Advertisement
ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗ ಪ್ರತಿದಿನ 75 ಲಕ್ಷ ರೂ. ಆದಾಯ ನಿರೀಕ್ಷೆ ಹೊಂದಿದೆ. ಆದರೆ ಕೋವಿಡ್-19ರ ಪರಿಣಾಮ ಬಸ್ ಓಡಾಟವಿಲ್ಲದೆ ಆದಾಯ ಪಾತಾಳಕ್ಕೆ ಕುಸಿದಿತ್ತು. ಇದೀಗ ಹೆಚ್ಚಿನ ರೂಟ್‌ಗಳಲ್ಲಿ ಬಸ್‌ಗಳ ಓಡಾಟ ಪುನರಾರಂಭಗೊಂಡು ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಆರ್ಥಿಕ ಪರಿಸ್ಥಿತಿ ಚೇತರಿಕೆಯ ಹಂತದಲ್ಲಿದೆ.
Related Articles
Advertisement
ನಿರ್ಬಂಧ ಸಡಿಲಿಕೆಯಿಂದ ಪರಿಸ್ಥಿತಿ ಸುಧಾರಣೆ : ಕೋವಿಡ್ ಮೊದಲೇ ನಿರೀಕ್ಷಿತ ಆದಾಯದಲ್ಲಿ 60 ಲಕ್ಷ ರೂ. ಮಾತ್ರ ಸಂಗ್ರಹಗೊಂಡು 15 ಲಕ್ಷ ರೂ. ಕೊರತೆ ಉಂಟಾಗುತ್ತಿತ್ತು. ತಿಂಗಳ ಅಂಕಿ ಅಂಶದಲ್ಲಿ ಕೆಲವು ಘಟಕ ಲಾಭದಲ್ಲಿದ್ದರೆ, ಇನ್ನು ಕೆಲವು ನಷ್ಟ ಅನುಭವಿಸುತ್ತವೆ. ಕೊರೊನಾ ಅನಂತರವಂತೂ ನಷ್ಟದ ಅಂತರ ಮತ್ತಷ್ಟು ದ್ವಿಗುಣಗೊಂಡಿತು. ವಿಭಾಗ ವ್ಯಾಪ್ತಿಯಲ್ಲಿ 560 ಬಸ್‌ಗಳಿದ್ದು, ಅವುಗಳಿಗೆ ಪ್ರತಿ ಕಿ.ಮೀ.ಗೆ 20,160 ರೂ. ಖರ್ಚು ಬೇಕಾಗುತ್ತದೆ. ಲಾಕ್‌ಡೌನ್ ಪ್ರಾರಂಭದ ಕೆಲ ತಿಂಗಳು ಪೂರ್ಣ ನಷ್ಟ ಉಂಟಾಗಿತ್ತು. ಇದೀಗ ಪರಿಸ್ಥಿತಿ ಸುಧಾರಿಸಿದೆ. ಎರಡು ತಿಂಗಳಿನಿಂದ ಬಸ್ ಓಡಾಟ ಹೆಚ್ಚಳಗೊಂಡಿದ್ದು, ಈ ಹಿಂದಿನ ಅಂಕಿ ಅಂಶಕ್ಕೆ ಹೋಲಿಸಿದರೆ ಪ್ರಸ್ತುತ ಶೇ. 80ರಷ್ಟು ಆದಾಯ ಸಂಗ್ರಹ ವಾಗುತ್ತಿದೆ. ದಿನಂಪ್ರತಿ 450 ಬಸ್‌ಗಳು ಸಂಚರಿಸುತ್ತಿವೆ. ಬಸ್‌ನ ಪ್ರತಿ ಕಿ.ಮೀ. ಓಡಾಟಕ್ಕೆ ತಲಾ 37 ರೂ. ಖರ್ಚು ತಗಲುತ್ತದೆ. ಲಾಕ್‌ಡೌನ್‌ಗೆ ಪೂರ್ವದಲ್ಲಿ ಪ್ರತಿ ಕಿ.ಮೀ.ಗೆ 32 ರೂ. ಆದಾಯ ಸಿಗುತ್ತಿತ್ತು. ಲಾಕ್‌ಡೌನ್ ಅನಂತರ ಬಸ್ ಓಡಾಟ ಆರಂಭಿಸಿದ್ದರೂ ಸೀಮಿತ ಪ್ರಯಾಣಿಕರಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಿದ ಕಾರಣ ಆದಾಯ 12 ರೂ.ಗೆ ಇಳಿದಿತ್ತು. ಎರಡು ತಿಂಗಳಿನಿಂದ ನಿರ್ಬಂಧ ಸಡಿಲಿಸಿ ಬಸ್ ಓಡಾಟ ನಡೆಯುತ್ತಿದ್ದು, ಆದಾಯ 28 ರೂ.ಗೆ ತಲುಪಿದೆ.
ಆದಾಯದಲ್ಲಿ ಚೇತರಿಕೆ : ಪುತ್ತೂರು ವಿಭಾಗದಲ್ಲಿ ಶೇ. 85ರಷ್ಟು ಬಸ್‌ಗಳ ಓಡಾಟ ಪುನರಾರಂಭಗೊಂಡಿವೆ. ಈಗಾಗಲೇ ಶೇ. 80ರಷ್ಟು ಆದಾಯ ಸಂಗ್ರಹವಾಗುತ್ತಿದೆ. ಲಾಕ್‌ಡೌನ್ ಬಳಿಕ ಓಡಾಟ, ಆದಾಯ ಸಂಗ್ರಹದಲ್ಲಿ ಚೇತರಿಕೆ ಕಂಡಿದೆ. –ಜಯಕರ ಶೆಟ್ಟಿ, ನಿಯಂತ್ರಣಾಧಿಕಾರಿ, ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗ
– ಕಿರಣ್ ಪ್ರಸಾದ್ ಕುಂಡಡ್ಕ