Advertisement

ತುಮಕೂರು ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಅರಣ್ಯ ನಾಶ   

09:48 PM Feb 03, 2021 | Team Udayavani |

ತುಮಕೂರು: ಇತ್ತೀಚೆಗೆ ಮೋಜಿಗಾಗಿ ಅರಣ್ಯಕ್ಕೆ ಬೆಂಕಿ ಹಚ್ಚುವುದು, ಪ್ರಾಣಿಗಳನ್ನು ಭೇಟೆಯಾಡಲು ರಾತ್ರಿ ವೇಳೆ ಬೆಂಕಿ ಹಾಕುವುದು ಹೆಚ್ಚಾಗಿದ್ದು, 2020 ಜನವರಿಯಿಂದ ಇಲ್ಲಿಯವರೆಗೆ ಕಾಡಿಗೆ ಬೆಂಕಿ ಹಚ್ಚುವ ಪ್ರಕರಣಗಳು 246 ಪ್ರಕರಣಗಳು ವರದಿಯಾಗಿವೆ.

Advertisement

ಸಾಮಾನ್ಯವಾಗಿ ಜಿಲ್ಲೆಯಲ್ಲಿ ನವೆಂಬರ್‌ ನಲ್ಲಿ ಮಳೆ ನಿಂತು ಹೋಗಿ, ಚಳಿಗಾಲ ಆರಂಭಾವಾಗುತ್ತದೆ. ಈ ಸಮಯದಲ್ಲಿ ಗುಡ್ಡಗಳಿಗೆ ಬೆಂಕಿ ಬೀಳುವುದು ಸಾಮಾನ್ಯ, ಈಗಾಗಲೇ ಅಲ್ಲಲ್ಲಿ ಬೆಟ್ಟಗುಡ್ಡಗಳಿಗೆ ಹೋದವರು ಬೆಂಕಿ ಹಚ್ಚುತ್ತಿರುವುದು ಕಂಡು ಬರುತ್ತಿರುವುದು ಒಂದೆಡೆಯಾದರೆ, ರಾತ್ರಿ ವೇಳೆ ಮೊಲ ಸೇರಿದಂತೆ ಇತರೆ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಹೋದವರು ಒಂದು ಭಾಗಕ್ಕೆ ಬೆಂಕಿ ಹಚ್ಚಿ ಇನ್ನೊಂದು ಭಾಗದಲ್ಲಿ ಬಲೆಹಾಕಿ ಪ್ರಾಣಿಗಳನ್ನು ಹಿಡಿದು ತರುವುದು ಇನ್ನೊಂದೆಡೆಯಾಗಿದೆ. ಇದಲ್ಲದೆ ಮಳೆಗಾಲದಲ್ಲಿ ದನಕರುಗಳಿಗೆ ಹೊಸ ಚಿಗುರು ಹುಲ್ಲುಬೇಕೆಂದರೆ ಮಳೆ ನಿಂತು ಕೆಲವು ದಿನಗಳಲ್ಲಿ ಬೆಟ್ಟಗುಡ್ಡ ಕಾಡಿನಲ್ಲಿ ಬಿಸಿಲಿನ ಝಳಕ್ಕೆ ಒಣಗುವ ಹುಲ್ಲಿಗೆ ಬೆಂಕಿ  ಹಚ್ಚಿದರೆ ಹುಲ್ಲು ಸುಟ್ಟುಹೋಗಿ ಮಳೆಗಾಲದಲ್ಲಿ ಮಳೆಬಿದ್ದಾಗ ಹೊಸ ಹುಲ್ಲು ಚೆನ್ನಾಗಿ ಬಂದು ದನಕರುಗಳಿಗೆ ಒಳ್ಳೆಯ ಮೇವು ಸಿಗುತ್ತದೆ ಎನ್ನುವ ಕಾರಣವನ್ನೂ ಮುಂದುಡುವುದಿದೆ.

