Advertisement

ನಗರ ಭಾಗದಲ್ಲಿ ಉದ್ಯೋಗ ಪ್ರಮಾಣ ಏರಿಕೆ; ಕೇಂದ್ರ ವಿತ್ತ ಸಚಿವಾಲಯ ಮಾಹಿತಿ

07:47 PM Sep 17, 2022 | Team Udayavani |

ನವದೆಹಲಿ: ಬಹಳ ಕಾಲದ ನಂತರ ಕೇಂದ್ರ ವಿತ್ತ ಸಚಿವಾಲಯ ಮಹತ್ವದ ಮಾಹಿತಿಯೊಂದನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ, ಭಾರತದ ನಗರಪ್ರದೇಶದಲ್ಲಿ ಉದ್ಯೋಗಿಗಳ ಪ್ರಮಾಣ ಏರಿದೆ. ಅರ್ಥಾತ್‌ ನಿರುದ್ಯೋಗಿಗಳ ಪ್ರಮಾಣ ಕೊರೊನಾಪೂರ್ವ ಕಾಲದಲ್ಲಿರುವಷ್ಟೇ ಮಟ್ಟಕ್ಕೆ ಮರಳಿದೆ.

Advertisement

ಜೂನ್‌ಗೆ ಅಂತ್ಯವಾದ ತ್ತೈಮಾಸಿಕದಲ್ಲಿ ನಿರುದ್ಯೋಗ ಪ್ರಮಾಣ ಶೇ.7.6ಕ್ಕಿಳಿದಿದೆ. 2021ರ ಇದೇ ಅವಧಿಯಲ್ಲಿ ನಿರುದ್ಯೋಗ ಪ್ರಮಾಣ ಶೇ.14.3ರಷ್ಟಿತ್ತು ಎಂದು ಕೇಂದ್ರ ಸರ್ಕಾರ ಹೇಳಿದೆ.

ಇದೇ ವೇಳೆ ಜನರ ಮೂಲವೇತವೂ ಹೆಚ್ಚಾಗಿದೆ. ಕಳೆದ ವರ್ಷದ ಈ ಪ್ರಮಾಣ ಕಡಿಮೆಯಿತ್ತು. ಕೊರೊನಾ ಕಾಲದಲ್ಲಿ ಮತ್ತು ನಂತರ ನಿರುದ್ಯೋಗ ಪ್ರಮಾಣ ಕಡಿಮೆಯಾಗಬೇಕೆಂದು ಕ್ರಮ ತೆಗೆದುಕೊಳ್ಳಲಾಗಿತ್ತು ಅವೆಲ್ಲ ಈಗ ಫ‌ಲ ನೀಡುತ್ತಿವೆ ಎಂದು ವಿತ್ತ ಸಚಿವಾಲಯ ಹೇಳಿದೆ.

ಗ್ರಾಮೀಣ ಭಾಗದಲ್ಲಿ ಮಹಾತ್ಮ ಗಾಂಧಿ ಉದ್ಯೋಗಖಾತ್ರಿ ಯೋಜನೆಯಡಿ (ಮನ್‌ರೇಗಾ) ಉದ್ಯೋಗಗಳಿಗಾಗಿ ಇದ್ದ ಬೇಡಿಕೆ ಕುಸಿದಿದೆ. ಮೇ ತಿಂಗಳ ನಂತರ ಈ ಕುಸಿತ ಆರಂಭವಾಗಿದೆ. ಆಗಸ್ಟ್‌ನಲ್ಲಿ ತೀರಾ ಕನಿಷ್ಠ ಮಟ್ಟಕ್ಕಿಳಿದಿದೆ. ಇದರಿಂದ ಗ್ರಾಮೀಣ ಭಾಗದಲ್ಲೂ ನಿರುದ್ಯೋಗ ಪ್ರಮಾಣ ತಗ್ಗಿದೆ ಎಂದು ವಿಶ್ಲೇಷಿಸಲಾಗಿದೆ.

ಮತ್ತಷ್ಟು ಸುಸ್ಥಿತಿಗೆ ಬರಲಿದೆ ಅರ್ಥ ವ್ಯವಸ್ಥೆ
ದೇಶದಲ್ಲಿ ಮುಂದಿನ ದಿನಗಳಲ್ಲಿ ಜನರು ಹೆಚ್ಚಿನ ಪ್ರಮಾಣದಲ್ಲಿ ಖರ್ಚು ಮಾಡಲಿದ್ದಾರೆ ಮತ್ತು ಉದ್ಯೋಗದ ಪ್ರಮಾಣವೂ ಹೆಚ್ಚಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇದರಿಂದಾಗಿ ದೇಶದ ಅರ್ಥ ವ್ಯವಸ್ಥೆ ಮತ್ತಷ್ಟು ಸುಸ್ಥಿತಿಗೆ ಬರಲಿದೆ ಎಂದು ಆಗಸ್ಟ್‌ಗೆ ಸಂಬಂಧಿಸಿದಂತೆ ಇರುವ ದೇಶದ ಮಾಸಿಕ ಆರ್ಥಿಕ ಸ್ಥಿತಿಯ ಪರಾಮರ್ಶೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Advertisement

ಏಪ್ರಿಲ್‌ನಿಂದ ಆಗಸ್ಟ್‌ ಅವಧಿಯಲ್ಲಿ ವಾಣಿಜ್ಯೋದ್ಯಮ ಕ್ಷೇತ್ರದಲ್ಲಿನ ಹೂಡಿಕೆಗೆ ಕೇಂದ್ರ ಸರ್ಕಾರ ಉತ್ತೇಜನ ನೀಡಿದ್ದರಿಂದ ಅದರ ಪ್ರಮಾಣ ಶೇ.35ಕ್ಕೆ ಏರಿಕೆಯಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಕೆ ಮಾಡಿದರೆ ಈ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ ಎಂದು ವರದಿ ಹೇಳಿದೆ.

ಸರ್ಕಾರಕ್ಕೆ ವಿವಿಧ ತೆರಿಗೆಗಳ ಮೂಲದಿಂದ ಬರುವ ಆದಾಯದ ಪ್ರಮಾಣ ಹೆಚ್ಚಾಗಿದೆ. ಹೆಚ್ಚಿನ ಪ್ರಮಾಣದ ವಿದೇಶಿ ವಿನಿಮಯ ನಿಧಿ, ರಫ್ತು ಕ್ಷೇತ್ರದಿಂದ ಉಂಟಾದ ಲಾಭ, ಸ್ಥಿರವಾಗಿರುವ ವಿದೇಶಿ ಬಂಡವಾಳ ಹೂಡಿಕೆಯಿಂದಾಗಿಯೂ ಮುಂದಿನ ದಿನಗಳಲ್ಲಿ ದೇಶದ ಅರ್ಥ ವ್ಯವಸ್ಥೆ ಸದೃಢವಾಗಿರುವ ಮುನ್ಸೂಚನೆ ನೀಡಿದೆ

Advertisement

Udayavani is now on Telegram. Click here to join our channel and stay updated with the latest news.

Next