Advertisement

ಚೀನ ಉತ್ಪನ್ನಗಳ ಆಮದು ತೆರಿಗೆ ಹೆಚ್ಚಳ?

02:44 AM Aug 12, 2020 | mahesh |

ಹೊಸದಿಲ್ಲಿ: ಚೀನದ ಮೇಲೆ ಭಾರತ ತನ್ನ ಆರ್ಥಿಕ ನಿರ್ಬಂಧಗಳ ಅಸ್ತ್ರವನ್ನು ತೀವ್ರಗೊಳಿಸುತ್ತಿದೆ. ಚೀನದಿಂದ ಆಮದಾಗುವ 20 ಉತ್ಪನ್ನಗಳ ಮೇಲಿನ ಸೀಮಾ ಸುಂಕ ಹೆಚ್ಚಿಸುವ ಬಗ್ಗೆ ಕೇಂದ್ರ ಸರಕಾರ ಚಿಂತಿಸುತ್ತಿದೆ ಎಂದು ಮೂಲಗಳು ಹೇಳಿವೆ.

Advertisement

ಸೀಮಾ ಸುಂಕ ಹೆಚ್ಚಳಗೊಳ್ಳುವ ಉತ್ಪನ್ನಗಳಲ್ಲಿ ಲ್ಯಾಪ್‌ಟಾಪ್‌ಗಳು, ಕೆಮರಾಗಳು, ಜವುಳಿ ಕೂಡ ಸೇರಿವೆ. ಅಲ್ಯುಮಿನಿಯಂ, ಉಕ್ಕು ಉತ್ಪನ್ನಗಳ ಆಯಾತಕ್ಕೆ ಪರವಾನಿಗೆ ಕಡ್ಡಾಯಗೊಳಿಸುವ ನಿಯಮ ಜಾರಿಗೆ ಕೇಂದ್ರ ಚಿಂತಿಸಿದೆ ಎನ್ನಲಾಗಿದೆ.

ಈ ಕ್ರಮದಿಂದ ಚೀನದಿಂದ ಆಮದಾಗುತ್ತಿರುವ ವಸ್ತುಗಳನ್ನು ನಿಯಂತ್ರಿಸಲು ಸಾಧ್ಯವಾಗಲಿದೆ ಎಂದು ಮೂಲಗಳು ಹೇಳಿವೆ. ಆತ್ಮನಿರ್ಭರ ಭಾರತಕ್ಕೆ ಒತ್ತು ನೀಡುವ ಉದ್ದೇಶವೂ ಇದರ ಹಿಂದಿದೆ.

ಕೆಲವು ದಿನಗಳಿಂದ ತಾನು ಮುಕ್ತ ವ್ಯಾಪಾರ ಒಪ್ಪಂದ ಹೊಂದಿರುವ ರಾಷ್ಟ್ರಗಳಿಂದ ಆಮದು ಪ್ರಮಾಣ ಹೆಚ್ಚಾಗಿರುವುದನ್ನು ಭಾರತ ಗಮನಿಸಿದೆ. ಚೀನವು ಈ ದೇಶಗಳಿಂದ ತನ್ನ ವಸ್ತುಗಳನ್ನು ಭಾರತಕ್ಕೆ ಕಳುಹಿಸುತ್ತಿರುವ ಸುಳಿವು ಸರಕಾರಕ್ಕೆ ಸಿಕ್ಕಿದೆ. ಆದ್ದರಿಂದಲೇ ಹಂತಹಂತವಾಗಿ ವಿವಿಧ ರೀತಿಯ ನಿರ್ಬಂಧಗಳನ್ನು ಹೇರಲು ಆರಂಭಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next