Advertisement

ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚುತ್ತಿದೆ ಗ್ರಾಮಗಳ ಕಸ

02:48 PM Dec 24, 2021 | Team Udayavani |

ಅಫಜಲಪುರ: ತಾಲೂಕಿನಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಹಾಯ್ದು ಹೋಗಿವೆ. ಪ್ರತಿ ಗ್ರಾಮದಲ್ಲೂ ರಸ್ತೆಗಳಿಗೆ ಹೊಂದಿಕೊಂಡು ಕಸ ಚೆಲ್ಲುವುದರಿಂದ ಮತ್ತು ಕಸಕ್ಕೆ ಬೆಂಕಿ ಹಚ್ಚುತ್ತಿರುವುದರಿಂದ ಬಹಳಷ್ಟು ಸಮಸ್ಯೆಯಾಗುತ್ತಿದೆ.

Advertisement

ತಾಲೂಕಿನ ಚವಡಾಪುರ, ಗೊಬ್ಬೂರ (ಬಿ), ಅತನೂರ, ಮಲ್ಲಾಭಾದ, ರಾಮನಗರ, ಮಣೂರ, ಕರ್ಜಗಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಪಕ್ಕದಲ್ಲಿ ಗ್ರಾಮಸ್ಥರು, ಪಂಚಾಯಿತಿಯವರು ಕಸ ತಂದು ಚೆಲ್ಲುತ್ತಿದ್ದಾರೆ. ಹೀಗೆ ಕಸ ತಂದು ಚೆಲ್ಲಿ ಅದು ಹೆಚ್ಚಾದಾಗ ಬೆಂಕಿ ಹಚ್ಚಲಾಗುತ್ತಿದೆ.

ಸುಗಮ ಸಂಚಾರಕ್ಕೆಂದು ಮಾಡಿರುವ ಹೆದ್ದಾರಿಗಳು ಕಸ ಚೆಲ್ಲಲು ಬಳಕೆಯಾಗುತ್ತಿವೆ. ಇದರಿಂದ ವಾಹನ ಸವಾರರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಕೂಡಲೇ ಸಂಬಂಧಪಟ್ಟವರು ಅಗತ್ಯ ಕ್ರಮ ಕೈಗೊಂಡು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಾಗಿದೆ. ಇಲ್ಲದಿದ್ದರೆ ತಿಪ್ಪೆಗಳಿಂದ ಮತ್ತು ಅದಕ್ಕೆ ಹೆಚ್ಚುವ ಬೆಂಕಿಯಿಂದಾಗಿ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ.

ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಲ್ಲಿ ಕಸ ವಿಲೇವಾರಿ ಮಾಡಲು ವಾಹನಗಳ ಸೌಕರ್ಯಗಳಿವೆ. ಸಿಬ್ಬಂದಿ ಇದ್ದಾರೆ. ಆದರೂ ವಿಲೇವಾರಿ ಮಾಡುತ್ತಿಲ್ಲ. ಕೂಡಲೇ ಪಂಚಾಯಿತಿಯವರು ಎಚ್ಚೆತ್ತುಕೊಂಡು ಕಸ ವಿಲೇವಾರಿ ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಿದೆ. ರಸ್ತೆ ಬದಿಯಲ್ಲಿ ಕಸ ಚೆಲ್ಲುವುದರಿಂದ ನೈರ್ಮಲ್ಯ ಸಮಸ್ಯೆಯಾಗುತ್ತಿದೆ. ಅಲ್ಲದೇ ಅನೇಕ ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ.

ಸ್ವಚ್ಛಭಾರತ ಮಿಷನ್‌ ಯೋಜನೆ ಅಡಿಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಘನತ್ಯಾಜ್ಯ ನಿರ್ವಹಣೆ ಘಟಕ ನಿರ್ಮಾಣವಾಗಬೇಕು. 28 ಗ್ರಾ.ಪಂಗಳ ಪೈಕಿ ಭೈರಾಮಡಗಿ, ಗುಡು, ಮಾಶಾಳ ಸೇರಿದಂತೆ 10 ಗ್ರಾಪಂಗಳಲ್ಲಿ ಕಸ ವಿಲೇವಾರಿ ಘಟಕ ಆಗಬೇಕಿಗಿದೆ. ಉಳಿದ 18 ಗ್ರಾ.ಪಂಗಳ ಪೈಕಿ ಏಳು ಗ್ರಾಪಂಗಳಿಗೆ ನಿವೇಶನದ ಕೊರತೆ ಇದ್ದು, ತಹಶೀಲ್ದಾರ್‌ ಗಮನಕ್ಕೆ ತರಲಾಗಿದೆ. ಉಳಿದ 11 ಗ್ರಾ.ಪಂಗಳಲ್ಲಿ ಪಿಆರ್‌ಇ, ಎಇಇ ನೀಲನಕ್ಷೆ ಸಿದ್ಧಪಡಿಸಿದ್ದು, ಶೀಘ್ರವೇ ಘಟಕ ನಿರ್ಮಾಣವಾಗಲಿದೆ. ಅಲ್ಲದೇ ಪಂಚಾಯಿತಿಗಳಿಗೆ ನೀಡಿರುವ ಕಸ ವಿಲೇವಾರಿ ವಾಹನಗಳನ್ನು ಸಮರ್ಪಕವಾಗಿ ಬಳಕೆ ಮಾಡುವಂತೆ ಸೂಚಿಸುವೆ. -ರಮೇಶ ಸುಲ್ಪಿ, ಇಒ, ತಾಪಂ

Advertisement
Advertisement

Udayavani is now on Telegram. Click here to join our channel and stay updated with the latest news.

Next