ಅರಸೀಕೆರೆ: ತಾಲೂಕಿನ ತೆಂಗು ಬೆಳೆಗಾರರ ಬದುಕು ಹಾವು ಏಣಿ ಆಟದಂತಾಗಿದ್ದು ಮಳೆ-ಬೆಳೆ ಇದ್ದಾಗಮಾರುಕಟ್ಟೆಯಲ್ಲಿ ಬೆಲೆ ಇಲ್ಲ. ಬೆಲೆ ಇದ್ದಾಗ ರೈತರ ಕೈಯಲ್ಲಿ ಬೆಳೆ ಇಲ್ಲ.
ಕಡಿಮೆ ಬೆಲೆಗೆ ಕೊಬ್ಬರಿ ಮಾರಾಟ: ಮಳೆ ಕೊರತೆ, ನುಸಿ ಪೀಡೆ ಸೇರಿದಂತೆ ವಿವಿಧ ಕೀಟ ದಾಳಿಯ ಜತೆಗೆ ಮಾರುಕಟ್ಟೆ ಯಲ್ಲಿ ಕೊಬ್ಬರಿ ಧಾರಣೆ ಕುಸಿತದಿಂದ ಕಂಗಾಲಾಗಿದ್ದ ತೆಂಗು ಬೆಳೆಗಾರರು, ಬೆಳೆದ ಬೆಳೆಯನ್ನು ಈಗಾಗಲೇ ನಫೆಡ್ ಮೂಲಕ ಕಡಿಮೆ ಬೆಲೆಗೆ ಕೊಟ್ಟಿರುವುದಕ್ಕೆ ತಮ್ಮ ಕೈಯನ್ನು ತಾವೇ ಹಿಸುಕಿ ಕೊಳ್ಳುವಂತೆ ಮಾಡಿದೆ.
ಮತ್ಯಾರಿಗೋ ಲಾಭ ತರುತ್ತಿದೆ: ಕಳೆದ ಕೆಲವು ತಿಂಗಳಿಂದ 8 ಸಾವಿರದ ಆಸುಪಾಸಿನಲ್ಲಿ ಇದ್ದ ಕೊಬ್ಬರಿ ಬೆಲೆ, ಕಳೆದ ಕೆಲವು ದಿನಗಳಿಂದ ಮಾರುಕಟ್ಟೆಯಲ್ಲಿ ಏರು ಮುಖದಲ್ಲಿ ಸಾಗುತ್ತಿದೆ. ಮಂಗಳವಾರದ ಟೆಂಡರ್‌ನಲ್ಲಿ 14 ಸಾವಿರಗಡಿದಾಟುವ ಮೂಲಕ ತೆಂಗು ಬೆಳೆಗಾರರ ಖುಷಿಗೆ ಮಣ್ಣೆರಚಿದಂತಾಗಿದೆ. ಕಾರಣ ಈಗಾಗಲೇ ಬಹುತೇಕ ರೈತರು, ನಫೆಡ್ ಮೂಲಕಕೊಬ್ಬರಿಯನ್ನುಮಾರಾಟ ಮಾಡಿದ್ದು ಬೆಲೆ ಏರಿಕೆ ಲಾಭ ರೈತನ ಹೆಸರಿನಲ್ಲಿ ಮತ್ಯಾರಿಗೋ ಆಗುತ್ತಿದೆ.
ಕಾಯಿ ಕೊಬ್ಬರಿ ಸೇರಿದಂತೆ ರೈತ ಬೆಳೆಯುವ ಯಾವುದೇ ಬೆಳೆಯಾಗಲಿ, ಸರ್ಕಾರ ಮಾರುಕಟ್ಟೆಯಲ್ಲಿ ಸ್ಥಿರ ಬೆಲೆ ಕಾಯ್ದುಕೊಳ್ಳದೆ ಹೋದರೆರೈತನ ಬೆವರು ಮತ್ತು ಶ್ರಮ ಮತ್ಯಾರಿಗೋ ಲಾಭ ತಂದು ಕೊಡುತ್ತದೆ ಎಂದು ಜಿಲ್ಲಾ ರೈತ ಸಂಘದರಾಜ್ಯ ಸಂಚಾಲಕ ಕನಕಂಚೇನಳ್ಳಿ ಪ್ರಸನ್ನಕುಮಾರ್ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಕೊಬ್ಬರಿ ಬೇಡಿಕೆ ಹೆಚ್ಚಾಗುತ್ತಿದೆ : ತಾಲೂಕಿನ ತೆಂಗು ಬೆಳೆಗಾರರು ತಾವು ಕಷ್ಟಪಟ್ಟು ಬೆಳೆದಿದ್ದ ಕೊಬ್ಬರಿಯನ್ನು ಈಗಾಗಲೇ ನಫೆಡ್ ಮೂಲಕ ಮಾರಾಟ ಮಾಡಿರುವುದರಿಂದ ಮಾರುಕಟ್ಟೆಗೆಕೊಬ್ಬರಿ ಬರುತ್ತಿಲ್ಲ. ಮಹಾರಾಷ್ಟ್ರ,ದೆಹಲಿ, ಮಧ್ಯಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದಲ್ಲಿ ಚಳಿಗಾಲ ಆರಂಭವಾಗಿರುವುದರಿಂದ ಕೊಬ್ಬರಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ಧಾರಣೆ ಏರಿಕೆಕಾಣಲು ಕಾರಣವಾಗಿದೆ ಎನ್ನುತ್ತಾರೆ ಇಲ್ಲಿನ ವರ್ತಕರು.
ಪ್ರೋತ್ಸಾಹಧನ ನೀಡದಿದ್ದರೆ ಹೋರಾಟ : ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ನೆಲ ಕಚ್ಚಿದ್ದರಿಂದ ಕೇಂದ್ರ ಸರ್ಕಾರ 10,300 ರೂ. ಬೆಂಬಲ ನೀಡಿ ರೈತರಿಂದ ಕೊಬ್ಬರಿ ಖರೀದಿ ಮಾಡಿತು. ಈ ವೇಳೆ ರಾಜ್ಯ ಸರ್ಕಾರ ಸಾವಿರ ಪ್ರೋತ್ಸಾಹಧನ ನೀಡುವುದಾಗಿ ಘೋಷಣೆ ಮಾಡಿತ್ತು. ಆದರೆ, ಇದುವರೆಗೂ ರೈತರಿಗೆ ನೀಡಿಲ್ಲ. ಸರ್ಕಾರ ತಾನುಕೊಟ್ಟ ಮಾತಿನಂತೆ ನಡೆದುಕೊಳ್ಳದೆ ಹೋದರೆ ತೆಂಗು ಬೆಳೆಗಾರರ ಹಿತಕಾಯುವ ದೃಷ್ಟಿಯಿಂದ ಪ್ರತಿಭಟನೆ ನಡೆಸಬೇಕಾಗುತ್ತದೆಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಎಚ್ಚರಿಕೆ ನೀಡಿದ್ದಾರೆ.