Advertisement

ಸೋಂಕು ಪರೀಕ್ಷೆ ಹೆಚ್ಚಿಸಿ: ಕೇಂದ್ರದ ಸೂಚನೆ

08:08 AM Jan 19, 2022 | Team Udayavani |

ಹೊಸದಿಲ್ಲಿ: “ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೋಂಕು ಪತ್ತೆ ಪರೀಕ್ಷೆ ಹೆಚ್ಚಿಸಲೇಬೇಕು. ಸದ್ಯ ಅವುಗಳ ಪ್ರಮಾಣ ಕಡಿಮೆಯಾಗಿದೆ’ ಹೀಗೆಂದು ಕೇಂದ್ರ ಸರಕಾರ ರಾಜ್ಯಗಳಿಗೆ ತಿಳಿಸಿದೆ.

Advertisement

ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಲ್ಲಿನ ಹೆಚ್ಚುವರಿ ಕಾರ್ಯದರ್ಶಿ, ಆರತಿ ಝಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದ ಪತ್ರದಲ್ಲಿ ಈ ಅಂಶ ಪ್ರಸ್ತಾವಿಸಿದ್ದಾರೆ. ತತ್‌ಕ್ಷಣ ದಿಂದ ಜಾರಿಗೆ ಬರುವಂತೆ ಸೋಂಕು ಪತ್ತೆ ಪರೀಕ್ಷೆಗಳ ಸಂಖ್ಯೆಯಲ್ಲಿ ಹೆಚ್ಚಾಗಬೇಕಾಗಿದೆ.

ಐಸಿಎಂಆರ್‌ನಲ್ಲಿ ಲಭ್ಯವಿರುವ ಮಾಹಿತಿ ಗಮನಿಸಿದರೆ, ಕೆಲವು ರಾಜ್ಯಗಳು ಕೊರೊನಾ ಪರೀಕ್ಷೆಯನ್ನು ಕಡಿಮೆಯಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಒಮಿಕ್ರಾನ್‌ ಹೆಚ್ಚು ಗಮನದಲ್ಲಿ ಇರಿಸಬೇಕಾದ ರೂಪಾಂತರಿ ಎಂದು ಎಚ್ಚರಿಕೆ ನೀಡಿದೆ. ಈ ಕಾರಣಕ್ಕಾಗಿ ಪರೀಕ್ಷೆ ಯನ್ನು ಹೆಚ್ಚಿಸಬೇಕು ಎಂದು ಹೇಳಿದ್ದಾರೆ.

50 ಲಕ್ಷ ಮಂದಿಗೆ: ದೇಶದಲ್ಲಿ 50 ಲಕ್ಷ ಮಂದಿ ಆರೋಗ್ಯ ಕಾರ್ಯಕರ್ತರಿಗೆ, ಮುಂಚೂಣಿ ಕಾರ್ಯಕರ್ತರಿಗೆ, ಇತರ ಆರೋಗ್ಯ ಸಮಸ್ಯೆ ಇರುವ 60 ವರ್ಷ ಮೇಲ್ಪಟ್ಟ ವರಿಗೆ ಮುನ್ನೆಚ್ಚರಿಕೆ ಡೋಸ್‌ ನೀಡಲಾಗಿದೆ ಎಂದು ಮನ್‌ಸುಕ್‌ ಮಾಂಡವಿಯಾ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ:ಬರೋಬ್ಬರಿ 5 ಬಾರಿ ಕೋವಿಡ್‌ ಲಸಿಕೆ ಪಡೆದ ವೈದ್ಯೆ!

Advertisement

ಸ್ಟೀರಾಯ್ಡ ಬೇಡ: ಕೇಂದ್ರದ ಹೊಸ ಚಿಕಿತ್ಸಾ ನಿಯಮ ಪ್ರಕಾರ ಕೊರೊನಾ ಚಿಕಿತ್ಸೆಗೆ ಸ್ಟೀರಾಯ್ಡ ಅನ್ನು ನೀಡು ವುದು ಬೇಡ.

ವೈದ್ಯರ ಸಲಹಾ ಚೀಟಿ ಇದ್ದರೆ ಸೆಲ್ಫ್ ಟೆಸ್ಟ್‌ ಕಿಟ್‌: ಮನೆಯಲ್ಲಿಯೇ ಕೊರೊನಾ ಪರೀಕ್ಷೆ ಮಾಡಿಕೊಳ್ಳಲು ಬಳಸಲಾಗುತ್ತಿರುವ ಸ್ವಯಂ ಪರೀಕ್ಷಾ ಕಿಟ್‌ನ ಮಾರಾಟಕ್ಕೆ ಕೆಲವು ನಿರ್ಬಂಧಗಳನ್ನು ಹೇರಲು ಮಹಾರಾಷ್ಟ್ರ ಸರಕಾರ ಮುಂದಾಗಿದೆ. ವೈದ್ಯರ ಸಲಹಾ ಚೀಟಿಯಿರುವವರಿಗೆ ಮಾತ್ರ ಕಿಟ್‌ ಕೊಳ್ಳುವುದಕ್ಕೆ ಅನುಮತಿ ನೀಡಲು ತೀರ್ಮಾನಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next