Advertisement
ಖರೀದಿಗೆ ಪೈಪೋಟಿ: ಇದರ ನಡುವೆ ಪಾಂಡವಪುರ ಸಹಕಾರಿ ಕಾರ್ಖಾನೆಯೂ ಕಬ್ಬು ಅರೆಯಲು ಮುಂದಾಗಿರುವುದರಿಂದ ಕಾರ್ಖಾನೆಗಳು ಕಬ್ಬು ಖರೀದಿಗೆ ಪೈಪೋಟಿಗಿಳಿದಿವೆ. ಕಾರ್ಖಾನೆಯ ಆಡಳಿತ ಮಂಡಳಿಯ ಅಧಿಕಾರಿಗಳೇ ಖುದ್ದಾಗಿ ಕಬ್ಬಿನ ಪ್ಲಾಟ್‌ಗಳಿಗೆ ಭೇಟಿ ನೀಡಿ ಖರೀದಿಸಲು ಮುಂದಾಗಿದ್ದಾರೆ. ಪಾಂಡವಪುರ ಹಾಗೂ ಮಂಡ್ಯ ತಾಲೂಕು ವ್ಯಾಪ್ತಿಯ ಕಬ್ಬನ್ನು ಬೇರೆ ರಾಜ್ಯದ ಕಾರ್ಖಾನೆಗಳು ಸಾಗಿಸುತ್ತಿರುವ ವಿರುದ್ಧ ಪಿಎಸ್ ಎಸ್‌ಕೆ ಆಡಳಿತ ಮಂಡಳಿ ವಿರೋಧ ವ್ಯಕ್ತಪಡಿಸಿತ್ತು.
Related Articles
Advertisement
ಆಲೆಮನೆಗಳಿಂದ ಹೆಚ್ಚುಬೇಡಿಕೆ : ನಿಂತಿದ್ದ ಆಲೆಮನೆಗಳು ಮತ್ತೆ ಬೆಲ್ಲ ತಯಾರಿಸಲು ಮುಂದಾಗಿರುವುದರಿಂದಕಬ್ಬಿಗೆ ಹೆಚ್ಚು ಬೇಡಿಕೆ ಬಂದಿದೆ. ಆಲೆಮನೆಗಳ ಮಾಲೀಕರು ಖುದ್ದಾಗಿ ಕಟಾವು ಹಾಗೂ ಸಾಗಣೆ ವೆಚ್ಚವನ್ನು ತಾವೇ ಭರಿಸಿ ಕಬ್ಬು ಖರೀದಿಸುತ್ತಿದ್ದಾರೆ. ಇದರಿಂದ ರೈತರಿಗೆ ಹೊರೆ ತಪ್ಪಿದೆ. ಆಲೆಮನೆಯವರು ಟನ್‌ಕಬ್ಬಿಗೆ1950 ರೂ. ನೀಡುತ್ತಿದ್ದಾರೆ. ಇದು ರೈತರಿಗೆ ತುಸು ನೆಮ್ಮದಿ ತಂದಿದೆ.ಕಾರ್ಖಾನೆಗಳಿಗೆ ಸಾಗಿಸಬೇಕಾದರೆ ಕಟಾವು ಹಾಗೂ ಸಾಗಣೆ ವೆಚ್ಚ ಭರಿಸಬೇಕಾಗಿರುವುದರಿಂದ ಆಲೆಮನೆಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ.
ಮೈಷುಗರ್‌ಆರಂಭದ ಬಗ್ಗೆ ಸ್ಪಷ್ಟತೆ ಇಲ್ಲ : ಮೈಷುಗರ್ ಕಾರ್ಖಾನೆಯನ್ನು ಆರಂಭಿಸುವಬಗ್ಗೆ ಗೊಂದಲಮುಂದುವರಿದಿದೆ. ಜಿಲ್ಲೆಯ ಹೋರಾಟಗಾರರಲ್ಲಿ ಒಮ್ಮತ ಇಲ್ಲದ ಕಾರಣಸರ್ಕಾರವೂ ಇನ್ನೂ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಒಂದು ಗುಂಪು ಸರ್ಕಾರಿ ಸ್ವಾಮ್ಯದಲ್ಲಿಯೇ ನಡೆಸಬೇಕು ಎಂದು ಒತ್ತಾಯಿಸಿದರೆ, ಮತ್ತೂಂದು ಗುಂಪು ಸರ್ಕಾರಿ ಸ್ವಾಮ್ಯದಲ್ಲಿಯೇ ಒ ಅಂಡ್ ಎಂ ಆಧಾರದಲ್ಲಿ ನಡೆಸಬೇಕು ಎಂದು ಪಟ್ಟು ಹಿಡಿದಿವೆ. ಆದರೆ, ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದು ಇನ್ನೂಸ್ಪಷ್ಟವಾಗಿಲ್ಲ. ಆದರೆ, ಮೈಷುಗರ್ ವ್ಯಾಪ್ತಿಯ ಕಬ್ಬುಬೆಳೆಗಾರರು ಮಾತ್ರಬೇಗಕಾರ್ಖಾನೆ ಆರಂಭವಾಗಲಿಎಂಬ ಪ್ರಾರ್ಥಿಸುತ್ತಿದ್ದಾರೆ.
