ಹೊಸದಿಲ್ಲಿ: ಪೆಟ್ರೋಲ್ ಬೆಲೆಯಲ್ಲಿ ಸತತ 4 ದಿನಗಳಿಂದ ಏರಿಕೆ ಕಂಡು ಬರುತ್ತಿದ್ದು, ವರ್ಷದಲ್ಲಿ ಗರಿಷ್ಠ ಮಟ್ಟದ ದರ ದಾಖಲಾಗಿದೆ .
ಅಂತಾರಾಷ್ಟ್ರೀಯ ಮಾರುಕಟ್ಟೆ, ತೈಲೋತ್ಪನ್ನ ಕಂಪನಿಗಳು ಬೆಲೆ ಹೆಚ್ಚಿಸುತ್ತಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದ್ದು, ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ಏರಿಕೆಯಾಗುವ ಸಂಭವವಿದೆ. ಈ ಮೂಲಕ ವಾಹನ ಸವಾರರ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಇದ್ದು, ದೇಶದ ಹಲವಾರು ನಗರಗಳಿಗೆ ಇದರ ಬಿಸಿ ತಟ್ಟದಲ್ಲಿದೆ.
ಸದ್ಯ ಮಾರುಕಟ್ಟೆಯ ವರದಿ ಪ್ರಕಾರ ದೆಹಲಿ, ಕೋಲ್ಕತ್ತಾದಲ್ಲಿ ಒಂದು ಲೀಟರ್ ಪೆಟ್ರೋಲ್‌ಗೆ 12 ಪೈಸೆ, ಮುಂಬೈ ಮತ್ತು ಚೆನ್ನೈನಲ್ಲಿ 13 ಪೈಸೆ, ಬೆಂಗಳೂರಿನಲ್ಲಿ 7 ಪೈಸೆ ಏರಿಕೆಯಾಗಿದೆ. ಆದರೆ, ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ.
ಸತತ ನಾಲ್ಕು ದಿನಗಳಿಂದ ದರ ಹೆಚ್ಚಳ ಕಂಡು ಬರುತ್ತಿದ್ದು, ಭಾರತೀಯ ತೈಲ ನಿಗಮದ ವೆಬ್ ಸೈಟ್ ಪ್ರಕಾರ ಸೋಮವಾರ ದೆಹಲಿ, ಕೋಲ್ಕತ್ತಾ, ಮುಂಬೈ ಮತ್ತು ಚೆನ್ನೈನಲ್ಲಿ ಕ್ರಮವಾಗಿ 74.66 ರೂ., 77.34 ರೂ., 80.32 ರೂ. ಮತ್ತು 77.62 ಪೆಟ್ರೋಲ್ ದರ ದಾಖಲಾಗಿದೆ.
ಭಾನುವಾರ 1 ಲೀಟರ್ ಪೆಟ್ರೋಲ್‌ಗೆ 74.84 ರೂ., 76.82 ರೂ. , 80.38 ರೂ. ಮತ್ತು 77.69 ರೂ. ಇತ್ತು. ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ.