Advertisement

ಜಿಲ್ಲೆಯಲ್ಲಿ ಹೆಚ್ಚಿದ ಹೊಸ ಮತದಾರರು

02:19 AM Mar 27, 2019 | sudhir |

ಮಂಗಳೂರು: ಮತ ದಾನ ಪ್ರಕ್ರಿಯೆಯಲ್ಲಿ ಯುವಕರ‌ ಪಾತ್ರ ಬಹುಮುಖ್ಯ. 18 ವರ್ಷ ತುಂಬುತ್ತಲೇ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂಬುದಾಗಿ ಚುನಾವಣ ಆಯೋಗ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಪರಿಣಾಮವಾಗಿ ಮತದಾರರ ಪಟ್ಟಿಯಲ್ಲಿ ನೊಂದಾಯಿಸಿಕೊಳ್ಳುತ್ತಿರುವ ಯುವಜನರ ಸಂಖ್ಯೆ ಹೆಚ್ಚಾಗಿದೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8,33,719 ಪುರುಷ ಮತದಾರರು, 8,63,599 ಮಹಿಳಾ ಮತದಾರರು ಸೇರಿ ಒಟ್ಟು 16,97,417 ಮತ ದಾರರಿದ್ದಾರೆ. ಇವರಲ್ಲಿ 21,321 ಹೊಸ ಮತದಾರರು. ಇವರು ಮತ ಚಲಾಯಿಸುವಂತೆ ಉತ್ತೇಜಿ ಸಲು ಸ್ವೀಪ್‌ ಸಮಿತಿಯು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸು ತ್ತಿದೆ. ಜಿಲ್ಲೆಯ ಎಲ್ಲ ಪ್ರೌಢಶಾಲೆ, ಪ.ಪೂ., ಪದವಿ ಕಾಲೇಜುಗಳು, ವೈದ್ಯಕೀಯ ಮತ್ತು ಪಾಲಿಟೆಕ್ನಿಕ್‌ ಸಂಸ್ಥೆಗಳಲ್ಲಿ ಮತದಾರ ಸಾಕ್ಷರತಾ ಸಂಘ ರಚಿಸಲಾಗಿದೆ. 118 ಪ್ರ.ದ. ಕಾಲೇಜುಗಳು, 203 ಪಿಯು, 560 ಪ್ರೌಢಶಾಲೆಗಳಲ್ಲಿ ಶಿಕ್ಷಕರೊಬ್ಬರನ್ನು ನೋಡಲ್‌ ಅಧಿಕಾರಿಯಾಗಿ ನೇಮಿ ಸಿದ್ದು, ವಿದ್ಯಾರ್ಥಿಗಳಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲಿದ್ದಾರೆ.

ಕ್ಯಾಂಪಸ್‌ ರಾಯಭಾರಿ
ಜಿಲ್ಲೆಯ 40 ಪ್ರ.ದ. ಕಾಲೇಜುಗಳಲ್ಲಿ 80 ಮಂದಿ ಕ್ಯಾಂಪಸ್‌ ಅಂಬಾಸಿಡರ್‌ಗಳನ್ನು ನೇಮಿಸಲಾಗಿದೆ. ಇವರು ವಿದ್ಯಾರ್ಥಿಗಳಲ್ಲಿ ಮತದಾನ ಬಗ್ಗೆ ಜಾಗೃತಿ ಮೂಡಿಸುವರು.

ಯುವ ಮತದಾರರ ವಿವರ
ಬೆಳ್ತಂಗಡಿ- ಪುರುಷರು 1,595, ಮಹಿಳೆಯರು-1,171, ಒಟ್ಟು 2766, ಮೂಡುಬಿದಿರೆ-ಪುರುಷರು 1,034, ಮಹಿಳೆಯರು-843, ಒಟ್ಟು-1,879, ಮಂಗಳೂರು ಉತ್ತರ -ಪುರುಷರು 1,373, ಮಹಿಳೆಯರು-1,104, ಒಟ್ಟು 2,477, ಮಂಗಳೂರು ದಕ್ಷಿಣ-ಪುರುಷರು 1,394, ಮಹಿಳೆ ಯರು 1,373, ಒಟ್ಟು 2,768, ಮಂಗಳೂರು- ಪುರುಷರು 1,287, ಮಹಿಳೆಯರು 991, ಒಟ್ಟು 2,278, ಬಂಟ್ವಾಳ -ಪುರುಷರು 1,851, ಮಹಿಳೆಯರು 1,369 ಒಟ್ಟು 3,220, ಪುತ್ತೂರು ಪುರುಷರು 1,590, ಮಹಿಳೆಯರು 1,472, ಒಟ್ಟು 3,062, ಸುಳ್ಯ ಪುರುಷರು 1,516, ಮಹಿಳೆಯರು 1,355, ಒಟ್ಟು 2,871 ಮಂದಿ ಹೊಸ ಮತದಾರರಿದ್ದಾರೆ. ಒಟ್ಟು ದ.ಕ.ದಲ್ಲಿ 11,640 ಪುರುಷ, 9,678 ಮಹಿಳೆಯರು ಸೇರಿ 21,321 ಹೊಸ ಮತದಾರರಿದ್ದಾರೆ.

