Advertisement

ಪಠ್ಯಗಳಲ್ಲಿ ಭಗವದ್ಗೀತೆ ಸೇರ್ಪಡೆ ಅಗತ್ಯ: ಗುರುವಂದನೆ ಸ್ವೀಕರಿಸಿ ಅದಮಾರು ಹಿರಿಯ ಶ್ರೀ

02:08 AM Jul 12, 2022 | Team Udayavani |

ಉಡುಪಿ: ಜೀವನದಲ್ಲಿ ಸಾಧನೆಯ ಹಾದಿಗೆ ಸ್ಫೂರ್ತಿಯಾಗಿರುವ ಭಗವದ್ಗೀತೆಯನ್ನು ಶಾಲಾ ಪಠ್ಯಪುಸ್ತಕಗಳಲ್ಲಿ ಸೇರ್ಪಡೆ ಗೊಳಿಸುವ ಅಗತ್ಯವಿದೆ. ಕನಿಷ್ಠ ದಿನಕ್ಕೆ 5 ಶ್ಲೋಕಗಳನ್ನಾದರೂ ಮನೆಯಲ್ಲಿ ಎಲ್ಲರೂ ಪಠನ ಮಾಡಬೇಕು ಎಂದು ಅದಮಾರು ಹಿರಿಯ ಯತಿ ಶ್ರೀ ವಿಶ್ವ ಪ್ರಿಯತೀರ್ಥ ಸ್ವಾಮೀಜಿ ಹೇಳಿದರು.

Advertisement

ಸೋಮವಾರ ಪೂರ್ಣಪ್ರಜ್ಞ ಆಡಿಟೋರಿ ಯಂನಲ್ಲಿ ನಡೆದ ಶ್ರೀಗಳ ಸನ್ಯಾಸದೀಕ್ಷಾ ಸುವರ್ಣ ಮಹೋತ್ಸವದಲ್ಲಿ ಗುರುವಂದನೆ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು.

ಭಗವದ್ಗೀತೆ ಪಠ್ಯಕ್ಕೆ ಸೇರಿಸಿದರೆ ಎಲ್ಲಿ ಕೇಸರೀಕರಣವಾಗುತ್ತದೆಯೋ ಎಂಬ ಭಯ ಕೆಲವರಿಗಿದೆ. ನಮ್ಮ ರಾಷ್ಟ್ರಧ್ವಜದ ಮೇಲಿರುವ ಮೊದಲ ಬಣ್ಣವೇ ಕೇಸರಿ. ಇದು ತ್ಯಾಗದ ಸಂಕೇತವಾಗಿದೆ. ಆದರೆ ನಮ್ಮ ಜನರು ತ್ಯಾಗಕ್ಕೆ ಸಿದ್ಧರಿಲ್ಲ. ಭೋಗಕ್ಕೆ ಸಿದ್ಧರಿದ್ದಾರೆ. ದೇವರು, ದೇಶದ ಮೇಲೆ ನಿಷ್ಠೆ ಇಲ್ಲದವರಿಗೆ ಕೆಂಪು (ಡೇಂಜರ್‌) ಬಣ್ಣವೇ ಸೂಕ್ತ ಎಂದರು.

ಕೃತಿ ಬಿಡುಗಡೆ, ಪ್ರಶಸ್ತಿ ಪ್ರದಾನ
ಓಂಪ್ರಕಾಶ ಭಟ್‌ ಮತ್ತು ದೇವಿದಾಸ್‌ ಸಂಪಾದಕತ್ವದಲ್ಲಿ ಹೊರತಂದಿರುವ “ಕೃಷ್ಣಪ್ರಿಯ- ವಿಶ್ವಪ್ರಿಯ’ ಕೃತಿ ಮತ್ತು 2020-22ರ ಅದಮಾರು ಪರ್ಯಾಯದ ಸ್ಮರಣ ಸಂಚಿಕೆ “ವಿಶ್ವಪ್ರಿಯ-ಈಶಪ್ರಿಯ’ ಕೃತಿಯನ್ನು ಉಭಯ ಶ್ರೀಗಳು ಬಿಡುಗಡೆ ಮಾಡಿದರು. ಯಕ್ಷಗಾನ ಕಲಾವಿದ ಪೆರುವೋಡಿ ನಾರಾಯಣ ಭಟ್ಟ ಮುತ್ತೂರು ಅವರಿಗೆ 50 ಸಾವಿರ ರೂ. ನಗದು ಪುರಸ್ಕಾರ ಸಹಿತ “ಶ್ರೀ ನರ‌ಹರಿತೀರ್ಥ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ವಿದ್ವಾನ್‌ ಶ್ರೀನಿವಾಸ ಆಚಾರ್ಯ ಕರ್ನೂಲು ಅಭಿವಂದನ ಭಾಷಣ ಮಾಡಿದರು. ಪಾಂಡಿಚೇರಿಯ ಋಷಿ ಧರ್ಮ ಫೌಂಡೇಶನ್‌ ಅಧ್ಯಕ್ಷ ಡಿ.ಎ. ಜೋಸೆಫ್, ಶಾಸಕ ರಘುಪತಿ ಭಟ್‌, ಮಹಾಲಕ್ಷ್ಮೀ ಬ್ಯಾಂಕ್‌ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಶಾರದಾ ವಿದ್ಯಾಲಯದ ಸಂಚಾಲಕ ಎಂ.ಬಿ. ಪುರಾಣಿಕ್‌ ಉಪಸ್ಥಿತರಿದ್ದರು. ಶ್ರೀಕೃಷ್ಣ ಸೇವಾ ಬಳಗದ ಸಂಚಾಲಕ ಗೋವಿಂದರಾಜ್‌ ಸ್ವಾಗತಿಸಿದರು. ವಿ| ಶ್ರೀನಿವಾಸ ಪೆಜತ್ತಾಯ ಪ್ರಸ್ತಾವನೆ ಗೈದರು. ಗಣೇಶ್‌ ಹೆಬ್ಟಾರ್‌ ವಂದಿಸಿ, ಡಾ| ಟಿ.ಎಸ್‌. ರಮೇಶ್‌ ನಿರೂಪಿಸಿದರು.

Advertisement

ರಾಷ್ಟ್ರ ಭಕ್ತಿ ಜಾಗೃತವಾಗಲಿ
ಅದಮಾರು ಕಿರಿಯ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಮಾತನಾಡಿ, ಜ್ಞಾನ ಸಂಪಾದನೆಗೆ ದೇವರು ಮಾನವ ಶರೀರ ನೀಡಿದ್ದಾನೆ. ಈ ವಿಚಾರವನ್ನು ತಿಳಿದವರು ಸಾಧಕರಾಗುತ್ತಾರೆ. ದೇಹವನ್ನು ಜ್ಞಾನಕ್ಕಾಗಿ ಮೀಸಲಿಡಬೇಕು. ಇದಕ್ಕೆ ಗುರುಗಳ ಕೃಪೆ ಅಗತ್ಯ. ಯಾವುದೇ ದೇಶದಲ್ಲಿ ಸಾಧನೆಗೆ ಪೂರಕ ವಾತಾ ವರಣವಿರಬೇಕು. ಸಮಾನ ಚಿಂತನೆಗಳನ್ನು ಹೊಂದಿರುವ ವರ್ಗ ಬೇಕು. ಇದಕ್ಕಾಗಿ ಎಲ್ಲರಲ್ಲೂ ರಾಷ್ಟ್ರ ಭಕ್ತಿ ಜಾಗೃತವಾಗಬೇಕು ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next