Advertisement

ಒಂದು ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚುತ್ತಿರುವ ಶ್ವಾಸಕೋಶದ ಸೋಂಕು!

09:04 PM Sep 12, 2021 | Team Udayavani |

ಉಡುಪಿ: ಕೊರೊನಾ ಮೂರನೇ ಅಲೆ ಮಕ್ಕಳಿಗೆ ಮಾರಕವಾಗಲಿದೆ ಎನ್ನುವ ಆತಂಕದ ನಡುವೆ ಜಿಲ್ಲೆಯಲ್ಲಿ ಜ್ವರದ ಲಕ್ಷಣಗಳನ್ನು ಹೊಂದಿದ್ದು, ಆಸ್ಪತ್ರೆಗೆ ದಾಖಲಾಗುವ ಶೇ.80ರಷ್ಟು ಮಕ್ಕಳಲ್ಲಿ ಶ್ವಾಸಕೋಶದ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಬಾಧಿಸುತ್ತಿರುವುದು ಹೆತ್ತ ವರಲ್ಲಿ ಆತಂಕ ಮೂಡಿಸುತ್ತಿದೆ.

Advertisement

ಒಂದು ತಿಂಗಳಿನಿಂದ ಜಿಲ್ಲೆಯ ಆಸ್ಪತ್ರೆಗಳಲ್ಲಿ ಒಂದು ವರ್ಷದೊಳಗಿನ 40ರಿಂದ 50 ಮಕ್ಕಳು ಶ್ವಾಸಕೋಶದ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರ್‌ಎಸ್‌ವಿ ಸಂಬಂಧಿಸಿದ ಸೋಂಕು ಮಕ್ಕಳನ್ನು ಕಾಡುತ್ತಿದೆ. ಮಕ್ಕಳಲ್ಲಿ ಜ್ವರ, ಕೆಮ್ಮು, ಶೀತ, ನೆಗಡಿಯ ರೂಪದಲ್ಲಿ ಇದು ಕಂಡು ಬರುತ್ತದೆ. ಆರ್‌ಎಸ್‌ವಿ ಈ ಸಮಯದಲ್ಲಿ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಕಾಯಿಲೆ ಉಲ್ಬಣಿಸಿದರೆ ವೈರಲ್‌ ನ್ಯುಮೋನಿಯಾಗೆ ತಿರುಗಲಿದೆ. ಪ್ರಸ್ತುತ ತಪಾಸಣೆಗೆ ಬರುವ 10 ಮಕ್ಕಳಲ್ಲಿ 8 ಮಕ್ಕಳು ಆರ್‌ಎಸ್‌ವಿ ಸೋಂಕಿಗೆ ತುತ್ತಾಗುತ್ತಿದ್ದಾರೆ.

ಎಚ್ಚರಿಕೆ ಇರಲಿ ಅಗತ್ಯ:

ವಾತಾವರಣದ ಕಾರಣದಿಂದ ಕಂಡು ಬರುವ ಈ ರೋಗ ಲಕ್ಷಣಗಳ ಕುರಿತು ಎಚ್ಚರಿಕೆ ವಹಿಸಬೇಕು. ಈ ರೋಗ ಬಾರದಂತೆ ತಡೆಯುವುದು ಕಷ್ಟ. ಆದರೆ ಹೆಚ್ಚು ಜನನಿಬಿಡ ಪ್ರದೇಶಗಳಿಗೆ ಮಕ್ಕಳನ್ನು ಕರೆದೊಯ್ಯದಿರುವುದು, ಮಕ್ಕಳ ಜತೆಗೆ ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕುವುದು, ಕೋವಿಡ್‌ ಮಾರ್ಗಸೂಚಿಯಂತೆ ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು, ಕಾಯಿಸಿ ಆರಿಸಿದ ನೀರು ಕುಡಿಸುವುದು, ಲಘು ಕಷಾಯ, ವೈದ್ಯರ ಸಲಹೆಯಿಂದ ಮೂಗಿನ ಡ್ರಾಫ್ ಬಳಸುವುದು ಇವೆಲ್ಲವನ್ನೂ ಮುಂಜಾಗ್ರತ ಕ್ರಮದಿಂದ ನಿರ್ವಹಿಸಬಹುದಾಗಿದೆ. ಮಕ್ಕಳಿಗೆ ಫ್ರಿಡ್ಜ್ ನಲ್ಲಿಟ್ಟಿರುವ ಆಹಾರ, ಜಂಕ್‌ಫ‌ುಡ್‌ ಕೊಡಬೇಡಿ. ಬಿಸಿ ನೀರು, ತಾಜಾ, ಪೌಷ್ಟಿಕಾಂಶ ಆಹಾರ ನೀಡಿ. ಶೀತ, ಕಫ‌, ಜ್ವರ ಲಕ್ಷಣಗಳಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಕೋವಿಡ್‌ ನೆಗೆಟಿವ್‌ ವರದಿ:

