Advertisement
ಜಿಲ್ಲೆಯ ಮಧುಗಿರಿ, ಪಾವಗಡ, ಕೊರಟಗೆರೆ ಸೇರಿದಂತೆ ವಿವಿಧ ಕಡೆಗಳಲ್ಲಿ ಕರಡಿ ದಾಳಿಗಳು ಹೆಚ್ಚುತ್ತಿವೆ. ಅದೇ ರೀತಿಯಲ್ಲಿ ಕುಣಿಗಲ್, ತಿಪಟೂರು, ಶಿರಾ, ಸೇರಿದಂತೆ ಇತರೆ ತಾಲೂಕುಗಳಲ್ಲಿ ಚಿರತೆಗಳು ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಯುವುದು ಮುಂದುವರಿದಿದೆ. ಕಾಡುಪ್ರಾಣಿಗಳು ನಾಡಿಗೆ ಬರು ವುದು ನಿರಂತರವಾಗುತ್ತಿದೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಜೀವವನ್ನು ಕೈಯಲ್ಲಿಡಿದು ಬಾಳು ನಡೆಸುವಂತಾಗಿದೆ.
Related Articles
Advertisement
ಬರಿದಾಗುತ್ತಿರುವ ದೇವರಾಯನದುರ್ಗ ಅರಣ್ಯ: ನಗರದ ಸಮೀಪವಿರುವ ದೇವರಾಯನದುರ್ಗ ಅರಣ್ಯ ಪ್ರದೇಶ ಇಂದು ಮರಗಳ್ಳರ ಅಟ್ಟಹಾಸಕ್ಕೆ ಬಲಿಯಾಗಿ ಅರಣ್ಯದಲ್ಲಿದ್ದ ಪ್ರಮುಖ ಮರಗಳು ಇಂದು ಕಣ್ಮರೆಯಾಗುತ್ತಿವೆ. ಇದರಿಂದ ಈ ಅರಣ್ಯ ಪ್ರದೇಶದಲ್ಲಿದ್ದ ಅಮೂಲ್ಯ ಜೀವ ಜಂತುಗಳು ಮರೆಯಾಗಿವೆ. ಇದಲ್ಲದೆ ಮಧುಗಿರಿ ತಾಲೂಕಿನ ಅರಣ್ಯ ಪ್ರದೇಶಗಳು, ಗುಬ್ಬಿ, ತುರುವೇಕೆರೆ, ಚಿಕ್ಕನಾಯಕನಹಳ್ಳಿ ಹಾಗೂ ಶಿರಾ ತಾಲೂಕು ಬುಕ್ಕಾಪಟ್ಟಣ ಅರಣ್ಯ ಪ್ರದೇಶಗಳು ಬಟಾ ಬಯಲಾಗುತ್ತಿವೆ.
ಈ ಅರಣ್ಯದಲ್ಲಿ ಅತ್ಯುತ್ತಮವಾದ ಗಿಡ ಮರಗಳು ಬೆಳೆದು ನಿಂತಿದ್ದವು. ಆದರೆ, ಈ ಮರಗಿಡಗಳನ್ನು ಅವ್ಯಾಹತವಾಗಿ ನಾಶಪಡಿಸಿದರ ಜೊತೆಗೆ ಜಿಲ್ಲೆಗೆ ಹೊಂದಿಕೊಂಡಂತೆ ಇರುವ ಅರಣ್ಯ ಪ್ರದೇಶಗಳಲ್ಲಿ ಮರಗಳು ನಾಶವಾಗುತ್ತಿರುವ ಕಾರಣ ಚಿರತೆ, ಕರಡಿ, ಕಾಡುಹಂದಿ, ಕೃಷ್ಣಮೃಗ ಸೇರಿದಂತೆ ಇತರೆ ಪ್ರಾಣಿಗಳು ಕಾಡಿನಲ್ಲಿ ನೀರು, ಆಹಾರ ದೊರಕದೆ ನಾಡಿನತ್ತ ಮುಖಮಾಡಿವೆ.
ನಿಲ್ಲದ ಚಿರತೆ, ಕರಡಿ ದಾಳಿ: ಜಿಲ್ಲೆಯಲ್ಲಿ ಕರಡಿ ದಾಳಿ ನಿರಂತರವಾಗಿ ನಡೆಯುತ್ತಲೇ ಇದೆ. ಮಧುಗಿರಿ, ಪಾವಗಡ, ಕೊರಟಗೆರೆ ತಾಲೂಕುಗಳಲ್ಲಿ ಮನುಷ್ಯರ ಮೇಲೆ ಕರಡಿಗಳ ದಾಳಿ ನಿರಂತರವಾಗಿದೆ. ಹಲವು ಜನರು ಕರಡಿ ದಾಳಿಯಿಂದ ಶಾಶ್ವತವಾಗಿ ಅಂಗ ವಿಕಲಗಿದ್ದಾರೆ. ಕೆಲವರು ಮೃತಪಟ್ಟಿದ್ದಾರೆ.
ಇದೇ ರೀತಿ ಯಲ್ಲಿ ಚಿರತೆ ಮತ್ತು ಕಾಡು ಹಂದಿಗಳು ಮನುಷ್ಯರ ಮೇಲೆ ಮತ್ತು ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡಿವೆ. 2005-06 ರಿಂದ 2019-20 ರ ಜೂನ್‌ವರೆಗೆ 34 ಜನರು ಕಾಡುಪ್ರಾಣಿಗಳ ದಾಳಿಗೆ ತುತ್ತಾಗಿ ಮೃತಪಟ್ಟಿದ್ದಾರೆ 470 ಜನರು ಗಾಯಗೊಂಡಿದ್ದಾರೆ.
ರೈತರ ಬೆಳೆ ನಷ್ಟ : ಜಿಲ್ಲೆಯಲ್ಲಿ ಪ್ರತಿ ಭಾರಿಯೂ ಕಾಡಿನಿಂದ ನಾಡಿಗೆ ಬರುವ ಕಾಡು ಪ್ರಾಣಿಗಳಿಂದ ರೈತರು ಬೆಳೆದಿರುವ ಬೆಳೆಗಳನ್ನು ನಿರಂತರವಾಗಿ ನಾಶಪಡಿಸುತ್ತಿವೆ. ರಾತ್ರಿ ಎಲ್ಲಾ ರೈತರ ತೋಟ, ಹೊಲ, ಗದ್ದೆಗಳ ಮೇಲೆ ದಾಳಿ ಮಾಡಿ ಬೆಳೆ ಹಾನಿ ಮಾಡುತ್ತಿವೆ. ಈವರೆಗೆ ಕಾಡಾನೆಗಳು ಹೆಚ್ಚು ರೈತರ ಬೆಳೆಗಳನ್ನು ಹಾನಿ ಮಾಡುತ್ತಿದ್ದವು. ಆದರೆ ಕಳೆದ ವರ್ಷದಿಂದ ಕಾಡಾನೆಗಳ ಉಪಟಳ ನಿಂತಿದೆ. ಆದರೆ, ಕೃಷ್ಣಮೃಗ, ಕಾಡಂದಿ, ಕೆಲವೆಡೆ ನವಿಲು ಸೇರಿದಂತೆ ಇತರೆ ಪ್ರಾಣಿಗಳಿಂದ ರೈತರ ಬೆಳದ ಬೆಳೆಗಳಿಗೆ ತೊಂದರೆ ಹೆಚ್ಚಾಗಿದೆ.
● ಚಿ.ನಿ.ಪುರುಷೋತ್ತಮ್