ಈವರೆಗೆ ಇಂತಹ ಯಾವುದೇ ನಿಯಮಗಳು ಭಾರತದಲ್ಲಿ ಇರಲಿಲ್ಲ. ಈ ಹಿಂದೆ ಪ್ರತಿ ಮೊಬೈಲ್ ನೆಟ್‌ವರ್ಕ್‌ಗಳು ತಮಗೆ ಬೇಕಾದಂತೆ ರಿಂಗಣಿಸುವ ಸಮಯವನ್ನು ನಿಗದಿ ಮಾಡಿಕೊಂಡಿದ್ದವು.
ಒಂದು ನಿರ್ದಿಷ್ಟ ನೆಟ್ ವರ್ಕ್ ಬಳಕೆದಾರರು ಇತರ ನೆಟ್ ವರ್ಕ್ ನಿಂದ ಬರುವ ಕರೆಗೆ ಉತ್ತರಿಸುವ ಸಾಧ್ಯತೆಗಳು ವಿಭಿನ್ನವಾಗುವುದರೊಂದಿಗೆ ಒಂದು ನಿರ್ದಿಷ್ಟ ನೆಟ್‌ವರ್ಕ್ ಬಳಕೆದಾರ ಇತರ ನೆಟ್‌ವರ್ಕ್‌ಗಳ ಕರೆಗೆ ಉತ್ತರಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾನೆ. ಇದರಿಂದ ರೆಡಿಯೋ ಸ್ಪೆಕ್ಟ್ರಮ್ ಸಂಪನ್ಮೂಲಗಳು ವಿರಳವಾಗುತ್ತವೆ. ಈ ಹಿನ್ನಲೆ ಪ್ರತಿಯೊಂದು ನೆಟ್‌ವರ್ಕ್‌ಗೆ ನಿರ್ದಿಷ್ಟ ಸಮಯವನ್ನು ನಿಗದಿಪಡಿಸಲಾಗಿದೆ ಎಂದು ಟ್ರಾಯ್ ಹೇಳಿದೆ.
Advertisement
ಇನ್ನೂ ಇದೇ ವಿಷಯದ ಕುರಿತಾಗಿ ರಿಲಯನ್ಸ್ ಜಿಯೋ ಮತ್ತು ಭಾರತೀಯ ಏರ್ ಟೆಲ್ ನಡುವೆ ಜಟಪಾಟಿ ನಡೆಯುತ್ತಿದ್ದು, ಟ್ರಾಯ್ ಸಂಸ್ಥೆ ಟೆಲಿಕಾಂ ನಿಯಂತ್ರಕ ತೀರ್ಪುನ್ನು ನೀಡುವ ಮೂಲಕ ಅವರ ಕಿತ್ತಾಟಕ್ಕೆ ಬ್ರೇಕ್ ಹಾಕಿದೆ. ಸೆಲ್ಯುಲಾರ್ ಮೊಬೈಲ್ ನೆಟ್‌ವರ್ಕ್‌ಗೆ ಬರುವ ಒಳ ಕರೆಗಳ ನಿಯಂತ್ರಣಕ್ಕಾಗಿ ಟೆಲಿಫೋನ್ ಸೇವೆಗಳ ಆಪರೇಟರ್‌ಗಳು 30 ಸೆಕೆಂಡುಗಳ ಸಮಯವನ್ನು ಕಡ್ಡಾಯವಾಗಿ ಮಾಡಬೇಕು ಎಂದು ಟ್ರಾಯ್ ಹೇಳಿದೆ.