Advertisement

ವೈದ್ಯಕೀಯ ಕ್ಷೇತ್ರದಲ್ಲಿ ಸ್ವಾವಲಂಬನೆ ಹೆಚ್ಚಿದೆ: ಗೆಹ್ಲೋಟ್

11:29 PM Feb 27, 2024 | Team Udayavani |

ಬೆಂಗಳೂರು: ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (ಆರ್‌ಜಿಯುಎಚ್‌ಎಸ್‌) 26ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್ ಅವರು ನಿಮಾನ್ಸ್‌ ಕನ್ವೆನ್ಸನ್‌ ಸೆಂಟರ್‌ನಲ್ಲಿ 88 ವಿದ್ಯಾರ್ಥಿಗಳಿಗೆ 100 ಚಿನ್ನದ ಪದಕ ಸೇರಿದಂತೆ ಒಟ್ಟು 52,650 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿದರು.

Advertisement

ವೈದ್ಯಕೀಯ ಕ್ಷೇತ್ರದಲ್ಲಿ ಸ್ವಾವಲಂಬನೆ ಹೆಚ್ಚಿದೆಪ್ರಸ್ತುತ ದಿನಮಾನಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಭಾರತದ ಸ್ವಾವ ಲಂಬನೆ ಮತ್ತಷ್ಟು ಹೆಚ್ಚಿದೆ. ನಾವು ಉತ್ತಮ ವೈದ್ಯಕೀಯ ತಂತ್ರಜ್ಞಾನ, ಉತ್ತಮ ರೋಗಶಾಸ್ತ್ರಜ್ಞರು ಮತ್ತು ಉತ್ತಮ ವೈದ್ಯಕೀಯ ಸೌಲಭ್ಯ ಗಳನ್ನು ಹೊಂದಿದ್ದೇವೆ. ಪ್ರಾಚೀನ ಕಾಲದಿಂದಲೂ ಭಾರತವು ವೈದ್ಯಕೀಯ ವಿಜ್ಞಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.

ವೈದ್ಯಕೀಯ ವಿಜ್ಞಾನವು ಹೊಸ ತಂತ್ರ
ಜ್ಞಾನಗಳ ಮೂಲಕ ಹಳೆಯ ಸಮಸ್ಯೆ ಗಳನ್ನು ಪರಿಹರಿಸುವಲ್ಲಿ ಸಹಾಯ ಮಾಡುತ್ತಿದೆ. ದೇಶದಲ್ಲಿ ಒಟ್ಟು 706 ವೈದ್ಯಕೀಯ ಕಾಲೇಜುಗಳಿವೆ. ವೈದ್ಯಕೀಯ ಕಾಲೇಜುಗಳ ಸಂಖ್ಯೆ ಯಲ್ಲಿ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದರು.

ವೈದ್ಯರ ಪ್ರಮಾಣ ಹೆಚ್ಚಾಗಬೇಕು
ಸಚಿವ ಡಾ| ಶರಣಪ್ರಕಾಶ್‌ ಆರ್‌. ಪಾಟೀಲ್‌ ಮಾತನಾಡಿದರು.ದಿಲ್ಲಿಯ ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧ್ಯಕ್ಷ ಡಾ| ಬಿ.ಎನ್‌. ಗಂಗಾಧರ್‌ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಸಾವಿರ ಮಂದಿಗೆ ಒಬ್ಬ ವೈದ್ಯನಿರಬೇಕು ಎಂಬ ನಿಯಮವಿದೆ. ಆದರೆ, ಕರ್ನಾಟಕದಲ್ಲಿ ಸಾವಿರಕ್ಕೆ ಇಬ್ಬರು ವೈದ್ಯರಿದ್ದಾರೆ. ವೈದ್ಯರ ಪ್ರಮಾಣ ಇನ್ನಷ್ಟು ಹೆಚ್ಚಬೇಕು ಎಂದು ತಿಳಿಸಿದರು.

ನಾನು ಕಂಡ ಕನಸನ್ನು ನನಸು ಮಾಡಿರುವುದರ ಬಗ್ಗೆ ಖುಷಿ ಇದೆ. ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಸೇವೆ ಸಲ್ಲಿಸಿ ಹಲವು ಜನರಿಗೆ ನೆರವು ನೀಡಬೇಕು ಎಂಬ ಗುರಿ ಇದೆ. ಈ ಸಾಧನೆಗೆ ನೆರವಾದ ಪಾಲಕರು, ಉಪನ್ಯಾಸಕರಿಗೆ ಧನ್ಯವಾದ ಹೇಳುತ್ತೇನೆ.
-ಡಾ| ಎನ್‌.ಪ್ರಜ್ಞಾ,
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಉಡುಪಿ. (4 ಚಿನ್ನದ ಪದಕ)

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next