Advertisement

ಮದುವೆಗೆ ಬರುವಂತೆ ಅಲಂಕರಿಸಿದ ಕಾರುಗಳಲ್ಲಿ ಬಂದು ಐಟಿ ದಾಳಿ; 390 ಕೋಟಿ ರೂ. ಪತ್ತೆ!

12:36 PM Aug 11, 2022 | Team Udayavani |

ಮಹಾರಾಷ್ಟ್ರ: ಇತ್ತೀಚೆಗೆ ಮಹಾರಾಷ್ಟ್ರದ ಜಲ್ನಾದಲ್ಲಿ ಬಾಲಿವುಡ್ ಸಿನಿಮಾಗಳಲ್ಲಿ ತೋರಿಸುವ ರೀತಿಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿರುವ ವಿಷಯ ಬಹಿರಂಗವಾಗಿದೆ.

Advertisement

ಇದನ್ನೂ ಓದಿ:ಚಿಕ್ಕಮಗಳೂರು ಎಸ್ ಪಿ ಗೆ ಭಾವಪೂರ್ಣ ಬೀಳ್ಕೊಡುಗೆ: ಹೂಮಳೆಗೈದ ಸಿಬ್ಬಂದಿ

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಲು ಬಂದಿದ್ದಾರೆ ಎಂಬ ವಿಷಯ ಯಾರಿಗೂ ತಿಳಿಯಬಾರದೆಂದು ಅಧಿಕಾರಿಗಳು ವರನ ಸಂಬಂಧಿಕರು ವಿವಾಹ ಸಮಾರಂಭಕ್ಕೆ ಆಗಮಿಸುವಂತೆ ಕಾರುಗಳನ್ನು ಅಲಂಕರಿಸಿಕೊಂಡು ಬಂದಿದ್ದರು. ಈ ಮೂಲಕ ಸುಮಾರು ಎಂಟು ದಿನಗಳ ಕಾಲದ ದಾಳಿಯಲ್ಲಿ 390ಕೋಟಿ ರೂಪಾಯಿ ಅಕ್ರಮ ಆಸ್ತಿಯನ್ನು ಜಲ್ನಾದಲ್ಲಿ ಪತ್ತೆ ಹಚ್ಚಿದ್ದರು.

ಸ್ಟೀಲ್ ವಸ್ತುಗಳ ಉತ್ಪಾದನೆಗೆ ಮಹಾರಾಷ್ಟ್ರದ ಜಲ್ನಾ ತುಂಬಾ ಜನಪ್ರಿಯ. ಆದರೆ ಇದೀಗ ಜಲ್ನಾ ಕಾನೂನು ಬಾಹಿರ ಸ್ಟೀಲ್ ಉತ್ಪಾದನಾ ಘಟಕಗಳತ್ತ ಆದಾಯ ತೆರಿಗೆ ಅಧಿಕಾರಿಗಳ ದೃಷ್ಟಿ ನೆಟ್ಟಿದೆ ಎಂದು ವರದಿ ವಿವರಿಸಿದೆ.

ಜಲ್ನಾದ ಸ್ಟೀಲ್ ಕಂಪನಿಯ ಫ್ಯಾಕ್ಟರಿ, ಮನೆಗಳು, ಫಾರ್ಮ್ ಹೌಸ್ ಮತ್ತು ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ 58 ಕೋಟಿ ರೂಪಾಯಿ ನಗದು, 32 ಕೆಜಿ ಚಿನ್ನಾಭರಣಗಳು, 16 ಕೋಟಿ ರೂ. ಮೌಲ್ಯದ ವಜ್ರಾಭರಣಗಳನ್ನು ಪತ್ತೆ ಹಚ್ಚಿದ್ದರು. ಅಲ್ಲದೇ ಸುಮಾರು 300 ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ವರದಿ ತಿಳಿಸಿದೆ.

Advertisement

ಆಗಸ್ಟ್ 1ರಂದು ದಾಳಿ ನಡೆಸಿದ್ದು, ಸುಮಾರು ಎಂಟು ದಿನಗಳವರೆಗೆ ಶೋಧ ಕಾರ್ಯ ನಡೆಸಿ, ಅಪಾರ ಪ್ರಮಾಣದ ಆಸ್ತಿ, ಪಾಸ್ತಿಗಳನ್ನು ಪತ್ತೆ ಹಚ್ಚಿರುವುದಾಗಿ ವರದಿ ಹೇಳಿದೆ. ಸುಮಾರು 16 ಗಂಟೆಗಳ ಕಾಲ ನಗದನ್ನು ಎಣಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next