Advertisement

ಗೋವಾದಲ್ಲಿ ಹೆಚ್ಚಿದ ಪ್ರವಾಸಿಗರು: ದರಗಳು ದುಪ್ಪಟ್ಟು

04:57 PM Aug 10, 2022 | Team Udayavani |

ಪಣಜಿ: ರಕ್ಷಾಬಂಧನ ಮತ್ತು ಆಗಸ್ಟ್ 15 ರ ಸ್ವಾತಂತ್ರ್ಯ ದಿನದ ನಡುವೆ ಸತತ ಮೂರು-ನಾಲ್ಕು ದಿನಗಳ ರಜೆ ಇರುವುದರಿಂದ ಗೋವಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿರುವುದು ಕಂಡುಬರುತ್ತಿದೆ.  ಈ ಹಿನ್ನೆಲೆಯಲ್ಲಿ ಮುಂಗಡ ನೋಂದಣಿಯಿಂದಾಗಿ ರಾಜ್ಯದ ಬಹುತೇಕ ಹೋಟೆಲ್ ಗಳು ಈಗಾಗಲೇ ಭರ್ತಿಯಾಗುತ್ತಿವೆ. ಮತ್ತೊಂದೆಡೆ, ಪ್ರಯಾಣಿಕರನ್ನು ಕರೆತರುವ ಬಸ್‍ಗಳು ಮತ್ತು ವಿಮಾನಗಳ ಪ್ರಯಾನ ದರಗಳು ಬಹುತೇಕ ದುಪ್ಪಟ್ಟಾಗಿದೆ.

Advertisement

ಸದ್ಯ ರಜಾ ದಿನದ ಸಂದರ್ಭದಲ್ಲಿ ದೇಶಿಯ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬಹುದು ಎಂದು ನಿರೀಕ್ಷಿಸಲಾಗಿದೆ, ವಿಮಾನಗಳು, ರೈಲುಗಳು ಮತ್ತು ಬಸ್‍ಗಳ ಟಿಕೆಟ್ ದರಗಳು ಹೆಚ್ಚಾಗಿದೆ. ಆಗಸ್ಟ್ 11 ರಿಂದ ಗುರುವಾರ ರಾಜ್ಯಕ್ಕೆ ಬರುವ ಬಹುತೇಕ ವಿಮಾನಗಳು, ರೈಲುಗಳು ಮತ್ತು ಬಸ್‍ ಟಿಕೆಟ್‍ಗಳು ಮುಂಗಡ ಬುಕ್ ಆಗಿದೆ. ಹೀಗಾಗಿ ಟಿಕೆಟ್ ಬೇಕು ಎನ್ನುವವರು ಹೆಚ್ಚಿನ ಹಣ ಪಾವತಿಸಿ ಟಿಕೆಟ್ ಖರೀದಿಸಬೇಕಾಗಲಿದೆ.

ಗುರುವಾರದಿಂದ ಭಾನುವಾರದವರೆಗೆ ಸಾಮಾನ್ಯ ವಿಮಾನ ಟಿಕೆಟ್ ಕನಿಷ್ಠ 6 ಸಾವಿರ ರೂಪಾಯಿಗಳಾಗಿದ್ದರೆ, ಕೆಲವು ವಿಮಾನಯಾನ ಸಂಸ್ಥೆಗಳ ಟಿಕೆಟ್ ದರ 15 ಸಾವಿರಕ್ಕೂ ಹೆಚ್ಚು ತಲುಪಿದೆ.  ಅಲ್ಲದೆ, ಮುಂಬೈ, ಪುಣೆಯಿಂದ ಗೋವಾಕ್ಕೆ ಬರುವ ಬಸ್‍ಗಳ ಟಿಕೆಟ್ ದರ ಸಾಮಾನ್ಯಕ್ಕಿಂತ ಒಂದೂವರೆ ಪಟ್ಟು ಹೆಚ್ಚಾಗಿದೆ.

ವಿಮಾನ ಪ್ರಯಾಣ ದುಬಾರಿ
ಗೋವಾಕ್ಕೆ ಬರಲು ವಿಮಾನ ಪ್ರಯಾಣದರ ಕನಿಷ್ಠ 6 ಸಾವಿರ ರೂಗಳಿಂದ  15 ಸಾವಿರ ರೂ ಗೆ ಹೆಚ್ಚಳವಾಗಿದೆ. ಇಷ್ಟೇ ಅಲ್ಲದೆಯೇ  ಆಗಸ್ಟ್ 16ರಿಂದ ಗೋವಾದಿಂದ ವಾಪಸಾಗುವ ವಿಮಾನ ಟಿಕೆಟ್ ದರ 8ರಿಂದ 12 ಸಾವಿರಕ್ಕೆ ಏರಿಕೆಯಾಗಿದೆ. ಐಷಾರಾಮಿ ಹೋಟೆಲ್ ರೂಂಗಳು ದಿನವೊಂದಕ್ಕೆ  ಕನಿಷ್ಠ 10 ಸಾವಿರದಿಂದ, ಮಧ್ಯಮ ಶ್ರೇಣಿಯ ಹೋಟೆಲ್‍ಗಳು ಕನಿಷ್ಠ 5 ಸಾವಿರದಿಂದ ಪ್ರಾರಂಭವಾಗುತ್ತವೆ.

ಪ್ರವಾಸಿಗರ ಜೇಬಿಗೆ ಕತ್ತರಿ
ಜಗತ್ಪ್ರಸಿದ್ಧ ಪ್ರವಾಸಿ ತಾಣ ಗೋವಾಕ್ಕೆ ಆಗಮಿಸಲು ವಿಮಾನ ಟಿಕೆಟ್ ದುಬಾರಿಯಾಗಿದೆ ಮತ್ತು ರೈಲ್ವೆಯೂ ದುಬಾರಿಯಾಗಿದೆ, ಖಾಸಗಿ ಬಸ್ ದರ ಕೂಡ ಹೆಚ್ಚಾಗಿದೆ. ಗೋವಾ ತಲುಪಲು ಬಸ್ ಟಿಕೆಟ್ ದರ 2500 ರಿಂದ 6 ಸಾವಿರಕ್ಕೆ ತಲುಪಿದೆ. ಹಾಗಾಗಿ ಆಗಸ್ಟ್ 15 ರಂದು ಗೋವಾ ಮೂಲಕ ಹೋಗಲು 3,000 ರೂ.ನಿಂದ 5,000 ರೂ, ಆಗಸ್ಟ್ 16 ರಂದು 2,000 ರೂ.ನಿಂದ 3,000 ರೂ. ಹೆಚ್ಚಿನ ಹಣವನ್ನು ಪ್ರವಾಸಿಗರು ತೆರಲೇಬೇಕಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next