ದೊಡ್ಡಬಳ್ಳಾಪುರ: ಕೊರೊನಾ ಸೋಂಕಿಗೆ ಒಳಗಾಗಿಹೋಂಐಸೋಲೇಷನ್‌ನಲ್ಲಿರುವವರು ಬೇಕಾಬಿಟ್ಟಿಯಾಗಿಸಂಚರಿಸುತ್ತಿದ್ದು, ಇದರಿಂದ ಇತರರಿಗೂ ಸೋಂಕು ಹರಡಬಹುದುಎಂಬ ಆತಂಕ ಗ್ರಾಮೀಣ ಭಾಗದಲ್ಲಿದೆ. ಆರೋಗ್ಯ ಇಲಾಖೆಯಮಾಹಿತಿ ಪ್ರಕಾರ ತಾಲೂಕಿನಲ್ಲಿ 20,086 ಸೋಂಕಿತರನ್ನುನಿಗಾವಹಿಸಲಾಗಿದೆ.
16,498 ಮಂದಿ 14 ದಿನ ಕ್ವಾರಂಟೈನ್ ಅವಧಿಮುಗಿಸಿದ್ದಾರೆ. ಪ್ರಸ್ತುತ 3,588 ಮಂದಿ ಹೋಂಐಸೋಲೇಷನ್‌ನಲ್ಲಿಇದ್ದಾರೆ. ಕೊರೊನಾ ಪ್ರಕರಣ ದಿನೇ ದಿನೆ ಹೆಚ್ಚಾಗುತ್ತಿದ್ದು, ಆಸ್ಪತ್ರೆಗಳಲ್ಲಿಆಕ್ಸಿಜನ್, ಬೆಡ್, ಇತರೆ ಸಮಸ್ಯೆಗಳು ಕಾಡುತ್ತಿವೆ.
ಡೇರಿಗೆ ಹಾಲು ಹಾಕಲು ಹೋಗ್ತಾರೆ: ಈ ನಿಟ್ಟಿನಲ್ಲಿ ಕಡಿಮೆ ಲಕ್ಷಣಇರುವವರಿಗೆ ಹೋಂಐಸೋಲೇಷನ್‌ನಲ್ಲಿ ಇಟ್ಟು ಸಲಹೆನೀಡಲಾಗುತ್ತಿದ್ದು, ಹೋಂ ಐಸೋಲೇಷನ್‌ನವರು ಕಡ್ಡಾಯ ಗೃಹಬಂಧನದಲ್ಲಿರಬೇಕು ಎಂಬ ನಿಯಮವಿದೆ. ವೈದ್ಯರು ನೀಡುವ ಸಲಹೆಕಾಲ ಕಾಲಕ್ಕೆ ಪಾಲಿಸಬೇಕಿದೆ.
ಮುಖ್ಯವಾಗಿ ಜನಸಂಪರ್ಕ ಬಾರದೇಇರಬೇಕಿದೆ. ಆದರೆ, ಹೋಂ ಐಸೋಲೇಷನ್‌ಗೆ ಒಳಗಾಗಿರುವಸೋಂಕಿತರು ನಿಯಮ ಪಾಲಿಸದೆ, ದಿನ ಬಳಕೆ ವಸ್ತುಗಳ ತರಲು,ಡೇರಿಗಳಿಗೆ ಹಾಲು ಹಾಕಲು ತೆರಳುತ್ತಿದ್ದಾರೆ.ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ನಡೆಸುವುದು,ಸಾರ್ವಜನಿಕವಾಗಿ ಎಲ್ಲೆಂದರಲ್ಲಿ ಬೇಕಾಬಿಟ್ಟಿ ಓಡಾಟ ನಡೆಸುತ್ತಿದ್ದಾರೆ. ಇವರು ಆರೋಗ್ಯವಂತ ಜನರಿಗೆ ಆತಂಕ ತಂದೊಡ್ಡಿದ್ದು, ಜನತಾಕರ್ಫ್ಯೂ ನಡುವೆಯೂ ಸೋಂಕು ಹೆಚ್ಚಾಗಲು ಕಾರಣ ಎನ್ನುವಆರೋಪ ಕೇಳಿ ಬಂದಿದೆ.
ಅಧಿ ಕಾರಿಗಳು ಗಮನಿಸಬೇಕು: ತಾಲೂಕಿನ ನಗರ, ಹಳ್ಳಿಗಳಲ್ಲಿಹೋಂಐಸೋಲೇಷನ್‌ಗೆ ಒಳಗಾಗಿರುವವರು ಓಡಾಡುತ್ತಿರುವುದರಿಂದ ಕೊರೊನಾ ಸೊಂಕು ತಗುಲುವ ಭೀತಿಯಲ್ಲೇ ಜೀವನನಡೆಸಬೇಕಾದ ಸ್ಥಿತಿ ಎದುರಾಗಿದೆ. ನಾವು ಗುಣಮುಖರಾಗಿದ್ದೇವೆಎಂದು ಸುಳ್ಳು ಹೇಳಿ ಜನರೊಂದಿಗೆ ಬೆರೆಯುತ್ತಿದ್ದಾರೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷವೂ ಕಾರಣ ಎನ್ನಲಾಗಿದೆ.
ಸ್ಥಳೀಯ ಆಶಾಕಾರ್ಯಕರ್ತೆಯರು, ಕಂದಾಯ ಇಲಾಖೆಯ ಸಿಬ್ಬಂದಿ ಸಲಹೆನೀಡಿದರೂ ಅವರ ಮಾತಿಗೆ ಬೆಲೆ ನೀಡದೆ ಓಡಾತ್ತಿರುವುದು ಮತ್ತಷ್ಟುಆತಂಕ ತಂದೊಡ್ಡಿದೆ. ಸ್ಥಳೀಯ ಪಿಡಿಒಗಳಿಗೂ ತಲೆ ಬಿಸಿಯಾಗಿದೆ.ತಾಲೂಕು ಮಟ್ಟದ ಅಧಿ ಕಾರಿಗಳು ಹೋಂ ಐಸೋಲೇಶನ್‌ಒಳಗಾಗಿರುವ ಸೋಂಕಿತರ ನಿಗಾವಹಿಸಲು ಸೂಕ್ತ ಕ್ರಮಕೈಗೊಳ್ಳಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.