ಬೆಂಗಳೂರು: ರಾಜ್ಯದಲ್ಲಿ ನಾಳೆಯಿಂದ (ಮಂಗಳವಾರ) ಹಾಲಿನ ದರದಲ್ಲಿ ಲೀಟರ್ ಗೆ ತಲಾ ಮೂರು ರೂಪಾಯಿಯಂತೆ ಹೆಚ್ಚಿಸಲ ಕೆಎಂಎಫ್ ನಿರ್ಧರಿಸಿದೆ. ಈ ಮೂಲಕ ರಾಸುಗಳ ಚರ್ಮ ಗಂಟು ರೋಗದಿಂದ ಸಂಕಷ್ಟದಲ್ಲಿರುವ ರೈತ ಸಮುದಾಯದ ನೆರವಿಗೆ ಕೆಎಂಎಫ್ ನಿಂತಿದೆ.
ಹೆಚ್ಚಳ ಮಾಡುವ ಮೂರು ರೂ. ರೈತರಿಗೆ ವರ್ಗಾವಣೆ ಮಾಡಲು ತೀರ್ಮಾನಿಸಲಾಗಿದೆ. ರೈತರ ಸಮಸ್ಯೆ ಅರಿತು ಅವರ ಸಹಾಯಕ್ಕೆ ಬರಲು ಈ ನಿರ್ಧಾರ ಮಾಡಲಾಗಿದೆ.
ಇದನ್ನೂ ಓದಿ:ಟೆಸ್ಟ್ ಮತ್ತು ಸೀಮಿತ ಓವರ್ ಗಳಿಗೆ ಭಿನ್ನ ತಂಡಗಳನ್ನು ಹೊಂದುವುದು ಉತ್ತಮ : ಕುಂಬ್ಳೆ
ಎಲ್ಲ ಮಾದರಿಯ ಹಾಲಿನ ದರವೂ ಮೂರು ರೂಪಾಯಿ ಹೆಚ್ಚಳವಾಗಿದ್ದು, 37 ರೂ ಇದ್ದ ಟೋನ್ಡ್ ಹಾಲಿನ ಬೆಲೆ ನಾಳೆಯಿಂದ 40 ರೂಪಾಯಿ ಆಗಲಿದೆ. ಇದೇ ರೀತಿ ಮೊಸರಿನ ಬೆಲೆಯಲ್ಲೂ ಮೂರು ರೂ. ಏರಿಕೆ ಮಾಡಲಾಗಿದೆ.
Related Articles