Advertisement

ಆರ್‌ಎಸ್‌ವಿ ಸಂಬಂಧಿತ ಬಹುತೇಕ ಮಕ್ಕಳನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಿದಾಗ ಆರ್‌ಟಿಪಿಸಿಆರ್‌ ವರದಿ ನೆಗೆಟಿವ್‌ ಬಂದಿದೆ. ಆದರೂ ಇದನ್ನು ನಿರ್ಲಕ್ಷಿಸುವುದು ಸರಿಯಲ್ಲ. ಆರ್‌ಎಸ್‌ವಿ ನಲ್ಲಿ ಉಸಿರಾಟ ಸಮಸ್ಯೆ ಹೆಚ್ಚಾದರೆ ಮಕ್ಕಳ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಹೆತ್ತ ವ ರು ಸಾಕಷ್ಟು ಜಾಗರೂಕರಾಗಿಬೇಕು. ಆರ್‌ಎಸ್‌ವಿ ಲಕ್ಷಣಗಳಿರುವ ಮಗುವಿಗೆ ತತ್‌ಕ್ಷಣ ಚಿಕಿತ್ಸೆ ನೀಡಲು ಮುಂದಾಗಬೇಕು ಎಂದು ಮಕ್ಕಳ ತಜ್ಞೆ ಡಾ| ಶ್ವೇತಾ ಶಾನುಭಾಗ್‌ ತಿಳಿಸಿದ್ದಾರೆ.

ಏನಿದು ಆರ್‌ಎಸ್‌ವಿ? : ಒಂದು ವರ್ಷ ಪ್ರಾಯದ ಮಕ್ಕಳಿಗೆ ಹೆಚ್ಚಾಗಿ ಬಾಧಿಸುವ Respiratory Syncytial Virus  (ಆರ್‌ಎಸ್‌ವಿ) ಸೋಂಕು. ಇದು ಉಸಿರಾಟದ ತೊಂದರೆಯಂತಹ ಲಕ್ಷಣಗಳನ್ನು ಹೊಂದಿದೆ. ಶ್ವಾಸಕೋಶದಲ್ಲಿ ಸಣ್ಣ ಶ್ವಾಸನಾಳದ ಉರಿಯೂತ ಹಾಗೂ ಮಕ್ಕಳಲ್ಲಿ ನ್ಯುಮೋನಿಯಾಕ್ಕೆ ಕಾರಣವಾಗುತ್ತದೆ. ಈ ಸೋಂಕಿನಿಂದ ಕಫ‌, ಶೀತ, ನೆಗಡಿ ಮಕ್ಕಳನ್ನು ಕಾಡುತ್ತದೆ. ಆಕ್ಸಿಜನ್‌ ಸಮಸ್ಯೆ ಉಂಟಾದರೆ ಮಕ್ಕಳ ಜೀವ ಹಾನಿ ಕೂಡ ಆಗಬಹುದು.

ಹೇಗೆ ಹರಡುತ್ತದೆ? : ಸೋಂಕಿತ ಮಗುವಿನ ಉಸಿರಾಟದ ಹನಿಗಳು ಗಾಳಿಯ ಮೂಲಕ ಸುಲಭವಾಗಿ ಹರಡಲು ಸಾಧ್ಯವಾಗುತ್ತದೆ. ಸೋಂಕಿತ ವ್ಯಕ್ತಿಯ ಕೈಗಳನ್ನು ಮುಟ್ಟು ವ ಸಮಯ  ನೇರ ಸಂಪರ್ಕದ ಮೂಲಕ ವೈರಸ್‌  ಇತರರಿಗೆ ಹರಡುತ್ತದೆ.

ಆರ್‌ಎಸ್‌ವಿ ಋತುಮಾನದ ಕಾಯಿಲೆಯಾಗಿದೆ. ಮಳೆಗಾಲ ಹಾಗೂ ಚಳಿಗಾಲದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಜಿಲ್ಲೆಯಲ್ಲಿ ಈ ಬಾರಿ ಆರ್‌ಎಸ್‌ವಿಗೆ ತುತ್ತಾಗುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಲಕ್ಷಣ ಇರುವ ಮಕ್ಕಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ, ಉತ್ತಮ ಆಹಾರ, ಹಾರೈಕೆ ಅಗತ್ಯ.ಡಾ| ಶ್ರೀಕಿರಣ್‌ ಹೆಬ್ಟಾರ್‌,   ಮಕ್ಕಳ ತಜ್ಞ ವೈದ್ಯರು,  ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next