ಕಾಸರಗೋಡು: ವಿವಿಧ ಕಾರಣಗಳಿಂದಾಗಿ ಕೇರಳದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಸಹಿತ ಪೊಲೀಸರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಕೇರಳದ 54 ಮಂದಿ ಪೊಲೀಸರು ಆತ್ಮಹತ್ಯೆಗೆ ಶರಣಾಗಿದ್ದರು.
ಕಳೆದ ಶುಕ್ರವಾರ ಅಂದರೆ ಜ. 10ರಂದು ಕೇರಳದ ಕೊಲ್ಲಂನಲ್ಲಿ ಇತ್ತೀಚೆಗಿನ ಪೊಲೀಸ್ ಆತ್ಮಹತ್ಯೆಯಾಗಿದೆ. ಕೊಲ್ಲಂ ಜಿಲ್ಲೆಯ ಎಳ್‌ಕೋನ್ ಪೊಲೀಸ್ ಠಾಣೆ ಹೆಡ್ ಕಾನ್‌ಸ್ಟೆàಬಲ್ ಸ್ಟಾಲಿನ್ (52) ಸೇವಾ ಅವಧಿಯಲ್ಲಿ ಜನರೇಟರ್ ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ನಿರಂತರವಾಗಿ ಪೊಲೀಸರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂತಹ ಕೃತ್ಯವನ್ನು ತಡೆಗಟ್ಟಲು ಅವರನ್ನು ಮಾನಸಿಕವಾಗಿ ದೃಢಗೊಳಿಸಲು ಪ್ರತ್ಯೇಕ ತರಬೇತಿಯನ್ನು ಕಳೆದ ಸೆಪ್ಟಂಬರ್ ತಿಂಗಳಲ್ಲಿ ಆರಂಭಿಸ ಲಾಗಿತ್ತು. ಪೊಲೀಸರನ್ನು ಮಾನಸಿಕವಾಗಿ ಗಟ್ಟಿಗೊಳಿಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಿರಿಯ ಅಧಿಕಾರಿ ಗಳ ಸಭೆ ಕರೆದು ನಿರ್ದೇಶಿಸಿ ದಂತೆ ಪೊಲೀಸರ ಮಾನಸಿಕ ಹಾಗೂ ಕುಟುಂಬ ಸಮಸ್ಯೆಗಳಿಗೆ ಪರಿಹಾರ ಕಾಣಲು ಸೈಕಾಲಜಿಸ್ಟ್ ಸಹಿತ ಸಮಿತಿಯನ್ನು ರಚಿಸಲಾಗಿತ್ತು.
ಮಾನಸಿಕ ಸಮಸ್ಯೆಗಳನ್ನು ಎದುರಿಸು ತ್ತಿರುವ ಪೊಲೀಸರನ್ನು ಕೌನ್ಸೆಲಿಂಗ್‌ಗೆ ಕಳುಹಿಸಲು ಮತ್ತು ಈ ಕಾಲಾವಧಿಯನ್ನು ಡ್ನೂಟಿ ಯಲ್ಲಿದ್ದುದಾಗಿ ದಾಖಲಿಸಲು ಡಿ.ಜಿ.ಪಿ. ಲೋಕನಾಥ್ ಬೆಹ್ರಾ ಆದೇಶ ಹೊರಡಿಸಿದ್ದರು. ಇದೇ ಸಂದರ್ಭದಲ್ಲಿ ದುಃಖದ ಘಟನೆಯೊಂದು ನಡೆಯಿತು. ಪೊಲೀಸ್ ಅಕಾಡೆಮಿಯಲ್ಲಿ ಕೌನ್ಸಿಲಿಂಗ್ ನಡೆಸುತ್ತಿದ್ದ ಎಸ್.ಐ. ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಜ. 10 ರಂದು ಪೊಲೀಸ್ ಹೆಡ್ ಕಾನ್‌ಸ್ಟೆàಬಲ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೆ ಕಾರಣಗಳು
ಅಮಿತ ಕೆಲಸದ ಒತ್ತಡ, ಸಾಕಷ್ಟು ರಜೆ ಲಭಿಸದಿರುವುದು, ಹಿರಿಯ ಅಧಿಕಾರಿಗಳ ಕಿರುಕುಳ, ಮಾನಸಿಕ ಹಿಂಸೆ, ಸಣ್ಣ ಅಪರಾಧಕ್ಕೂ ಶಿಕ್ಷಿಸುವ ಸನ್ನಿವೇಶ, ಕುಟುಂಬ ಸಮಸ್ಯೆಗಳು.
ಸಮಸ್ಯೆಯತ್ತ ಗಮನ ಅಗತ್ಯ
ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿರುವ ಪೊಲೀಸ್ ಅಧಿಕಾರಿಗಳ ಸಹಿತ ಪೊಲೀಸರ ಆತ್ಮಹತ್ಯೆಯನ್ನು ತಡೆಗಟ್ಟಲು ಹಿರಿಯ ಅಧಿಕಾರಿಗಳ ಮತ್ತು ಸಾಮಾನ್ಯ ಪೊಲೀಸ್ ಸಿಬಂದಿ ಮಧ್ಯೆ ಆರೋಗ್ಯ ಪೂರ್ಣ ಸಂಬಂಧ ಬೆಳೆಯಬೇಕು. ವಿಶ್ರಾಂತಿಗೆ ಅವಕಾಶ ನೀಡಬೇಕು. ವೆÂಯಕ್ತಿಕ ಹಾಗೂ ಕುಟುಂಬ ಸಂಬಂಧ ಸಮಸ್ಯೆಗಳ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತರಬೇಕು.
– ಪಿಣರಾಯಿ ವಿಜಯನ್,
ಮುಖ್ಯಮಂತ್ರಿ.