Advertisement

ಶೈಕ್ಷಣಿಕ ಒತ್ತಡದಿಂದ ಹೆಚ್ಚುತ್ತಿರುವ ಮಕ್ಕಳ ನಾಪತ್ತೆ: ಡಿಸಿ ಕಳವಳ

03:52 PM Jun 23, 2017 | Team Udayavani |

ಮಂಗಳೂರು: ಅತಿಯಾದ ಕಲಿಕೆಯ ಒತ್ತಡದಿಂದ ಮಕ್ಕಳು ನಾಪತ್ತೆ ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬಗ್ಗೆ ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ ಕಳವಳ ವ್ಯಕ್ತಪಡಿಸಿದ್ದಾರೆ.

Advertisement

ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

2014ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 214 ಮಕ್ಕಳು ನಾಪತ್ತೆಯಾಗಿದ್ದು, ಈ ಪೈಕಿ 200 ಮಕ್ಕಳು ಪತ್ತೆಯಾಗಿದ್ದಾರೆ. ಪತ್ತೆಯಾದ ಮಕ್ಕಳನ್ನು ವಿಚಾರಿಸಿದಾಗ ಸುಮಾರು 51 ಮಕ್ಕಳು ಕಲಿಕೆಯ ಬಗ್ಗೆ ಶಾಲೆ ಹಾಗೂ ಪಾಲಕರಿಂದ ಒತ್ತಡದಿಂದ ಮನೆ ಬಿಟ್ಟು ಹೋಗಿರುವುದಾಗಿ ತಿಳಿಸಿರುತ್ತಾರೆ. ಇದೊಂದು ಗಂಭೀರ ವಿಷಯವಾಗಿದೆ. ಮಕ್ಕಳ ಪ್ರತಿಭೆಗೆ ಪೂರಕ ವಾತಾವರಣ ಇರಬೇಕು. ಕಲಿಕೆಯ ಹೆಸರಿನಲ್ಲಿ ಅತಿಯಾದ ಒತ್ತಡ ಸಲ್ಲದು. ಪಾಲಕರು ಬೇರೆ ಮಕ್ಕಳ ಅಂಕಗಳನ್ನು ತಮ್ಮ ಮಕ್ಕಳ ಅಂಕಗಳೊಂದಿಗೆ ಹೋಲಿಕೆ ಮಾಡುವುದು ಉತ್ತಮವಲ್ಲ. ಪಾಲಕರ ಈ ಮನಃಸ್ಥಿತಿ ಬದಲಾಗಬೇಕಿದೆ ಎಂದು ಹೇಳಿದರು.

ಶಿಕ್ಷಣ ಇಲಾಖೆಯು ಶಿಕ್ಷಕರ ಮೂಲಕ ಮಕ್ಕಳ ಮಾನಸಿಕ ಒತ್ತಡ ತಗ್ಗಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಜಿಲ್ಲಾಧಿಕಾರಿಗಳು ಡಿಡಿಪಿಐಗೆ ಸೂಚಿಸಿದರು.ಜಿಲ್ಲೆಯಲ್ಲಿ ಕೌಟುಂಬಿಕ ಸಮಸ್ಯೆಗಳಿಂದ 57 ಮಕ್ಕಳು, ಒಂಟಿತನದಿಂದ 36 ಹಾಗೂ ಪ್ರೇಮ ಪ್ರಕರಣಗಳಲ್ಲಿ ನಾಪತ್ತೆಯಾಗಿದ್ದರು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಉಸ್ಮಾನ್‌ ಸಭೆಗೆ ಮಾಹಿತಿ ನೀಡಿದರು.

ಮಂಗಳೂರಲ್ಲೂ  ದತ್ತು  ಕೇಂದ್ರ ಅಗತ್ಯ
ಪ್ರಸಕ್ತ ದ.ಕ. ಜಿಲ್ಲೆಯಲ್ಲಿ ಮಕ್ಕಳನ್ನು ದತ್ತು ಪಡೆ ಯುವ ಏಕೈಕ ಕೇಂದ್ರ ಪುತ್ತೂರಿನಲ್ಲಿದೆ. ಮಂಗಳೂರಿ ನಲ್ಲಿಯೂ ಮಕ್ಕಳ ದತ್ತು ಕೇಂದ್ರ ತೆರೆ ಯಲು ಆಸಕ್ತ ಸಂಸ್ಥೆಗಳಿಂದ ಪ್ರಸ್ತಾವನೆ ಗಳನ್ನು ಆಹ್ವಾನಿಸಬೇಕು. ಅಲ್ಲಿನ ಮೂಲ ಸೌಕರ್ಯ ವ್ಯವಸ್ಥೆಗಳನ್ನು ಪರಿಶೀಲಿಸಿ ದತ್ತು ಕೇಂದ್ರ ತೆರೆ ಯಲು ಅನುಮತಿಸಬೇಕು. ಮಂಗಳೂರಿ ನಲ್ಲಿ ಎಲ್ಲ ವಿಧದ ಮಕ್ಕಳ ವೈದ್ಯಕೀಯ ತಜ್ಞರು ಇರು ವುದರಿಂದ ಮಕ್ಕಳ ಆರೋಗ್ಯ ದೃಷ್ಟಿಯಿಂದ ದತ್ತು ಕೇಂದ್ರ ಅಗತ್ಯವಿದೆ ಎಂದು ಡಿಸಿ ತಿಳಿಸಿದರು.

