Advertisement

ಭದ್ರಾವತಿಯಲ್ಲಿ ಏರುತ್ತಿರುವ ಸೋಂಕಿತರ ಸಂಖ್ಯೆ

09:48 PM Jan 21, 2022 | Girisha |

ಭದ್ರಾವತಿ: ತಾಲೂಕಿನಲ್ಲಿ ಗುರುವಾರ 120 ಕೊರೊನಾ ಪ್ರಕರಣ ದಾಖಲಾಗಿದ್ದು ಗ್ರಾಮೀಣ ಪ್ರದೇಶಗಳಿಗಿಂತ ನಗರ ವ್ಯಾಪ್ತಿಯಲ್ಲಿ ಸೋಂಕಿತರ ಸಂಖ್ಯೆ ಏರುತ್ತಿದೆ. ಮತ್ತೋರ್ವ ನ್ಯಾಯಾ ಧೀಶರಿಗೆ ಸೋಂಕು: ಬುಧವಾರ ಓರ್ವ ಮಹಿಳಾ ನ್ಯಾಯಾಧಿಧೀಶರು ಸೇರಿದಂತೆ15 ಮಂದಿ ಸಿಬ್ಬಂದಿಗಳಿಗೆ ಕೊರೊನಾ ಪಾಸಿಟಿವ್‌ ಕಂಡುಬಂದಿತ್ತು, ಗುರುವಾರ ಆರೋಗ್ಯ ಇಲಾಖೆ ನಡೆಸಿದ ತಪಾಸಣೆಯಿಂದಾಗಿ ಇದೇ ನ್ಯಾಯಾಲಯದ ಪುರುಷ ನ್ಯಾಯಾಧಿಧೀಶರು, ಓರ್ವ ಶಿರಸ್ತೇದಾರ್‌, ಶೀಘ್ರ ಲಿಪಿಗಾರರು ಸೇರಿದಂತೆ ಮತ್ತೆ ಹಲವು ನ್ಯಾಯಾಲಯದ ಸಿಬ್ಬಂದಿಗಳಲ್ಲಿ ಕೊರೊನಾ ಸೋಂಕು ಕಂಡು ಬಂದಿದ್ದು, ಅವರೆಲ್ಲರನ್ನೂ ಹೋಂ ಐಸೋಲೇಷನ್‌ಗೆ ಒಳಪಡಿಸಲಾಗಿದೆ.

Advertisement

ನ್ಯಾಯಾಲಯದಲ್ಲಿ ಸೋಂಕಿತರ ಸಂಖ್ಯೆ ಏರುತ್ತಿರುವುದು ಸಿಬ್ಬಂದಿಗಳಲ್ಲಿ ಹಾಗೂ ವಕೀಲರಲ್ಲಿ ಆತಂಕ ಹೆಚ್ಚಿಸಿದ್ದು, ಉತ್ಛ ನ್ಯಾಯಾಲಯ ಇದನ್ನು ಗಂಭೀರವಾಗಿ ಪರಿಗಣಿಸಿ ಪರಿಸ್ಥಿತಿ ಹತೋಟಿಗೆ ಬರುವ ಕೆಲ ಕಾಲ ನ್ಯಾಯಾಲ ಯವನ್ನು ಸೀಲ್‌ ಡೌನ್‌ ಮಾಡಬಹುದೇನೋ ಎಂಬ ನಿರೀಕ್ಷೆಯಲ್ಲಿದ್ದಾರೆ. ತಾಲೂಕಿನಲ್ಲಿ ಶಾಲಾ- ಕಾಲೇಜುಗಳಲ್ಲಿ ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿರುವುದರ ಕುರಿತು ಪತ್ರಿಕೆಯು ತಹಶೀಲ್ದಾರ್‌ ಪ್ರದೀಪ್‌ ಅವರನ್ನು ಸಂಪರ್ಕಿಸಿದಾಗ ಉತ್ತರಿಸಿದ ಅವರು, ರಾಜ್ಯದೆಲ್ಲೆಡೆಯಂತೆ ಭದ್ರಾವತಿಯಲ್ಲಿ ಸಹ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ.

ಆದರೆ ನಾವು ಕೋವಿಡ್‌ ಪರೀಕ್ಷೆಯನ್ನು ಹೆಚ್ಚಿಸಿದರೆ ಪಾಸಿಟಿವ್‌ ಪ್ರಕರಣ ಇನ್ನೂ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಪರೀಕ್ಷೆ ಕಡಿಮೆಗೊಳಿಸುತ್ತಿದ್ದೇವೆ ಎಂದರು. ಬಿಆರ್‌ಪಿಯಲ್ಲಿರುವ ಪಿಯು ಕಾಲೇಜಿನಲ್ಲಿ ಪಾಸಿಟಿವ್‌ ಪ್ರಕರಣ ಕಂಡುಬಂದ ಹಿನ್ನೆಲೆಯಲ್ಲಿ ಆ ಕಾಲೇಜಿಗೆ ಶುಕ್ರವಾರದಿಂದ ಒಂದು ವಾರ ರಜೆ ನೀಡುವಂತೆ ಸೂಚಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next