ಜಿಲ್ಲೆಯಲ್ಲಿ 2020ರಿಂದ ಇಲ್ಲಿಯವರೆಗೆ 264 ಬೆಂಕಿ ಪ್ರಕರಣಗಳು ದಾಖಲಾಗಿವೆ. ದೇವರಾಯನದುರ್ಗದ ನಾಮದ ಚಿಲುಮೆ  ಸೇರಿದಂತೆ ತುಮಕೂರು ತಾಲೂಕಿನಲ್ಲಿ 15 ಸಾವಿರಕ್ಕೂ ಹೆಚ್ಚು ಅರಣ್ಯ ಪ್ರದೇಶವಿದ್ದು, ಕಳೆದ ವರ್ಷ ಬಿದ್ದ ಬೆಂಕಿಯಿಂದ 200  ಎಕರೆಗೂ ಹೆಚ್ಚು ಪ್ರದೇಶ ಅರಣ್ಯ ನಾಶವಾಗಿರುವುದು ಇಲಾಖೆಯ ಅಂಕಿ ಅಂಶಗಳಿಂದ ತಿಳಿದುಬಂದಿದೆ.

ತಿಳಿವಳಿಕೆ ಕೊರತೆ: ತಾಲೂಕಿನ ಪ್ರಸಿದ್ಧ ಪ್ರವಾಸಿ ಕೇಂದ್ರ ದೇವರಾಯನದುರ್ಗದ ಬೆಟ್ಟವೂ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಬೆಂಕಿ ಪ್ರಕರಣಗಳು ಕಂಡು ಬಂದಿದೆ. ಈ ಭಾಗದ ಅರಣ್ಯದಲ್ಲಿ ಕಾಡ್ಗಿಚ್ಚು ಉಂಟಾಗುವುದಿಲ್ಲ. ಆದರೆ ಜನರ ತಿಳಿವಳಿಕೆ ಕೊರತೆಯಿಂದ ಅರಣ್ಯದಲ್ಲಿ ಬೆಂಕಿ ಹಚ್ಚಿ ಅಮೂಲ್ಯ ಸಂಪತ್ತನ್ನು ನಾಶ ಮಾಡುತ್ತಿದ್ದಾರೆ. ಸರ್ಕಾರ ಪ್ರತಿವರ್ಷ ಅರಣ್ಯ ಸಂಪತ್ತನ್ನು ಉಳಿಸಲು ಗಿಡ ಮರ ಬೆಳೆಸಲೆಂದು ಕೋಟ್ಯಂತರ ರೂ ಹಣವನ್ನು ಖರ್ಚು ಮಾಡುತ್ತಿದೆ. ಸ್ವಾಂತಂತ್ರÂ ಬಂದಾಗಿನಿಂದಲೂ ಪ್ರತಿವರ್ಷ ಗಿಡ ಮರ ಪೋಷಿಸಲು ಕೋಟಿ ಕೋಟಿ ಹಣ ಬಿಡುಗಡೆಯಾಗಿದೆ. ಅರಣ್ಯಕ್ಕಾಗಿ ಖರ್ಚು ಮಾಡಿರುವ ಹಣ ಲೆಕ್ಕ ನೋಡಿದರೆ ಎಲ್ಲಡೆ ಅರಣ್ಯ ಸಂಪತ್ತು ಹೆಚ್ಚಬೇಕಾಗಿತ್ತು. ಆದರೆ, ಇದರ ವಿರುದ್ಧ ಪ್ರತಿಕೂಲ ಪರಿಣಾಮ ಬೀರಿದೆ.

 ಇದನ್ನೂ ಓದಿ :ಅಂಡಮಾನ್‌ ಕೋವಿಡ್ ಮುಕ್ತ ಪ್ರದೇಶ? ಹೊಸದಾಗಿ ದೃಢವಾಗದ ಸೋಂಕು ಪ್ರಕರಣ

Advertisement

ಜನರಲ್ಲಿ ತಿಳಿವಳಿಕೆ ಮೂಡಿಸುವುದರ ಜತೆಗೆ ಸಿಬ್ಬಂದಿಯನ್ನು ಹೆಚ್ಚು ನಿಯೋಜಿಸಿ ಕಾಡನಲ್ಲಿ ಬೆಂಕಿ ಹಚ್ಚುವವರ ವಿರುದ್ಧ ಕಟ್ಟುನಿಟ್ಟಿನ  ಕ್ರಮ ಕೈಗೊಳ್ಳಬೇಕಿದೆ. ಶಿಸ್ತು ಕ್ರಮ ಜರುಗಿಸದಿದ್ದರೆ ಅರಣ್ಯ ನಾಶ ನಿರಂತರವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next