Advertisement

ತುಳು ಚಿತ್ರಕ್ಕೂ ಹೆಚ್ಚಿನ ಪ್ರೋತ್ಸಾಹ ನೀಡಿ: ಅರ್ಜುನ್‌ ಕಾಪಿಕಾಡ್‌

09:40 AM Sep 14, 2017 | |

ಮಲ್ಪೆ: ಉಡುಪಿ ಮಲ್ಪೆಯ ಜನರು ಕಲೆ ಮತ್ತು ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವವರು. ಇತರ ಭಾಷೆಯ ಚಿತ್ರಗಳ ಜತೆಗೆ ತುಳು ಚಲನಚಿತ್ರಗಳನ್ನು ಎಲ್ಲರು ಹೆಚ್ಚು ಹೆಚ್ಚು ನೋಡುವ ಮೂಲಕ ತುಳು ಚಿತ್ರರಂಗಕ್ಕೆ ಹೆಚ್ಚಿನ ಪ್ರೋತ್ಸಾಹವನ್ನು ಕೊಡಬೇಕು ಎಂದು ತುಳು ಚಿತ್ರನಟ ಅರ್ಜುನ್‌ ಕಾಪಿಕಾಡ್‌ ಹೇಳಿದರು.

Advertisement

ಅವರು ಬುಧವಾರ ಮಲ್ಪೆ ಹಾರ್ಬರ್‌ ಫ್ರೆಂಡ್ಸ್‌ನ ಆಶ್ರಯದಲ್ಲಿ  ಶ್ರೀಕೃಷ್ಣ  ಜನ್ಮಾಷ್ಟಾಮಿಯ  ಪ್ರಯುಕ್ತ ಮಲ್ಪೆ ಅಯ್ಯಪ್ಪ ಮಂದಿರದ ಬಳಿ ದಿ| ಕಿದಿಯೂರು ಯೋಗೀಶ್‌ ಅಮೀನ್‌ ವೇದಿಕೆಯಲ್ಲಿ ಮುದ್ದು ಕೃಷ್ಣ ಮತ್ತು ಹುಲಿವೇಷ ಕುಣಿತ ಸ್ಪರ್ಧೆ ಹಾಗೂ ವೈವಿಧ್ಯ ಮಯ ನೃತ್ಯ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದರು.

ಮಾಜಿ ಶಾಸಕ ಕೆ. ರಘುಪತಿ ಭಟ್‌ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಸಮಾಜ ಸೇವಾ ಕಾರ್ಯಗಳನ್ನು ಕೈಗೊಳ್ಳುವ ಸಂಘಟನೆಗಳು ಹೆಚ್ಚಾಗಬೇಕು. ಹಾರ್ಬರ್‌ ಫ್ರೆಂಡ್ಸ್‌ ಸಾಮಾಜಿಕ ಕಾರ್ಯಗಳ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವುದು ಶ್ಲಾಘನೀಯ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಹಾರ್ಬರ್‌ ಫ್ರೆಂಡ್ಸ್‌ನ ಅಧ್ಯಕ್ಷ ಯಶ್‌ಪಾಲ್‌ ಎ. ಸುವರ್ಣ ವಹಿಸಿದ್ದರು.
ಅದಾನಿ ಯುಪಿಸಿಎಲ್‌ನ ಕಿಶೋರ್‌ ಆಳ್ವ, ಯುವ ಮೋರ್ಚಾ ಅಧ್ಯಕ್ಷ ಸಂದೀಪ್‌ ಶೆಟ್ಟಿ, ನ್ಯಾಯವಾದಿ ಮಟ್ಟಾರು ರತ್ನಾಕರ ಹೆಗ್ಡೆ, ಉಜ್ವಲ್‌ ಡೆವಲಪರ್ನ ಪುರುಷೋತ್ತಮ ಶೆಟ್ಟಿ, ರಾಧಾ ಡೆವಲಪರ್ನ ಮನೋಹರ ಶೆಟ್ಟಿ, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಬಡಗುಬೆಟ್ಟು ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಉದ್ಯಮಿಗಳಾದ ಸಾಧು ಸಾಲ್ಯಾನ್‌, ಹರಿಯಪ್ಪ ಕೋಟ್ಯಾನ್‌, ಆನಂದ ಪಿ. ಸುವರ್ಣ, ಉದಯ್‌ ಕುಮಾರ್‌ ಶೆಟ್ಟಿ, ಆನಂದ ಸಿ. ಕುಂದರ್‌ ಕೋಟ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್‌ ಕುಂದರ್‌, ಮೀನುಗಾರ ಸಂಘದ ಉಪಾಧ್ಯಕ್ಷ ವಿನಯ್‌ ಕರ್ಕೇರ, ನಗರಸಭಾ ಸದಸ್ಯರಾದ ನವೀನ್‌ ಭಂಡಾರಿ, ವಿಜಯ್‌ ಕುಂದರ್‌, ಪ್ರಶಾಂತ್‌ ಅಮೀನ್‌, ಮಾಜಿ ನಗರಸಭಾ ಸದಸ್ಯ ಪಾಂಡುರಂಗ ಮಲ್ಪೆ, ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ದಿನೇಶ್‌ ಜಿ. ಸುವರ್ಣ, ಅಯ್ಯಪ್ಪ ಸ್ವಾಮಿ ಮಂದಿರದ ಅಧ್ಯಕ್ಷ ಗಣೇಶ್‌ ವಿ. ಸಾಲ್ಯಾನ್‌, ಮಹಿಳಾ ಹಸಿಮೀನು ಮಾರಾಟಗಾರರ ಸಂಘದ ಅಧ್ಯಕ್ಷೆ ಬೇಬಿ ಎಚ್‌. ಸಾಲ್ಯಾನ್‌, ಹಾರ್ಬರ್‌ ಫ್ರೆಂಡ್ಸ್‌ನ ಉಪಾಧ್ಯಕ್ಷ ಮಂಜು ಕೊಳ, ಸನತ್‌ ಸಾಲ್ಯಾನ್‌ ಮೊದಲಾದವರು ಉಪಸ್ಥಿತರಿದ್ದರು.

ಸಿನೆ ತಾರೆಯರ ರಂಗು
ಚಲನಚಿತ್ರ ಮತ್ತು ಕಿರುತೆರೆಗಳ ನಟನಟಿಯರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಹೆಚ್ಚಿನ ಮೆರು ಗನ್ನು ನೀಡಿದರು. ತಮ್ಮ ನೆಚ್ಚಿನ ನಟರನ್ನು ನೋಡಲು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ನಟನಟಿಯರಾದ ರಾಧಿಕಾ ರಾವ್‌, ಸ್ವಾತಿ ಬಂಗೇರ, ಆರಾಧ್ಯ ಶೆಟ್ಟಿ, ಅನೂಪ್‌ ಸಾಗರ್‌, ಅರ್ಜುನ್‌ ಕಾಪಿಕಾಡ್‌ ಅವರು ಚಿತ್ರದ ಹಾಡುಗಳಿಗೆ ಹೆಜ್ಜೆ ಹಾಕಿದರು.

Advertisement

ಯಶ್‌ಪಾಲ್‌ ಸುವರ್ಣ ಸ್ವಾಗತಿಸಿದರು. ಸತೀಶ್ಚಂದ್ರ ಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next