Advertisement

Muslims ಸಂಖ್ಯೆ ಏರಿಕೆ, 2027ಕ್ಕೆ ಬಿಜೆಪಿ ಆಡಳಿತಕ್ಕೆ ತೆರೆ: ಸಮಾಜವಾದಿ ಪಕ್ಷದ ಶಾಸಕ

01:32 AM Oct 01, 2024 | Team Udayavani |

ಲಕ್ನೋ: ಉತ್ತರ ಪ್ರದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಾಗಿದೆ. ಬಿಜೆಪಿ ಆಡಳಿತ ಅಂತ್ಯವಾಗಿ, ಮುಸ್ಲಿಮರು ಅಧಿಕಾರಕ್ಕೆ ಬರಲಿದ್ದಾರೆಂದು ಹೇಳಿದ್ದ ಸಮಾಜವಾದಿ ಪಕ್ಷದ ಶಾಸಕ ಮೆಹಬೂಬ್‌ ಅಲಿ ವಿರುದ್ಧ ಎಫ್ಐಆರ್‌ ದಾಖಲಾಗಿದೆ.

Advertisement

ಬಿಜ್ನೋರ್‌ನ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಎಸ್‌ಪಿ ಶಾಸಕ ಅಲಿ, 850 ವರ್ಷಗಳ ಕಾಲ ಮೊಘಲರು ಆಳಿದ್ದಾರೆ. ಈ ದೇಶವನ್ನು ಸುಡುತ್ತಿರುವವರು ಒಂದು ಅರ್ಥ ಮಾಡಿಕೊಳ್ಳಬೇಕು, ಜನರು ಈಗ ಎಚ್ಚರವಾಗಿದ್ದಾರೆ. ಅವರು ಲೋಕಸಭೆ ಚುನಾವಣೆಯಲ್ಲಿ ತಮ್ಮ ಉತ್ತರ ನೀಡಿದ್ದಾರೆ. 2027(ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ)ರಲ್ಲಿ ನೀವು ಅಧಿಕಾರ ಕಳೆದುಕೊಳ್ಳಲಿದ್ದೀರಿ. ನಾವು ಅಧಿಕಾರಕ್ಕೆ ಬರಲಿದ್ದೇವೆ ಎಂದಿದ್ದಾರೆ. ಹೇಳಿಕೆ ಹಿನ್ನೆಲೆಯಲ್ಲಿ ಎಫ್ಐಆರ್‌ ದಾಖಲಿಸಲಾಗಿದೆ.

ಬಿಜೆಪಿ ಟೀಕೆ: ಬಿಜೆಪಿಯ 80:20 ಹೇಳಿಕೆಗೆ ಆಕ್ಷೇಪ ಮಾಡುತ್ತಿದ್ದರು. ಈಗ ಯಾರು 80:20 ರಾಜಕೀಯ ಮಾಡುತ್ತಿದ್ದಾರೆ. ಇದೇನಾ ನಿಮ್ಮ ಮೊಹಬ್ಬತ್‌ ಕೀ ದೂಕಾನ್‌? ಇದೇನಾ ನಿಮ್ಮ ಸಂವಿಧಾನ ಪರ ನಿಲುವು? ಮತಕ್ಕಾಗಿ ಹಿಂದೂಗಳನ್ನು ಒಡೆದು, ಮುಸ್ಲಿಮರನ್ನು ಕ್ರೋಡೀಕರಿ ಸುವ ನಿಮ್ಮ ಪ್ಲ್ರಾನ್‌ ಸ್ಪಷ್ಟವಾಗಿದೆ ಎಂದು ಬಿಜೆಪಿಯ ವಕ್ತಾರ ಶೆಹಜಾದಾ ಪೂನಾವಾಲ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next