Advertisement
ಮಂಗಳೂರಿನ ಅಂಗಡಿಗಳಲ್ಲಿಯೂ ವಿವಿಧ ಬಣ್ಣದ ಶ್ರಗ್‌ಗಳಿಂದು ಹೆಚ್ಚಾಗಿ ಮಾರಾಟವಾಗುತ್ತಿದೆ. ಒಂದು ಕಾಲದಲ್ಲಿ ಮಹಿಳೆಯರೇ ಹೆಚ್ಚಾಗಿ ಧಿರಿಸುತ್ತಿದ್ದ ಶ್ರಗ್ ಗಳಿಂದು ಪುರುಷರು, ಮಕ್ಕಳ ಫೆವರೇಟ್ ಡ್ರೆಸ್ ಗಳಾಗಿವೆ. ನೋಡಲು ಥೇಟ್ ಅಂಗಿಯಂತಿರುವ ಶ್ರಗ್‌ಗೆ ಬಟನ್, ಗುಂಡಿಗಳಿರುವುದಿಲ್ಲ. ಇದೇ ಕಾರಣದಿಂದಾಗಿ ಇದನ್ನು ಮೇಲುಡುಪಿನಂತೆ ಧರಿಸುತ್ತಾರೆ. ಜಾಕೆಟ್‌ನಂತೆ ಧರಿಸುವುದು ಕೂಡ ಫ್ಯಾಶನ್ ಆಗಿದೆ.
ಯಾವುದೇ ಡ್ರೆಸ್ ಧರಿಸುವಾಗ ಕಲರ್ ಕಾಂಬಿನೇಷನ್ ಆಯ್ಕೆ ಬಹುಮುಖ್ಯ. ಹಳದಿ ಅಂಗಿಗೆ ಕೆಂಪು ಬಣ್ಣದ ಶ್ರಗ್ ಹೊಂದಿಕೆ ಆಗುವುದಿಲ್ಲ. ಅದರ ಬದಲು ಪುರುಷರಿಗೆ ಹೊಂದಿಕೊಳ್ಳುವ ಕಪ್ಪು, ನೀಲಿ, ಬೂದು, ನೇರಳೆ ಬಣ್ಣದ ಶ್ರಗ್‌ಗಳು ಸಾಧಾರಣವಾಗಿ ಎಲ್ಲಾ ಬಗೆಯ ಡ್ರೆಸ್‌ಗಳಿಗೆ ಹೊಂದಿಕೆಯಾಗುತ್ತದೆ. ಶ್ರಗ್ ಖರೀದಿ ಮಾಡುವ ಸಮಯದಲ್ಲಿನ ಹೆಚ್ಚಿನ ಮಂದಿ ಸಣ್ಣ ಗಾತ್ರದ ಶ್ರಗ್‌ಗಳನ್ನು ಆಯ್ಕೆ ಮಾಡುವುದಿಲ್ಲ. ಪುರುಷರು ಶ್ರಗ್ ಆಯ್ಕೆ ಮಾಡುವಾಗ ಸೊಂಟದವರೆಗೆ ಉದ್ದವಿರುವ ಶ್ರಗ್‌ಗಳನ್ನು ಆಯ್ಕೆ ಮಾಡುತ್ತಾರೆ. ಸಮ್ಮರ್ ಸಮಯದಲ್ಲಿ ಕಾಟನ್, ಫುಲ್ ಸ್ಲೀವ್ ಶ್ರಗ್,ವಾಟರ್ ಫಾಲ್ ಫುಲ್ ಸ್ಲೀವ್ ಶ್ರಗ್, ಕಟನ್ ಬ್ಲೆಂಡ್ ಶ್ರಗ್ ಸೇರಿದಂತೆ ಮತ್ತಿತರ ವಿನ್ಯಾಸಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.
Related Articles
ಈ ಹಿಂದೆ ಮಹಿಳೆಯರು ಹೆಚ್ಚಾಗಿ ಶ್ರಗ್‌ಗಳನ್ನು ಧಿರಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಬರುವಂತಹ ಚಲನಚಿತ್ರಗಳಲ್ಲಿ ಶ್ರಗ್ ಬಳಕೆ ಕಂಡು ಹುಡುಗರು ಕೂಡ ಈ ಟ್ರೆಂಡ್‌ನತ್ತ ವಾಲಲು ಪ್ರಾರಂಭಿಸಿದ್ದಾರೆ. ಅದಕ್ಕೆ ತಕ್ಕಂತೆಯೇ ಮಾರುಕಟ್ಟೆಗೂ ವಿಸ್ತರಿಸಿದ್ದು, ವಿವಿಧ ಬಗ್ಗೆಯ ಆಯ್ಕೆಗಳು ಸಿಗುತ್ತಿವೆ. ಅಲ್ಲದೆ, ಶ್ರಗ್‌ಗಳಿಗೆ ಅನ್‌ಲೈನ್ ಮಾರುಕಟ್ಟೆಯಲ್ಲಿಯೂ ಬೇಡಿಕೆ ಹೆಚ್ಚಿದೆ. ಮಾರುಕಟ್ಟೆಯಲ್ಲಿ ಪುರುಷರ ಶ್ರಗ್ ಗಳು ಸುಮಾರು 500 ರೂ. ನಿಂದ ಪ್ರಾರಂಭವಾಗಿ 3000ರೂ.ಗಳಿಗೂ ಮೇಲ್ಪಟ್ಟ ಧಿರಿಸುಗಳಿವೆ.
Advertisement
ಟ್ರೆಂಡ್ ಹೆಚ್ಚಾಗಿದೆಮಂಗಳೂರು ಮಾರುಕಟ್ಟೆಯಲ್ಲಿ ಶ್ರಗ್ ಟ್ರೆಂಡ್ ಹೆಚ್ಚಾಗಿದೆ. ಈ ಹಿಂದೆ ಮಹಿಳೆಯರು ಮಾತ್ರ ಶ್ರಗ್ ಧರಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಪುರುಷರು, ಮಕ್ಕಳಲ್ಲಿಯೂ ಈ ಟ್ರೆಂಡ್ ಬಂದುಬಿಟ್ಟಿದೆ.
– ಪ್ರಕಾಶ್ ಬಟ್ಟೆ ವ್ಯಾಪಾರಸ್ಥ ನವೀನ್ ಭಟ್ ಇಳಂತಿಲ