Advertisement

ಕೋವಿಡ್ ದಿಂದ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳ

04:30 PM Sep 28, 2020 | Suhan S |

ತಿಪಟೂರು: ತಾಲೂಕಿನ ಮತ್ತೀಹಳ್ಳಿ  ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಮತ್ತು ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಮತ್ತು ಗ್ರಾಮಸ್ಥರ ಸತತ ಪರಿಶ್ರಮದೊಂದಿಗೆ ಶಾಲೆಯ ವ್ಯಾಪ್ತಿಯ ಸುತ್ತಮುತ್ತ ಗ್ರಾಮಗಳ ಪೋಷಕರನ್ನು ಮನವೊಲಿಸಿ ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸುವ ಕೆಲಸ ಮಾಡಲಾಗುತ್ತಿದ್ದು, ಕೋವಿಡ್‌ -19ರ ಸಮಯದಲ್ಲಿ ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಕರವೇ ತಾಲೂಕು ಅಧ್ಯಕ್ಷ ಕುಮಾರ್‌ ಯಾದವ್‌ ಹೇಳಿದರು.

Advertisement

ಶಾಲಾ ಮಕ್ಕಳಿಗೆ ಪರಿಕರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಸ್‌ ಡಿಎಂಸಿ ಅಧ್ಯಕ್ಷರಾದ ಚಂದ್ರಶೇಖರಯ್ಯ, ಬಲವಂತಯ್ಯ, ಸದಸ್ಯ ಲೋಕೇಶ್‌, ಪ್ರಭಾರಿ ಮುಖ್ಯಶಿಕ್ಷಕಿ ಪದ್ಮಾ, ಸಹ ಶಿಕ್ಷಕಿಯರಾದ ಗಂಗಮ್ಮ, ನಿಸರ್ಗ, ಮಂಜುಳ ಗ್ರಾಮಸ್ಥರಾದ ದೇವರಾಜ್‌ ಮತ್ತು ಮಹಲಿಂಗಯ್ಯ ಇದ್ದರು. ಶಾಲೆಯ ಶಿಕ್ಷಕ ಹನುಮಪ್ಪ ಕೆಲ ವಿದ್ಯಾರ್ಥಿಗಳಿಗೆ ಛತ್ರಿ, ಚಪ್ಪಲಿ ಹಾಗೂ ಅಭ್ಯಾಸ ಪರಿಕರಗಳನ್ನು ವಿತರಿಸಿ, ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.

………………………………………………………………………………………………………………………………………………………………

ಡ್ರಗ್ಸ್‌ಕಡಿವಾಣಕ್ಕೆ ಪತ್ರ ಚಳವಳಿ :

ಚಿಕ್ಕನಾಯಕನಹಳ್ಳಿ: ಡ್ರಗ್ಸ್‌ ಕಡಿವಾಣಕ್ಕೆ ಸಶಕ್ತ ನೀತಿ ರೂಪಿಸಲು ರಾಜ್ಯ ಸರ್ಕಾರವನ್ನು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಪತ್ರ ಚಳವಳಿ ನಡೆಸಿದ್ದು, ಎಬಿವಿಪಿ ಕಾರ್ಯಕರ್ತರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಅಂಚೆ ಪೆಟ್ಟಿಗೆಗೆ ಹಾಕಿದರು.

Advertisement

ಮಾದಕ ವಸ್ತುಗಳ ಬಳಕೆ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ವ್ಯಾಪಿಸಿದೆ,ಈಜಾಲಕ್ಕೆ ಶಾಲಾ ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಿರುವ ಮಾಡುತ್ತಿರುವ ವಿದ್ಯಾರ್ಥಿಗಳು ಬಲಿಯಾಗುತ್ತಿರುವುದು ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿ ವಿದ್ಯುಮಾನವಾಗಿದೆ. ಡ್ರಗ್ಸ್‌ ದಂಧೆಯಲ್ಲಿ ಬಹು ಪ್ರಭಾವಿಗಳು ಭಾಗಿಯಾಗಿರುವುದರಿಂದ ಅಂಥವರನ್ನು ಮಟ್ಟ ಹಾಕುವ ಸವಾಲು ರಾಜ್ಯ ಸರಕಾರದ ಮುಂದಿದೆ, ಇದಕ್ಕಾಗಿ ಪ್ರಬಲವಾದ ಕಾನೂನನ್ನು ರೂಪಿಸುವುದೊಂದೇ ಪರಿಹಾರ, ಸರ್ಕಾರ ನಿಸ್ಪಕ್ಷಪಾತವಾದ ಕಾನೂನು ಕ್ರಮದ ಮೂಲಕ ದಂಧೆಯ ವಿರುದ್ಧ ಸಮರ ಸಾರಬೇಕೆಂದು ಮುಖ್ಯಮಂತ್ರಿಗಳಿಗೆ ಎಬಿವಿಪಿ ಕಾರ್ಯಕರ್ತರು ಪತ್ರ ಬರೆದು ಆಗ್ರಹಿಸಿದರು.

ಎಬಿವಿಪಿ ಕಾರ್ಯಕರ್ತರಾದ ರವಿ , ಮನು, ಪವನ, ರಾಖೀ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next