ಎಫ್ಆರ್‌ಪಿ ದರದಲ್ಲಿ ತಾರತಮ್ಯ : ಕಾರ್ಖಾನೆಗಳು ಸಮನಾದ ಎಫ್ಆರ್‌ಪಿ ದರ ನೀಡುತ್ತಿಲ್ಲ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಒಂದೊಂದು ಕಾರ್ಖಾನೆ ಒಂದೊಂದು ರೀತಿಯ ದರ ನೀಡುತ್ತಿವೆ. ಶೇ.10ರಷ್ಟು ಇಳುವರಿ ಬರುವಕಬ್ಬಿಗೆಕೇಂದ್ರ ಸರ್ಕಾರದನಿಗದಿಯಂತೆ2850 ರೂ. ನೀಡುತ್ತಿವೆ. ಅದಕ್ಕಿಂತಕಡಿಮೆ ಇಳುವರಿ ಬರುವಕಬ್ಬಿಗೆ2675ರಿಂದ2750 ರೂ.ವರೆಗೆ ನೀಡಲಾಗುತ್ತಿದೆ. ಆದರೆ, ಇದರಲ್ಲಿ ರೈತರಕಬ್ಬು ಎಷ್ಟು ಇಳುವರಿ ಬರಲಿದೆ ಎಂಬುದು ಮಾಹಿತಿ ನೀಡುವುದಿಲ್ಲ. ಇದರಿಂದ ರೈತರಿಗೆ ನಷ್ಟವಾಗುತ್ತಿದೆ ಎನ್ನುತ್ತಾರೆ ರೈತ ಸಂಪಳ್ಳಿ ಶಿವಶಂಕರ್.
ಕಟಾವು ಹಾಗೂ ಸಾಗಣೆ ವೆಚ್ಚವನ್ನು ರೈತರೇಭರಿಸಬೇಕಾಗಿರುವುದರಿಂದ ಖರ್ಚು ಹೆಚ್ಚಾಗುತ್ತಿದೆ. ಆದ್ದರಿಂದ ಸರ್ಕಾರ ಸಾಗಣೆ ವೆಚ್ಚ ಭರಿಸಬೇಕು. ಅಲ್ಲದೆ, ಎಲ್ಲ ಕಾರ್ಖಾನೆಗಳುಕೇಂದ್ರ ಸರ್ಕಾರದ ಎಫ್ಆರ್‌ಪಿಯಂತೆ ದರ ನೀಡಬೇಕು.-ವೇಣುಗೋಪಾಲ್ ಸಾತನೂರು,ಅಧ್ಯಕ್ಷ, ಮೈಷುಗರ್ ಕಬ್ಬು ಬೆಳೆಗಾರರ ಒಕ್ಕೂಟ
ಕಬ್ಬಿಗೆ 1950 ರೂ. ನೀಡುತ್ತಿದೆ. ಇದರಿಂದ ರೈತರು ಈ ಬಾರಿ ಬಚಾವಾಗಿದ್ದಾರೆ.ಕೂಡಲೇ ಮೈಷುಗರ್‌ಕಾರ್ಖಾನೆಯನ್ನು ಆರಂಭಿಸಿದರೆ ಇನ್ನೂ ಅನುಕೂಲವಾಗಲಿದೆ. – ಸಂಪಳ್ಳಿ ಶಿವಶಂಕರ್, ಕಬ್ಬು ಬೆಳೆಗಾರ
– ಎಚ್.ಶಿವರಾಜು