ಜಾಲತಾಣಗಳಲ್ಲಿ ಜಾಗೃತಿ
ಮತದಾನ ಮಾಡುವ ಆವಶ್ಯಕತೆ ಕುರಿತಂತೆ ಫೇಸ್‌ಬುಕ್‌, ಟ್ವಿಟರ್‌, ಇನ್ಸ್‌ಟಾ ಗ್ರಾಂಗಳಲ್ಲಿ ಜಾಗೃತಿ ಮೂಡಿಸ ಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಕ್ರಿಯಾಶೀಲರಾಗಿರುವ ಬಹುತೇಕ ಯುವಜನರ ಗಮನ ಸೆಳೆಯಲು ಸ್ವೀಪ್‌ ಸಮಿತಿ ವೀಡಿಯೋ, ಕಿರುಚಿತ್ರಗಳು, ರಸಪ್ರಶ್ನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದೆ.

Advertisement

ಎನ್‌ಆರ್‌ಐಗಳಿಂದ ಅರ್ಜಿ
ವಿದೇಶದಲ್ಲಿರುವವರ ಪೈಕಿ ಮತದಾನಕ್ಕೆ ನೋಂದಣಿ ಮಾಡಿ ಕೊಳ್ಳುತ್ತಿರುವ ಅನಿವಾಸಿ ಭಾರತೀಯರ ಸಂಖ್ಯೆ ಕಡಿಮೆಯಾಗುತ್ತಿದೆ. ಕಾನೂನಿನ ಪ್ರಕಾರ ಭಾರತೀಯ ಪೌರತ್ವ ಹೊಂದಿರುವ ಅನಿವಾಸಿ ಭಾರತೀಯರು ಮಾತ್ರ ನೋಂದಣಿ ಮಾಡಿಸಿಕೊಳ್ಳಬಹುದು. ಈ ಬಾರಿ ಬಂದ 162 ಅರ್ಜಿಗಳ ಪೈಕಿ 102 ಸ್ವೀಕೃತಗೊಂಡು, 60 ಪರಿಶೀಲನೆಯಲ್ಲಿವೆ. ಮತದಾರರ ಪಟ್ಟಿಗೆ ಹೆಸರು ಸೇರಿದರೆ ಚುನಾವಣೆ ದಿನ ಕ್ಷೇತ್ರಕ್ಕೆ ಬಂದು ಮತ ಚಲಾಯಿಸಬಹುದು.

ವಿದೇಶಾಂಗ ಸಚಿವಾಲಯದ ಅಂಕಿಅಂಶ ಪ್ರಕಾರ, ವಿವಿಧ ದೇಶಗಳಲ್ಲಿ ಸುಮಾರು 3.10 ಕೋಟಿ ಎನ್‌ಆರ್‌ಐಗಳಿದ್ದಾರೆ. ಅನ್ಯ ರಾಷ್ಟ್ರಗಳ ಪೌರತ್ವ ಪಡೆಯದ, 18 ವರ್ಷ ತುಂಬಿದ ಅನಿವಾಸಿ ಭಾರತೀಯರು ತಮ್ಮೂರಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿದ್ದರೆ, ಚುನಾವಣೆಯಲ್ಲಿ ಸ್ಪರ್ಧಿಸಬಹುದು.

  • ಪ್ರಜ್ಞಾ ಶೆಟ್ಟಿ
Advertisement

Udayavani is now on Telegram. Click here to join our channel and stay updated with the latest news.

Next