Advertisement

ಮೀಸಲಾತಿ ಹೆಚ್ಚಳಕ್ಕೆ ಒಕ್ಕಲಿಗರ ಸ್ವಾಗತ

12:43 AM Mar 26, 2023 | Team Udayavani |

ಬೆಂಗಳೂರು: ಒಕ್ಕಲಿಗ ಸಮುದಾಯ ವನ್ನು ಒಳಗೊಂಡ “ಪ್ರವರ್ಗ-2ಸಿ’ಗೆ ರಾಜ್ಯ ಸರ್ಕಾರ ಶೇ.4ರಿಂದ 6 ಮೀಸಲಾತಿ ಹೆಚ್ಚಳ ಮಾಡಿರುವುದನ್ನು ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಸ್ವಾಗತಿಸಿದೆ. ಮುಂದಿನ ದಿನಗಳಲ್ಲಿ ಪ್ರವರ್ಗ-2ಸಿ ಗೆ ಹೆಚ್ಚಿನ ಮೀಸಲಾತಿ ನೀಡಬೇಕು ಎಂದು ಸಮಿತಿಯ ಅಧ್ಯಕ್ಷ ಡಾ.ಗಾನಂ ಶ್ರೀಕಂಠಯ್ಯ ಮುಂದೆ ಅಧಿಕಾರಕ್ಕೆ ಬರುವ ಸರ್ಕಾರಕ್ಕೆ ಮನವರಿಕೆ ಮಾಡಿದರು.

Advertisement

ಈ ಕುರಿತು ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಶೇ.12ಕ್ಕೆ ಹೆಚ್ಚಿಸಬೇಕು ಎಂಬುದು ಒಕ್ಕಲಿಗ ಸಮುದಾಯದ ಧಾರ್ಮಿಕ ಗುರುಗಳ ಮುಖಂಡತ್ವದಲ್ಲಿ ರಾಜ್ಯ ಒಕ್ಕಲಿಗರ ಹೋರಾಟ ಸಮಿತಿಯು 3 ವರ್ಷಗಳಿಂದ ನಡೆಸಿದ ನಿರಂತರ ಹೋರಾಟ ಫ‌ಲವಾಗಿ ಸರ್ಕಾರವು ಕಾನೂನಿನ ಇತಿಮಿತಿಯಲ್ಲಿ ಪ್ರವರ್ಗ-2ಸಿ ಅಡಿಯಲ್ಲಿ ಶೇ.4ರಷ್ಟಿದ್ದ ಮೀಸಲಾತಿಯನ್ನು 6ಕ್ಕೆ ಹೆಚ್ಚಳ ಮಾಡಿರುವುದು ಸಂತಸ ತಂದಿದೆ ಎಂದರು. ಆದರೆ, ರಾಜ್ಯದಲ್ಲಿ ಕೋಟಿಗೂ ಹೆಚ್ಚು ಜನಸಂಖ್ಯೆ ಹಾಗೂ 115 ಉಪಪಂಗಡಗಳನ್ನು ಹೊಂದಿರುವ ಒಕ್ಕಲಿಗ ಸಮುದಾಯವು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಹಿಂದುಳಿದಿದೆ. ಹೀಗಾಗಿ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಯನ್ನು ಶೇ.12ರಷ್ಟು ಹೆಚ್ಚಿಸಬೇಕು ಎಂದು ಮುಂದೆ ಅಧಿಕಾರಕ್ಕೆ ಬರುವ ಸರ್ಕಾರಕ್ಕೆ ಮನವರಿಕೆ ಮಾಡಿದರು.

ದಲಿತ ಮುಖಂಡರ ಆಕ್ರೋಶ
ಬೆಂಗಳೂರು: ದಲಿತ ಸಮುದಾಯಕ್ಕೆ ಒಳ ಮೀಸಲಾತಿ ಕಲ್ಪಿಸಿ ಸಚಿವ ಸಂಪುಟ ಕೈಗೊಂಡಿರುವ ತೀರ್ಮಾನವನ್ನು ಪರಿಶಿಷ್ಟರಿಗೆ ಮಂಕುಬೂದಿ ಎರಚುವ ಪ್ರಯತ್ನ ಎಂದು ದಲಿತ ಮುಖಂಡರು ಟೀಕಿಸಿದ್ದಾರೆ. ಈ ಬಗ್ಗೆ ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ದಲಿತ ಮುಖಂಡ ಸುದಾಮ್‌ ದಾಸ್‌, ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ನೀಡುವ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ಕೈಗೊಂಡಿರುವ ತೀರ್ಮಾನ ಪ.ಜಾತಿಯನ್ನು ಅಪಹಾಸ್ಯ ಮಾಡುವ ಪ್ರಯತ್ನ. ಈ ಪ್ರಸ್ತಾವನೆ ಜಾರಿಯಾಗಲು ಸಾಧ್ಯವಿಲ್ಲ.
ಒಳ ಮೀಸಲಾತಿಗಾಗಿ ಪ.ಜಾತಿಯವರು ದಶಕದಿಂದ ಹೋರಾಟ ಮಾಡುತ್ತಿದ್ದರೂ ಕ್ರಮ ಕೈಗೊಳ್ಳದ ಬಿಜೆಪಿ ಸರ್ಕಾರ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಕೊನೆಯ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಕಳು ಹಿಸುವ ನಾಟಕವಾಡುತ್ತಿದೆ ಎಂದು ಆರೋಪಿ ಸಿ ದ್ದಾರೆ. ಮತ್ತೂಬ್ಬ ಮುಖಂಡ ಬಿ. ಗೋಪಾಲ… ಮಾತ ನಾಡಿ, ಆರ್ಥಿಕವಾಗಿ ಹಿಂದುಳಿದ ವರ ಕೋಟಾದಲ್ಲಿ ಮೇಲ್ಜಾತಿ ಗಳಿಗೆ ಶೇ. 10 ಮೀಸಲಾತಿ ನೀಡಲಾಗಿದೆ. ತನ್ಮೂಲಕ ಮೀಸಲಾತಿ ಪ್ರಮಾಣ ಶೇ. 59 ತಲುಪಿದೆ. ಈಗ ಪರಿಶಿಷ್ಟರಿಗೆ ಹೆಚ್ಚು ಮೀಸಲಾತಿ ನೀಡಿದರೆ ಇದರ ಪ್ರಮಾಣ ಶೇ.64ಕ್ಕೆ ಏರಿಕೆಯಾಗಲಿದೆ. ಹೀಗಾಗಿ ಈ ಮೀಸಲಾತಿ ಹೆಚ್ಚಳ ಕಾರ್ಯಸಾಧುವಾಗುವುದಿಲ್ಲ ಎಂದರು.

ಸದಾಶಿವ ಆಯೋಗದ ವರದಿಯಂತೆ ಒಳ ಮೀಸಲಾತಿಯನ್ನು ರಾಜ್ಯ ಸರ್ಕಾರ ಜಾರಿ ಮಾಡಿರುವುದು ಸ್ವಾಗತಾರ್ಹ. ಆದರೆ, ಚುನಾವಣೆ ಹೊತ್ತಿನಲ್ಲಿ ಇದು ಬರೀ ಗಿಮಿಕ್‌ ಆಗಬಾರದು. ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಬೇಕು.
-ಎಚ್‌.ಆಂಜನೇಯ, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next