Advertisement

“ಮಾದಕ ದ್ರವ್ಯದಿಂದ ಸೃಜನಶೀಲತೆ ಹೆಚ್ಚಳ ಎಂಬುದು ಭ್ರಮೆ’

11:23 PM Jul 12, 2019 | Sriram |

ಉಡುಪಿ:ಮಾದಕ ವ್ಯಸನವೆಂಬುದು ಚಕ್ರವ್ಯೂಹವಿದ್ದಂತೆ. ಮಾದಕದ್ರವ್ಯ ಸೇವನೆಯಿಂದಾಗುವ ದುಷ್ಪರಿಣಾಮ ಅರಿತು ಅವುಗಳಿಂದ ದೂರವಿರುವುದೇ ಜಾಣತನ ಎಂದು ಮನೋವೈದ್ಯ ಡಾ| ಪಿ.ವಿ. ಭಂಡಾರಿ ಹೇಳಿದರು.

Advertisement

ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನ ಎನ್ನೆಸೆಸ್‌ ಘಟಕ, ವಿಜ್ಞಾನ ಸಂಘ ಮತ್ತು ಪರಿಸರ ಸಂಘಗಳ ಆಶ್ರಯದಲ್ಲಿ ನಡೆದ ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಯಾಗಿ ಅವರು ಮಾತನಾಡಿದರು.

ನಾವಾಗಿಯೇ ದೂರವುಳಿಯೋಣ
ಮದ್ಯದಂತಹ ಮಾದಕ ವಸ್ತುಗಳು ಸರಕಾರದ ಆದಾಯದ ಮೂಲವೂ ಆಗಿರುವುದರಿಂದ ಅವುಗಳ ನಿರ್ಬಂಧ ವನ್ನು ನಿರೀಕ್ಷಿಸಲಾಗದು. ನಾವಾಗಿಯೇ ದೂರವುಳಿಯುವುದೊಂದೇ ರಕ್ಷಣೆಯ ಮಾರ್ಗ ಎಂದು ಅವರು ಹೇಳಿದರು.

ಹಿರಿಯ ಉಪನ್ಯಾಸಕ ದಯಾನಂದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯ ಕ್ರಮಾಧಿಕಾರಿ ಸುಧಾ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಷ್ಮಾ ನಿರೂಪಿಸಿ, ರಮ್ಯಾ ದೇಶಪಾಂಡೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next