Advertisement

ಪುತ್ತೂರು ದತ್ತು ಕೇಂದ್ರದಲ್ಲಿ ಇದುವರೆಗೆ 105 ಮಕ್ಕಳನ್ನು ದಾಖಲಿಸಲಾಗಿದ್ದು, ಈ ಪೈಕಿ 65 ಮಕ್ಕಳನ್ನು ದತ್ತು ನೀಡಲಾಗಿದೆ. ಇದುವರೆಗೆ 292 ದಂಪತಿಗಳು ದತ್ತು ಸ್ವೀಕಾರಕ್ಕೆ ಅರ್ಜಿ ಸಲ್ಲಿಸಿ ದ್ದಾರೆ. ಪ್ರಸಕ್ತ 130 ದಂಪತಿ ಕಾಯುವಿಕೆ ಪಟ್ಟಿ ಯಲ್ಲಿದ್ದಾರೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ತಿಳಿಸಿದರು.

ಪುತ್ತೂರು ದತ್ತು ಕೇಂದ್ರದಲ್ಲಿ 2011ರಿಂದ ಇದುವರೆಗೆ 10 ಮಕ್ಕಳು ಸಾವನ್ನಪ್ಪಿರುವುದು ಗಂಭೀರ ವಿಷಯವಾಗಿದ್ದು, ಈ ಬಗ್ಗೆ ಸಂಸ್ಥೆಗೆ ಎಚ್ಚರಿಕೆ ನೀಡಲು ಅವರು ಆದೇಶಿಸಿದರು. ಅನಾಥ ಮಕ್ಕಳನ್ನು ದತ್ತು ಕೇಂದ್ರಕ್ಕೆ ಸೇರಿಸುವ ಮೊದಲು ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.

ಸೌಲಭ್ಯಗಳಿಲ್ಲದ ಕೇಂದ್ರ ಗಳಿಗೆ ನೋಟಿಸ್‌ ಜಾರಿ ಮಾಡುವಂತೆ ಹಾಗೂ ಇದನ್ನು ಪಾಲಿಸದಿದ್ದರೆ ಅವುಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ಸೂಚಿಸಿದರು. ಮದ್ರಸಗಳಲ್ಲಿ ಮಕ್ಕಳ ಸಲಹಾ ಪೆಟ್ಟಿಗೆ ತೆರೆಯಲು ಕ್ರಮ ಕೈಗೊಳ್ಳಲು ಅವರು ವಕ್ಫ್ ಅಧಿಕಾರಿಗೆ ಸೂಚಿಸಿದರು. ಶಾಲಾ ವಾಹನಗಳನ್ನು ನಿಯಮಿತವಾಗಿ ತಪಾಸಣೆ ನಡೆಸಲು ಆರ್‌ಟಿಒ ಅಧಿಕಾರಿಗೆ ಅವರು ಸೂಚಿಸಿದರು.ಪ್ರಮುಖರಾದ ಶಾಹುಲ್‌ ಹಮೀದ್‌, ಮಲ್ಲನಗೌಡ, ಎನ್‌.ಆರ್‌. ಉಮೇಶ್‌ ಉಪಸ್ಥಿತರಿದ್ದರು.

ಪೋಕೊÕà: 347 ಪ್ರಕರಣ
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ದಡಿ ಪೋಕೊÕà ಕಾಯಿದೆಯಲ್ಲಿ ಜಿಲ್ಲೆ ಯಲ್ಲಿ 2012 ರಿಂದ ಇದುವರೆಗೆ 347 ಪ್ರಕ  ರಣ ಗಳು ದಾಖ ಲಾಗಿವೆ. ಇದರಲ್ಲಿ  308 ಪ್ರಕರಣ ವಿಚಾರಣಾ ಹಂತದಲ್ಲಿದ್ದು, 6 ಕೇಸಿ ನಲ್ಲಿ  ಶಿಕ್ಷೆಯಾಗಿದೆ ಎಂದು ತಿಳಿಸಲಾಯಿತು.

ಎಲ್ಲ ಶಾಲೆಗಳಲ್ಲಿ ಮಕ್ಕಳ ಸಲಹಾ ಪೆಟ್ಟಿಗೆ ಅಳವಡಿಸಬೇಕು. ಇದನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಮಟ್ಟದ ಅಧಿಕಾರಿ ತೆರೆದು ಪರಿಶೀಲಿಸಬೇಕು. ಬಿಇಒ ಅವರು ಪ್ರತಿ ತಿಂಗಳು ನಡೆಸುವ ಶಾಲಾ ಶಿಕ್ಷಕರ ಸಭೆಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ನಿಯಮಿತವಾಗಿ ಪರಿಶೀಲಿಸ ಬೇಕು ಎಂದು ಜಿಲ್ಲಾಧಿಕಾರಿ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next