Advertisement

ನಿವೃತ್ತಿ ವಯೋಮಿತಿ ಹೆಚ್ಚಳಕ್ಕೆ ಇಪಿಎಫ್ಒ ಸಲಹೆ

06:57 PM Sep 05, 2022 | Team Udayavani |

ನವದೆಹಲಿ: 2047ರ ವೇಳೆಗೆ ದೇಶದ 140 ದಶಲಕ್ಷ ಜನರಿಗೆ 60 ವರ್ಷ ದಾಟಲಿದ್ದು, ಭಾರತವು ಹಿರಿಯರ ಸಮಾಜವಾಗಿ ರೂಪುಗೊಳ್ಳಲಿದೆ. ಇದು ದೇಶದ ಪಿಂಚಣಿ ನಿಧಿಯ ಮೇಲಿನ ಒತ್ತಡವನ್ನು ಹೆಚ್ಚಿಸಲಿದೆ.

Advertisement

ಈ ಹಿನ್ನೆಲೆಯಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್ಒ) ನಿವೃತ್ತಿ ವಯೋಮಿತಿಯನ್ನು ಹೆಚ್ಚಳ ಮಾಡುವ ಬಗ್ಗೆ ಸಲಹೆ ನೀಡಿದೆ.

ತನ್ನ “2047ರ ದೂರದೃಷ್ಟಿ’ ಡಾಕ್ಯುಮೆಂಟ್‌ನಲ್ಲಿ ಈ ಬಗ್ಗೆ ಉಲ್ಲೇಖಿಸಿದೆ.

ಇಪಿಎಫ್ಒ ಸಲಹೆ ಬಗ್ಗೆ ಪ್ರತಿಕ್ರಿಯಿಸಿರುವ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು, “ನಿವೃತ್ತಿ ವಯಸ್ಸನ್ನು ಏರಿಕೆ ಮಾಡುವುದರಿಂದ ಇಪಿಎಫ್ಒ ಅಥವಾ ಇತರೆ ಪಿಂಚಣಿ ನಿಧಿಗಳಲ್ಲಿ ದೀರ್ಘಾವಧಿಗೆ ಅಧಿಕ ಮೊತ್ತದ ಪಿಂಚಣಿಯು ಜಮೆಯಾಗುತ್ತದೆ. ಇದರಿಂದ ಹಣದುಬ್ಬರವನ್ನು ನಿಯಂತ್ರಿಸಲೂ ಸಾಧ್ಯವಾಗುತ್ತದೆ’ ಎಂದಿದ್ದಾರೆ.

ಇದನ್ನೂ ಓದಿ:ಮಳೆ ಅವಾಂತರ; 7 ಸಚಿವರು ಬಿಲ ಸೇರಿಕೊಂಡಿದ್ದೇಕೆ?: ಕಾಂಗ್ರೆಸ್ ಪ್ರಶ್ನೆ

Advertisement

ಇಪಿಎಫ್ಒ ಸುಮಾರು 60 ದಶಲಕ್ಷ ಚಂದಾದಾರರನ್ನು ಹೊಂದಿದ್ದು, 12 ಲಕ್ಷಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ಪಿಎಫ್ ಮತ್ತು ಪಿಂಚಣಿ ಮೊತ್ತವನ್ನು ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next