿನಂಗಡಿ 35.6 ಮತ್ತು ಪಾಣಾಜೆಯಲ್ಲಿ 33.7 ಡಿ.ಸೆ. ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ. ಕರಾವಳಿ ಭಾಗದಲ್ಲಿ ಸದ್ಯಕ್ಕೆ ಭಾರೀ ಮಳೆಯ ಮುನ್ಸೂಚನೆ ಇಲ್ಲ. ಮುಂದಿನ ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ.
ಕರಾವಳಿಯಲ್ಲಿ ಸದ್ಯ ಪೂರ್ವ ಮುಂಗಾರು ಮರೀಚಿಕೆಯಾದರೂ ಮುಂಗಾರು ಮಳೆ ವಾಡಿಕೆಯಂತೆ ಸುರಿಯುವ ನಿರೀಕ್ಷೆ ಇದೆ. ಸದ್ಯದ ಮುನ್ಸೂಚನೆಯಂತೆ ಜೂನ್ ಮೊದಲ ವಾರದಲ್ಲಿ ಕರಾವಳಿ ತೀರಕ್ಕೆ ಮುಂಗಾರು ಅಪ್ಪಳಿಸಲಿದ್ದು, ವಾಡಿಕೆಯಂತೆ ಅಥವಾ ಅದಕ್ಕಿಂತಲೂ ಹೆಚ್ಚಿನ ಮಳೆ ಸುರಿಯುವ ಸಾಧ್ಯತೆಯನ್ನು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಲೆಕ್ಕಾಚಾರದ ಪ್ರಕಾರ ಪೂರ್ವ ಮುಂಗಾರು ಅವಧಿಯಲ್ಲಿ ಕಡಿಮೆ ಮಳೆ ಸುರಿದರೆ, ಮುಂಗಾರು ಅವಧಿ ಹೆಚ್ಚಿನ ಮಳೆಯಾಗುತ್ತದೆ. ಬೇಸಗೆ ಮಳೆ ಕಡಿಮೆಯಾದರೆ ಭೂ ಭಾಗದಲ್ಲಿ ತೇವಾಂಶವೂ ಕಡಿಮೆ ಇದ್ದು, ಆಗ ಉಷ್ಣಾಂಶದಲ್ಲಿ ಏರಿಕೆ ಕಂಡು ವಾತಾವರಣದ ಒತ್ತಡ ಕಡಿಮೆಯಾಗುತ್ತದೆ. ಮುಂಗಾರು ಮಾರುತ ವೇಗ ಪಡೆದು ಉತ್ತಮ ಮಳೆ ಸುರಿಯುವ ಸಾಧ್ಯತೆ ಇದೆ. ಮಳೆ ಇಲ್ಲದೆ “ರೆಡ್ ಅಲರ್ಟ್”
ಕರಾವಳಿ ಭಾಗದಲ್ಲಿ ಪೂರ್ವ ಮುಂಗಾರು ಮಳೆ ಮರೀಚಿಕೆಯಾಗಿದ್ದು, ವಾಡಿಕೆಗಿಂತ ಭಾರೀ ಕಡಿಮೆ ಸುರಿದಿದೆ. ಇದೇ ಕಾರಣಕ್ಕೆ ಕರಾವಳಿ ಭಾಗವನ್ನು “ರೆಡ್ ಅಲರ್ಟ್’ ನೀಡಲಾಗಿದೆ. ಮಾರ್ಚ್ ತಿಂಗಳಿನಿಂದ ಈವರೆಗೆ ದ.ಕ.ದಲ್ಲಿ ಶೇ. 38, ಉಡುಪಿ ಜಿಲ್ಲೆಯಲ್ಲಿ ಶೇ. 53 ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ. 46ರಷ್ಟು ಪೂರ್ವ ಮುಂಗಾರು ಮಳೆ ಕೊರತೆ ಇದೆ. ಒಟ್ಟಾರೆ ಕರಾವಳಿಯಲ್ಲಿ ಶೇ. 44ರಷ್ಟು ಕೊರತೆ ಇದ್ದು, ಇದು ರಾಜ್ಯದ ಐದು ಭೂ ಪ್ರದೇಶಗಳಲ್ಲಿ ಅತ್ಯಧಿಕ.